ಬೆಂಗಳೂರು: ಭಾರತಕ್ಕೆ ಶ್ರೀಕೃಷ್ಣನ ರೂಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಂದಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಕುಂಬಾರರ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅವರು ಸಾಬ್ರು ನಮ್ಮ ಹಿಂದೆ ಇದ್ದಾರೆ. ಉಳಿದವರ ವೋಟ್ ಅನ್ನು ಹೇಗೆ ಪಡೆಯಬಹುದು ಅಂದ್ಕೊಂಡಿದ್ದಾರೆ. ಆದರೆ ಆ ಕಾಲ ಹೋಯ್ತು. ಈಗ ನರೇಂದ್ರ ಮೋದಿ ಶ್ರೀಕೃಷ್ಣನ ರೂಪದಲ್ಲಿ ಬಂದಿದ್ದಾರೆ ಎಂದು ತಿಳಿಸಿದರು.
Advertisement
Advertisement
ನನ್ನನ್ನು ಕುರುಬರು, ಬ್ರಾಹ್ಮಣರು, ಲಿಂಗಾಯತರು, ಓಬಿಸಿ ಕೈಬಿಟ್ಟಿಲ್ಲ. ಆದರೆ ಸಾಬ್ರು ಒಬ್ರು ವೋಟ್ ಹಾಕಿಲ್ಲ. ಅವರ ಓಟು ನನಗೆ ಬೇಡ ಎಂದರು.
Advertisement
ಕೆಲವರು ನಾನೇ ಸಿಎಂ ನಾನೇ ಸಿಎಂ ಅಂತಾರೆ. ಹಿಂದುಳಿದ ವರ್ಗದ ನಾಯಕ ನಾನೇ ನಾನೇ ಅಂತ ಹೇಳ್ತಾರೆ. ಸಾಮಾಜಿಕ ನ್ಯಾಯ ಅಂದ್ರೆ ನಾನೇ ಅಂತಾರೆ. ಆದರೆ ಅವರು ಜಾತೀವಾದಿಗಳು ಅಂತ ಪ್ರೂವ್ ಮಾಡ್ತಿದ್ದಾರೆ ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದರು. ಇದನ್ನೂ ಓದಿ: ನಿಮ್ಮದೆಲ್ಲಾ ಬಯಲಿಗೆ ಎಳೆಯುತ್ತೇನೆ ಜಸ್ಟ್ ವೇಟ್: ಎಂ.ಸಿ.ಸುಧಾಕರ್‌ಗೆ ಸಚಿವ ಸುಧಾಕರ್ ವಾರ್ನಿಂಗ್
Advertisement
ಒಕ್ಕಲಿಗರೆಲ್ಲ ನನ್ನ ಹಿಂದೆ ಬನ್ನಿ ಅಂತಂದವರು ಜಾತಿವಾದಿಗಳು. ಎಸ್‍ಎಂ ಕೃಷ್ಣ ನಂತರ ನಾನೇ ಸಿಎಂ ಅಂತ ಜಾತಿವಾದಿಗಳಾಗಿದ್ದಾರೆ. ಬಿಜೆಪಿಯವರನ್ನು ಕೋಮುವಾದಿಗಳು ಅಂತ ಕರಿತಾರೆ. ಭಾರತಾಂಬೆಯನ್ನೂ ಪೂಜಿಸುವ ಬಿಜೆಪಿ ಕೋಮುವಾದಿಯಾ? ಎಂದು ಡಿಕೆಶಿಗೆ ಟಾಂಗ್ ನೀಡಿದರು.
ಸರಿ ತಪ್ಪು ಅಂತ ಚರ್ಚೆ ಮಾಡುವ ಕಾಲ ದೇಶದಲ್ಲಿ ಇಲ್ಲ. ಕಾಂಗ್ರೆಸ್‍ನಲ್ಲಿ ಹೇಳೋರೂ ಇಲ್ಲ ಕೇಳೋರೂ ಇಲ್ಲ. ಇವತ್ತಿನ ಕಾಂಗ್ರೆಸ್‍ನಲ್ಲಿ ತಿಹಾರ್ ಜೈಲಿಗೆ ಹೋಗಿ ಬಂದ ಡಿಕೆಶಿವಕುಮಾರ್, ಪರಪ್ಪನ ಅಗ್ರಹಾರಕ್ಕೆ ಹೋಗಿ ಬಂದ ನಲಪಾಡ್ ಇದ್ದಾರೆ. ನಾನು ಒಕ್ಕಲಿಗ, ನನ್ನ ಸಿಎಂ ಮಾಡಿ ಅನ್ನೋ ಜಾತಿವಾದಿ ಕಾಂಗ್ರೆಸ್ ಈಗ ಉಳಿದಿರುವುದು. ಜಾತಿವಾದಿಗಳಿಂದಲೇ ಕಾಂಗ್ರೆಸ್ ತುಂಬಿ ಹೋಗಿದೆ. ಸ್ವಾತಂತ್ರ್ಯಕ್ಕೆ ಹೋರಾಡಿದ ಯಾರೂ ಕಾಂಗ್ರೆಸ್‍ನಲ್ಲಿ ಉಳಿದಿಲ್ಲ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಗೋವಾದಲ್ಲಿ ಪುತ್ರಿಯ ಅಕ್ರಮ ಬಾರ್- ಸ್ಮೃತಿ ಇರಾನಿಯನ್ನು ವಜಾಗೊಳಿಸುವಂತೆ ಮೋದಿಗೆ ಒತ್ತಾಯ
ಜಾತಿವಾದಿಗಳು ಸಮಾಜವಾದದ ಬಗ್ಗೆ ಮಾತಾಡ್ತಾರೆ. ಯಾರು ಜಾತಿ ವಾದಿಗಳು ಯಾರು ಕೋಮುವಾದಿಗಳು ಅನ್ನೋದನ್ನು ಜನರೇ ತೀರ್ಮಾನ ಮಾಡ್ತಾರೆ. ಸಿದ್ದರಾಮಯ್ಯ ಡಿಕೆಶಿವಕುಮಾರ್ ಇಬ್ಬರೇ ಸಾಕು ಕಾಂಗ್ರೆಸ್ ನಿರ್ನಾಮ ಮಾಡುವುದಕ್ಕೆ ಸಿದ್ದರಾಮಯ್ಯ ಎಲ್ಲಿ ನಿಂತರೂ ಸ್ಕ್ರೀನಿಂಗ್ ಅಂತ ಗೊತ್ತು ಅವರಿಗೆ ಪರಮೇಶ್ವರನ್ನು ಸೋಲಿಸಿದ್ದು ನಾನಲ್ಲ ಅಂತ ಸಿದ್ದರಾಮಯ್ಯ ಹೇಳಿಬಿಡಲಿ ನೋಡೋಣ ಎಂದರು.