ಶಿವಮೊಗ್ಗ: ಸಿದ್ದರಾಮಯ್ಯ (siddaramaiah), ಡಿಕೆಶಿ ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿ (BJP) ನಾಯಕರು ಯಾರು ಜಾತಿ ರಾಜಕಾರಣ ಮಾಡಲ್ಲ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (KS Eshwarappa) ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಲಿಂಗಾಯತ ಸಮುದಾಯದ ಬಗ್ಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ಲಿಂಗಾಯತ ಸಮಾಜಕ್ಕೆ ಕಾಂಗ್ರೆಸ್ ಪಕ್ಷ ಮಾಡಿದ ದ್ರೋಹ ಯಾರು ಮಾಡಿಲ್ಲ. ಲಿಂಗಾಯತರಿಗೆ ಮಾಡಿದ ದ್ರೋಹದಿಂದಾಗಿ ಅವರ ಸರ್ಕಾರ ಕಳೆದುಕೊಂಡರು. ಸಿದ್ದರಾಮಯ್ಯ ಅವರು ಮಾಡಿದ ತಪ್ಪನ್ನು ವರುಣದಲ್ಲಿ ಈ ಬಾರಿ ಅನುಭವಿಸುತ್ತಾರೆ. ರಾಜ್ಯದ ಜನ ಜಾತಿ ರಾಜಕಾರಣಕ್ಕೆ ಬೆಂಬಲಿಸಲ್ಲ. ರಾಷ್ಟ್ರೀಯ ವಿಚಾರಕ್ಕೆ ಬೆಂಬಲ ಕೊಡ್ತಾರೆ. ಕಾಂಗ್ರೆಸ್‍ನವರ (Congress) ಪಾಪ ತುಂಬಿದೆ. ಈ ಬಾರಿ ಸಿದ್ದರಾಮಯ್ಯ, ಡಿಕೆಶಿ ಇಬ್ಬರು ಸೋಲುತ್ತಾರೆ ಎಂದು ಹೇಳಿದರು.
Advertisement
Advertisement
ಸಿದ್ದರಾಮಯ್ಯ ಅವಕಾಶವಾದಿ ರಾಜಕಾರಣ. ಯಾವ ಸಂದರ್ಭದಲ್ಲಿ ಏನು ಬೇಕಾದರೂ ಮಾತನಾಡಬಹುದು. ದುರಂಹಕಾರದಿಂದಾಗಿ ಕಳೆದ ಬಾರಿ ಚಾಮುಂಡೇಶ್ವರಿಯಲ್ಲಿ ಸೋತರು. ಅದೇಗೋ ಬಾದಾಮಿಯಲ್ಲಿ ನಿಂತು ಗೆದ್ದರು. ಈ ಬಾರಿ ಒಂದೇ ಕಡೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದಾರೆ. ವರುಣ ಜನ ಈ ಬಾರಿಯೂ ಸೋಲಿಸಿ ಮನೆಗೆ ಕಳುಹಿಸುತ್ತಾರೆ. ಕಳೆದ ಬಾರಿ ಕಾಂಗ್ರೆಸ್ ಗೆ ವಿರೋಧ ಪಕ್ಷ ಸ್ಥಾನವಾದರೂ ಸಿಕ್ಕಿತ್ತು. ಈ ಬಾರಿ ಅದು ಸಿಗುವುದಿಲ್ಲ ಎಂದ ಅವರು ಸಿದ್ದರಾಮಯ್ಯ ಮೊದಲು ಶಾಸಕರಾಗಿ ಗೆದ್ದು ಬರಲಿ ಆಮೇಲೆ ಮುಖ್ಯಮಂತ್ರಿ ಹುದ್ದೆ ಬಗ್ಗೆ ಮಾತನಾಡಲಿ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಪ್ರಚಾರದ ವೇಳೆ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಬಿಜೆಪಿ ಕಾರ್ಯಕರ್ತರು ಚಾಕುವಿನಿಂದ ಹಲ್ಲೆ ಆರೋಪ
Advertisement
Advertisement
ರಾಹುಲ್ ಗಾಂಧಿ (rahul Gandhi) ಭೇಟಿ ವಿಚಾರವಾಗಿ ಮಾತನಾಡಿದ ಅವರು, ರಾಹುಲ್ ಗಾಂಧಿ ಬರಬೇಕು. ರಾಹುಲ್ ಗಾಂಧಿ ಹೋದ ಕಡೆಯಲ್ಲೆಲ್ಲಾ ಕಾಂಗ್ರೆಸ್ ಸೋಲುತ್ತಿದೆ. ಉತ್ತರ ಪ್ರದೇಶದಲ್ಲಿ ಅವರು ಪ್ರಚಾರ ಮಾಡಿದ ಕಡೆ ಸೋಲು ಅನುಭವಿಸಿತು. ರಾಜ್ಯಕ್ಕೂ ಬರಲಿ ಅವರು ಪ್ರಚಾರ ಮಾಡಲಿ. ಶಿವಮೊಗ್ಗಕ್ಕೂ ಬರಲಿ, ನಮ್ಮ ಅಭ್ಯರ್ಥಿ ಪರ ಪ್ರಚಾರ ಮಾಡಲಿ. ನಾನೇ ಅವರಿಗೆ ಹೆಲಿಕಾಪ್ಟರ್ ಮಾಡಿಕೊಡುತ್ತೇನೆ. ನಮ್ಮ ಅಭ್ಯರ್ಥಿ ಚನ್ನಬಸಪ್ಪ ಪರ ಗೆಲುವಿಗೆ ಸಹಕಾರಿ ಆಗಲಿ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಲಿಂಗಾಯತರೆಲ್ಲಾ ಭ್ರಷ್ಟರು ಎಂದು ನಾನು ಹೇಳಲೇ ಇಲ್ಲ: ಸಿದ್ದರಾಮಯ್ಯ ಸ್ಪಷ್ಟನೆ