ಶಿವಮೊಗ್ಗ: ಡಿ.ಕೆ ಶಿವಕುಮಾರ್ (DK Shivakumar) ಅವರು ಜೈಲಿನಿಂದ ಬಿಡುಗಡೆಯಾಗಿ ಬೆಂಗಳೂರಿನಿಂದ ಮೆರವಣಿಗೆಯಲ್ಲಿ ಬಂದಿದ್ದು ನೋಡಿ ಕೇಸ್ ಖುಲಾಸೆಯಾಗಿದೆ ಅಂದುಕೊಂಡಿದ್ದೆ. ಇಷ್ಟು ಭಂಡತನ ನಾನು ನೋಡಿರಲಿಲ್ಲ, ಇಂದಲ್ಲ ನಾಳೆ ಮತ್ತೆ ಅವರು ಜೈಲಿಗೆ ಹೋಗಲಿದ್ದಾರೆ ಎಂದು ಮಾಜಿ ಸಚಿವ ಈಶ್ವರಪ್ಪ (KS Eshwarappa) ಭವಿಷ್ಯ ನುಡಿದಿದ್ದಾರೆ.
ಶಿವಮೊಗ್ಗದಲ್ಲಿ (Shivamogga) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಎಷ್ಟರ ಮಟ್ಟಿಗೆ ಅಕ್ರಮವಾಗಿ ಹಣ ಮಾಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಇದೇ ಕೇಸ್ ವಿಚಾರಕ್ಕೆ ಅವರು ಜೈಲಲ್ಲಿ ಇದ್ದರು. ಈಗ ಬೇಲ್ ಮೇಲೆ ಹೊರಗಿದ್ದಾರೆ. ಮತ್ತೆ ಜೈಲು ಸೇರಲಿದ್ದಾರೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಡಿಕೆಶಿ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್
Advertisement
Advertisement
ರಾಜ್ಯ ಸರ್ಕಾರ ಹಿಂದೂಗಳ ವಿರುದ್ಧ ಏನೆಲ್ಲಾ ಮಾಡಬೇಕು ಅದನ್ನೆಲ್ಲ ಮಾಡುತ್ತಿದೆ. ಅರಿಶಿನ ಹಾಗೂ ಕುಂಕುಮ ಬಳಸಬಾರದು ಎಂದು ನೇರವಾಗಿ ಹೇಳದೇ ಜಾಣತನದಿಂದ ಆದೇಶ ಹೊರಡಿಸಿದೆ. ಹಿಂದೂಗಳ ಕಾರ್ಯಕ್ರಮಕ್ಕೆ ಹಾಗೂ ಹಬ್ಬಗಳಿಗೆ ಷರತ್ತು ಹಾಕುತ್ತಿದೆ. ನಾವು ಕಾಂಗ್ರೆಸ್ ಸರ್ಕಾರ ಏಕೆ ಬೀಳಿಸಬಾರದು? ಬಿಜೆಪಿ ಏಕೆ ಪ್ರಯತ್ನ ಮಾಡಬಾರದು? ಎಂದು ಅವರು ಪ್ರಶ್ನಿಸಿದ್ದಾರೆ.
Advertisement
Advertisement
ಕಾಂಗ್ರೆಸ್ ಶಾಸಕರ ಇಪ್ಪತ್ತು ಜನರ ಗುಂಪಿದ್ದರೂ, ಬೆಳಗಾವಿಗೆ ಡಿಕೆಶಿ ಹೋದಾಗ ಸ್ವಾಗತ ಕೋರಲು ಒಬ್ಬ ಶಾಸಕನೂ ಹೋಗಿಲ್ಲ. ಕಾಂಗ್ರೆಸ್ ಶಾಸಕರಿಗೂ ಈ ಸರ್ಕಾರ ಬೇಡವಾಗಿದೆ. ಅವರೇ ರಾಜ್ಯ ಸರ್ಕಾರದ ವಿರುದ್ಧ ಹೇಳಿಕೆ ಕೊಡುತ್ತಿದ್ದಾರೆ. ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ. ಯಾವ ಇಲಾಖೆಯ ಕೆಲಸಗಳು ಆಗುತ್ತಿಲ್ಲ ಎಂದು ಅವರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಡಿಕೆಶಿ ಸ್ವಾಗತಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಹೋಗದಿರುವುದು ಎಂಟನೇ ಅದ್ಭುತ: ಮುನಿರತ್ನ ವ್ಯಂಗ್ಯ
Web Stories