ಶಿವಮೊಗ್ಗ: ಮುಂದೊಂದು ದಿನ ಕೆಂಪುಕೋಟೆ ಮೇಲೆ ಭಗವಾಧ್ವಜ ಹಾರಿಸುತ್ತೇವೆ ಎಂದಿದ್ದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ಆಪ್ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ದೆಹಲಿಯಲ್ಲಿ ದೂರು ದಾಖಲಿಸಿದ್ದಾರೆ.
ಈಶ್ವರಪ್ಪ ಬಂಧಿಸಬೇಕು ಅಂತ ನಾರ್ಥ್ ಅವೆನ್ಯೂ ಠಾಣೆಯಲ್ಲಿ ಕಂಪ್ಲೆಂಟ್ ಮಾಡಿ ಒತ್ತಾಯಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಯಾರೋ ಪ್ರಚಾರಕ್ಕಾಗಿ ದೂರು ನೀಡಿದ್ದಾರೆ ಅಷ್ಟೇ. ಇದ್ರಿಂದ ಏನು ಪ್ರಯೋಜನ ಇಲ್ಲ. ನನ್ನನ್ನು ಬಂಧಿಸೊಕೆ ಆಗಲ್ಲ. ಇಂಥಾ ನೂರು ಕೇಸ್ ದಾಖಲಾದ್ರೂ ಎದುರಿಸಲು ಸಿದ್ಧ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ದೇಶದಲ್ಲಿ ಬ್ಯಾನ್ ಆಗುತ್ತಾ ಪಿಎಫ್‍ಐ? – ಇಡಿಯಿಂದ 23 ಬ್ಯಾಂಕ್ ಖಾತೆ ಫ್ರೀಜ್
ನೂರೋ, ಇನ್ನೂರೋ, ಐನೂರೋ ವರ್ಷ ಬಿಟ್ಟು ಕೆಂಪು ಕೋಟೆ ಮೇಲೆ ಹಾರಿಸಬಹುದು ಎಂದು ನಾನು ಹೇಳಿದ್ದು ನಿಜ. ಅದು ಈಗ ಬಿದ್ದು ಹೋಗಿರುವ ಕಥೆ. ಈಗ ಯಾರೋ ಹೊಸಬರು ಪಾಪ ಅವರ ಹೆಸರು ಮಾಧ್ಯಮಗಳಲ್ಲಿ ಬರಲಿ ಎಂದು ಕೇಸ್ ಹಾಕಿದ್ದಾರೆ. ಇಂತಹ ನೂರು ಕೇಸ್ ಹಾಕಿದರು ನಾನು ಎದುರಿಸುತ್ತೇನೆ. ನನ್ನನ್ನ ಪುಕ್ಸಟೆ ಬಂಧಿಸೋಕೆ ನಾನೇನು ಕುರಿ, ಕೋಳಿ, ಎಮ್ಮೆನಾ? ಹಾಗೆಲ್ಲಾ ಬಂಧಿಸೋಕೆ ಆಗಲ್ಲ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಅನಂತ ರಾಜು ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್- ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ ರೇಖಾ..?
ನನ್ನ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ. ದೇಶದಲ್ಲಿ ಹಿಂದುತ್ವದ ಬಗ್ಗೆ ಹಿಂದೂ ಧರ್ಮದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಅಸೆಂಬ್ಲಿಯಲ್ಲೂ ಚರ್ಚೆಯಾಗಿದೆ. ಯಾವುದು ಕೂಡ ಕಾನೂನು ವಿರುದ್ಧವಾಗಿ ಈಶ್ವರಪ್ಪ ಮಾತನಾಡಿಲ್ಲ ಎಂದು ಸಿಎಂ ಹೇಳಿದ್ದರು. ಅದೇ ರೀತಿ ಸ್ಪೀಕರ್ ಹಾಗೂ ಕಾನೂನು ಸಚಿವರು ಕೂಡ ಹೇಳಿದ್ದಾರೆ. ಅದು ಈಗ ಬಿದ್ದು ಹೋಗಿರುವ ಕಥೆ ಎಂದರು.