ಮಡಿಕೇರಿ: ರಾಜ್ಯದಲ್ಲಿ ಜನಸ್ವರಾಜ್ ಅಲ್ಲ ಬಿಜೆಪಿಯದ್ದು ಬರ್ಬಾದ್ ಸಮಾವೇಶ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಕೆ. ಎಸ್. ಈಶ್ವರಪ್ಪ ಇದು ಕಾಂಗ್ರೆಸ್‍ನ್ನು ಬರ್ಬಾದ್ ಮಾಡುವ ಸಮಾವೇಶ, ರಾಜ್ಯದಲ್ಲಿ ಕಾಂಗ್ರೆಸ್ ಎಲ್ಲಿದೆ? ಎಂದು ಪ್ರಶ್ನೆ ಮಾಡಿದ್ದಾರೆ.
ಮಡಿಕೇರಿಯಲ್ಲಿ ಜನಸ್ವರಾಜ್ ಸಮಾವೇಶದಲ್ಲಿ ಮಾತಾನಾಡಿದ ಅವರು, ಕಾಂಗ್ರೆಸ್ ಈಗ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವಾಗಿದೆ. ಅದು ಕೂಡ ಯಾವಾಗ ಒಡೆದು ಹೋಗುತ್ತೋ ಗೊತ್ತಿಲ್ಲ. ಈಗಾಗಲೇ ಕಾಂಗ್ರೆಸ್ ರಾಜ್ಯದಲ್ಲಿ ಡಿಕೆಶಿ, ಸಿದ್ದರಾಮಯ್ಯ ಎರಡು ಬಣವಾಗಿದೆ. ಇಬ್ಬರಿಗೂ ನಾನು ಮುಖ್ಯಮಂತ್ರಿ ಅನ್ನೋದು ಈಗಾಗಲೇ ಅಸೆ ಬಂದಿದೆ. ಕಾಂಗ್ರೆಸ್ ಸಮಾವೇಶಗಳಲ್ಲಿ ಸಿದ್ದರಾಮಯ್ಯ ಡಿಕೆಶಿ ಇಬ್ಬರ ಪರವಾಗಿ ಎರಡು ಬಣದ ಕಾರ್ಯಕರ್ತರು ಘೋಷಣೆ ಕೂಗುತ್ತಾರೆ. ಇಬ್ಬರಿಗೂ ಒಳಗೊಳಗೊಳಗೆ ಖುಷಿಯಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
Advertisement
Advertisement
ಕಾಂಗ್ರೆಸ್‍ನಲ್ಲಿ ಯಾವ ಕಾರ್ಯಕರ್ತರ ಮೇಲೆ ಇದುವರೆಗೆ ಯಾರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದಾರೆ? ಎಂಎಲ್‍ಸಿ ಚುನಾವಣೆ ಬಳಿಕ ಸಿಎಂ ಬದಲಾಗುತ್ತಾರೆಂದು ಶಾಸಕ ಪ್ರಿಯಾಂಕ ಖರ್ಗೆ ಹೇಳಿಕೆ ವಿಚಾರಕ್ಕೆ ತಿರುಗೇಟು ನೀಡಿದ ಈಶ್ವರಪ್ಪ ಸಿಎಂ ಮಾಡಿರೋದು ಪ್ರಿಯಾಂಕ ಖರ್ಗೆ ಅಲ್ಲ. ಇವನ ಮಾತಿಗೆ ಯಾರು ಬೆಲೆ ಕೊಡುತ್ತಾರೆ. ಅವನ ಮಾತಿಗೆ ಎಳ್ಳಷ್ಟು ಬೆಲೆ ಕೊಡಲ್ಲ ಎಂದು ಪ್ರಿಯಾಂಕ ಖರ್ಗೆ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಕಂಗನಾ ವಿರುದ್ಧ FIR ದಾಖಲಿಸುವಂತೆ ಸಿಖ್ ಸಮುದಾಯದ ಮನವಿ
Advertisement
Advertisement
ಮುಖ್ಯಮಂತ್ರಿ ಮಾಡಿದ್ದು ಬಿಜೆಪಿ ಶಾಸಕರು. ಬಿಜೆಪಿಯ ಕೇಂದ್ರ ನಾಯಕರು ಮುಖ್ಯಮಂತ್ರಿ ಮಾಡಿದ್ದು, ಅವರ ಪಕ್ಷದ ನಾಯಕರು ಈಗಾಗಲೇ ಹೊಡೆದಾಡುತ್ತಿದ್ದಾರೆ ಜಮೀರು ಮುಸ್ಲಿಂ ನಾಯಕರು ಅಂತ ಹೊಡೆದಾಡುತ್ತಿದ್ದಾರಲ್ಲ ಅದನ್ನು ಮೊದಲು ಪ್ರಿಯಾಂಕ ಖರ್ಗೆ ಸರಿ ಮಾಡಿಕೊಳ್ಳಲಿ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.