ಬೆಂಗಳೂರು: ನೀವು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ರಸ್ತೆಯಲ್ಲಿ ಹೋಗುವ ದಾಸಯ್ಯನೂ ಬರಲ್ಲ. ಒಂದು ನಾಯಿನೂ ಕೂಡ ನಿಮ್ಮ ಬಳಿ ಬಂದು ಮೂಸಲ್ಲ ಎಂದು ಸಿಎಂ ಹೇಳಿಕೆಗೆ ಮಾಜಿ ಡಿಸಿಎಂ ಈಶ್ವರಪ್ಪ ಅವಹೇನಕಾರಿ ಹೇಳಿಕೆ ಕೊಟ್ಟಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಈಶ್ವರಪ್ಪ, ಪ್ರಜಾಪ್ರಭತ್ವ ವ್ಯವಸ್ಥೆಯಲ್ಲಿ ಮತದಾರರಿಗೆ, ತಮಗೆ ಯಾರು ಬೇಕೋ ಆ ಅಭ್ಯರ್ಥಿಗೆ ವೋಟು ಹಾಕುವ ಪೂರ್ಣ ಸ್ವಾತಂತ್ರ್ಯ ಇದೆ. ಜನರು ವೋಟು ಹಾಕಿದ್ದಕ್ಕೆ ನೀವು ಮುಖ್ಯಮಂತ್ರಿ ಆಗಿದ್ದೀರಿ. ಆದರೆ ಈಗ ನಿಮ್ಮ ಮೈತ್ರಿ ಸರ್ಕಾರ ಸರಿಯಿಲ್ಲ. ಹೀಗಾಗಿ ದೇಶದಲ್ಲಿ ಮೋದಿ ಸರ್ಕಾರ ಬೇಕು ಎಂದು ಮೋದಿ ಅವರಿಗೆ ಜನರು ಮತ ಹಾಕಿದ್ದಾರೆ. ನಾವು ಎಂಎಲ್‍ಎ ಆದರೆ ನಮ್ಮ ಬಳಿ ಜನರು ಬರುತ್ತಾರೆ. ಅದೇ ರೀತಿ ನೀವು ಮುಖ್ಯಮಂತ್ರಿ ಎಂಬ ಕಾರಣಕ್ಕೆ ಜನರು ಕಷ್ಟ ಹೇಳಿಕೊಳ್ಳಲು ಜನರು ನಿಮ್ಮ ಬಳಿ ಬರುತ್ತಾರೆ ಎಂದು ಸಿಎಂ ಹೇಳಿಕೆ ಗರಂ ಆಗಿ ಉತ್ತರಿಸಿದ್ದಾರೆ.
Advertisement
Advertisement
ನೀವು ಜನರು ಕಷ್ಟವನ್ನು ಕೇಳಲು ಗ್ರಾಮ ವಾಸ್ತವ್ಯ ಮಾಡುತ್ತಿರುವುದು. ಈಗ ರೀತಿ ನಡೆದುಕೊಳ್ಳುವುದು ಸರಿಯಿಲ್ಲ. ಹೀಗಾಗಿ ನೀವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಿ. ನೀವು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ರಸ್ತೆಯಲ್ಲಿ ಹೋಗುವ ದಾಸಯ್ಯನೂ ಬರಲ್ಲ. ಒಂದು ನಾಯಿನೂ ಕೂಡ ನಿಮ್ಮ ಬಳಿ ಬಂದು ಮೂಸಲ್ಲ. ನೀವು ಮುಖ್ಯಮಂತ್ರಿ ಅನ್ನೋ ಕಾರಣಕ್ಕೆ ಜನ ನಿಮ್ಮ ಬಳಿ ಬರುತ್ತಾರೆ ಎಂದು ಸಿಎಂ ಬಗ್ಗೆ ಅವಹೇಳಕಾರಿ ಹೇಳಿಕೆ ಕೊಟ್ಟಿದ್ದಾರೆ.
Advertisement
Advertisement
ಸಹಾಯ ಹೇಳಿ ಬಂದ ಜನರಿಗೆ ಸ್ಪಂದಿಸಿ. ಇಲ್ಲ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ನಿಖಿಲ್ ಸೋತು, ಪ್ರಜ್ವಲ್ ಗೆದ್ದಿರುವುದು ಸಿಎಂಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಆ ಸಿಟ್ಟನ್ನು ಜನರ ಮೇಲೆ ತೋರಿಸುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಇಂತ ಪೌರುಷ ನಡೆಯಲ್ಲ. ತುರ್ತು ಪರಿಸ್ಥಿತಿ ಹೇರಿದ್ದಕ್ಕೆ ಜನ ಇಂದಿರಾ ಗಾಂಧಿ ಮತ್ತು ಆ ಪಕ್ಷವನ್ನು ತಿರಸ್ಕಾರ ಮಾಡಿದ್ದರು. ಈಗ ನಿಮ್ಮನ್ನು ಇದೇ ರೀತಿ ಮಾಡುತ್ತಿದ್ದಾರೆ. ನೀವು ಗ್ರಾಮವಾಸ್ತವ್ಯಕ್ಕೆ ಹೋಗುವ ಮೊದಲು ಮೋದಿಗೆ ವೋಟು ಹಾಕಿದವರು ನನ್ನ ಬಳಿ ಬರಬೇಡಿ ಎಂದು ಬೋರ್ಡ್ ಹಾಕಿಕೊಳ್ಳಿ ಎಂದು ಸಿಎಂಗೆ ನೇರವಾಗಿ ಈಶ್ವರಪ್ಪ ಟಾಂಗ್ ಕೊಟ್ಟಿದ್ದಾರೆ.