ರಾಯಚೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನೂರಕ್ಕೆ ನೂರರಷ್ಟು ತಪ್ಪಿತಸ್ಥರಿದ್ದಾರೆ. ಹೀಗಾಗಿ ಡಿಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಲಿ ಎಂದು ಮಾಜಿ ಶಾಸಕ ಕೆ.ಎಸ್. ಈಶ್ವರಪ್ಪ (K.S Eshwarappa) ಆಗ್ರಹಿಸಿದ್ದಾರೆ.
ರಾಯಚೂರಿನ ಲಿಂಗಸುಗೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ತಿಂಗಳಲ್ಲಿ ಕ್ಲಿಯರ್ ಮಾಡಬೇಕು ಅಂತ ಕೋರ್ಟ್ ಹೇಳಿದೆ. ನೂರಕ್ಕೆ ನೂರರಷ್ಟು ನಂಬಿಕೆ ಇದೆ. ಆತ ತಪ್ಪಿತಸ್ಥ ಇದ್ದಾನೆ. ಅಕ್ರಮ ದುಡ್ಡು ಹೊಡೆದಿದ್ದಾನೆ. ಅಲ್ಲಿ ತನಕ ಡಿಸಿಎಂ ಸ್ಥಾನದಲ್ಲಿ ಇರಬಾರದು. ತಕ್ಷಣ ರಾಜೀನಾಮೆ ಕೊಡಬೇಕು. ಕೋರ್ಟ್ ಹೇಳಿದೆ ಮೂರು ತಿಂಗಳಲ್ಲಿ ತನಿಖೆ ಆಗಬೇಕು. ಆ ಬಳಿಕ ಮಂತ್ರಿ ಆಗಿ, ಇಲ್ಲ ಜೈಲಿಗೆ ಹೋಗಿ ಎಂದು ತಿಳಿಸಿದರು.
Advertisement
Advertisement
ಟಿವಿಯಲ್ಲೇ ಅವರ ಮನೆಯಲ್ಲಿ ಸಿಕ್ಕ ಬಂಡಲ್ ಗಟ್ಟಲೇ ನೋಟನ್ನು ನಾವು ನೋಡಿದ್ದು ಅದಕ್ಕಿಂತ ಸಾಕ್ಷಿಬೇಕಾ?. ಬಾಕ್ಸ್‍ಗಟ್ಟಲೇ ದಾಖಲೆ ಬಂತು ಅದಕ್ಕಿಂತ ದಾಖಲೆ ಬೇಕಾ..? ಈತ ಮೊದಲ ತನಿಖೆಯಲ್ಲಿಯೇ ತಪ್ಪಿತಸ್ಥ ಅಂತ ತಿಹಾರ್ ಜೈಲಲ್ಲಿಟ್ರು ಅದಕ್ಕಿಂತ ಸಾಕ್ಷಿ ಬೇಕಾ?, ಬೇಲ್‍ನಲ್ಲಿ ಹೊರಗೆ ಬಂದಿದ್ದಾರೆ ಎಂದರು. ಇದನ್ನೂ ಓದಿಲ
Advertisement
Advertisement
ಸಿಬಿಐ ವಿಚಾರದಲ್ಲಿ ಬಿಜೆಪಿ (BJP) ಹಸ್ತಕ್ಷೇಪ ವಿಚಾರದ ಕುರಿತು ಪ್ರತಿಕ್ರಿಯಿಸಿ, ನೋಡ್ರಿ ಕುಡಿದವನೇನೋ (ಡಿಕೆಶಿ) ಮಾತಾಡ್ತಾನೆ ಅಂತ ನಾನು ಉತ್ತರ ಕೊಡಬೇಕಾ..?. ಸುಪ್ರೀಂ ಕೋರ್ಟ್, ಲೋಕಾಯುಕ್ತ, ಸಿಬಿಐ ಇರೋದು ರಾಜಕಾರಣ ಮಾಡೋಕೆ ಅಲ್ಲ. ಯಾವಾಗ ನನ್ನ ಮೇಲೆ ಬಂದ್ರೆ ರಾಜಕಾರಣ. ಬೇರೆಯವರ ಮೇಲೆ ಬಂದ್ರೆ ಅದು ರಾಜಕಾರಣ ಅಲ್ಲ. ಎಲ್ಲಾ ಕಾಂಗ್ರೆಸ್ಸಿಗರು ಅಲ್ಲ ಇದು ಬರೀ ಡಿಕೆಶಿ ತಂತ್ರ ಎಂದು ತಿಳಿಸಿದರು.
Web Stories