ಸಿದ್ದರಾಮಯ್ಯನಂಥ ದ್ರೋಹಿಯನ್ನು ನಾನು ಎಂದೂ ನೋಡಿಲ್ಲ: ಈಶ್ವರಪ್ಪ

Public TV
2 Min Read
KS ESHWARAPPA

ಬಾಗಲಕೋಟೆ: ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯನಂಥ ದ್ರೋಹಿಯನ್ನು ಹಿಂದೆ ನೋಡಿಲ್ಲ, ಮುಂದೆಯೂ ನೋಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ (KS Eshwarappa) ಹರಿಹಾಯ್ದರು.

ಬಾಗಲಕೋಟೆ ನಗರದಲ್ಲಿ ಬಿಜೆಪಿ ಪಕ್ಷದ ಕಚೇರಿ ಉದ್ಘಾಟನೆಗೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ವೀಕ್ ಲೀಡರ್ ಅಂತ ಪದೇ ಪದೇ ಹೇಳ್ತಿರೋ ಸಿದ್ದರಾಮಯ್ಯಗೆ ಟಕ್ಕರ್ ನೀಡಿದರು. ಸಿದ್ದರಾಮಯ್ಯ ವೀಕ್ ಲೀಡರ್ ಆಗಿದ್ದಕ್ಕೆ ಸೋತಿದ್ದು. ಸ್ಟ್ರಾಂಗ್ ಸಿಎಂ ಆಗಿದ್ದರೆ ಯಾಕೆ ಸೋಲುತ್ತಿದ್ದರು ಎಂದು ಪ್ರಶ್ನಿಸಿದರು.

Siddaramaiah 7

ನಿಮ್ಮ ಅಪ್ಪ, ಅಮ್ಮ ಯಾರೂ ಅಂತಲೇ ನೀವು ಹೇಳ್ತಿಲ್ಲ. ಒಂದ್ಸಾರಿ ಬಾದಾಮಿ, ಒಂದ್ಸಾರಿ ಕೊಪ್ಪಳ ಅಂತೀರಿ, ಕೋಲಾರ ಅಂತೀರಿ, ಈಗ ವರುಣ ಅಂತೀರಿ. ನಿಮಗೆ ನಿಮ್ಮ ಅಪ್ಪ, ಅಮ್ಮ ಯಾರೂ ಅಂತಲೇ ಗೊತ್ತಿಲ್ಲ. ನಿಮ್ಮ ಕ್ಷೇತ್ರವೇ ಗೊತ್ತಿಲ್ಲ. ಕ್ಯಾಪ್ಟನ್‍ಗೆ ಪ್ಲೇಸ್ ಇಲ್ಲ, ಪಾಪ ಫಾಲೋವರ್ಸ್ ಗತಿಯೇನು? ಎಂದು ವ್ಯಂಗ್ಯವಾಡಿದರು.

CONGRESS

ಸಿದ್ದರಾಮಯ್ಯ ಆಡುವ ಆಟ ಬಿಜೆಪಿಯಲ್ಲಿ (BJP) ನಡೆಯಲ್ಲ. ರಾಜ್ಯದ ಜನರ ಮೇಲೂ ನಡೆಯಲ್ಲ, ಕಾಂಗ್ರೆಸ್‍ನಲ್ಲಿ (Congress) ಮಾತ್ರ ನಡೆಯೋದು. ಆಗ ಬಿಜೆಪಿ, ಕೆಜೆಪಿ ಒಡೆದು ಸಿದ್ದರಾಮಯ್ಯ ಸಿಎಂ ಆದರು. ಈಗ ಬಿಜೆಪಿ ಒಡೆಯಲು ಆಗ್ತಿಲ್ಲ. ಹೀಗಾಗಿ ಬೊಮ್ಮಾಯಿ ನಾಯಕತ್ವ ಸರಿಯಿಲ್ಲ ಅಂತಿದ್ದಾರೆ ಎಂದ ಅವರು, ಸಿದ್ದರಾಮಯ್ಯ ಜಾತಿ ಹೆಸರಲ್ಲಿ ವೋಟ್ ತೆಗೆದುಕೊಳ್ಳುವ ಪ್ರಯತ್ನ ಮಾಡ್ತಿದ್ದಾರೆ. ಕುರುಬರ, ಹಿಂದುಳಿದವರ, ಅಲ್ಪಸಂಖ್ಯಾತರ ನಾಯಕ ನಾನು ಅಂತಿದ್ದಾರೆ. ಆದರೆ ಅವರು ಎಲ್ಲ ಜನಾಂಗದ ನಾಯಕನಾಗಲು ಆಗಲ್ಲ, ಕುರುಬರ ನಾಯಕನೂ ಆಗುವುದಿಲ್ಲ ಎಂದರು. ಇದೇ ವೇಳೆ ಕೆಪಿಸಿಸಿ ಅಧ್ಯಕ್ಷನಾಗಿ ಡಿಕೆಶಿ ಬೇರೆಯವರಿಗೆ ಮಾರ್ಗದರ್ಶನ ಮಾಡುವ ರೂಪದಲ್ಲಿ ಇರಬೇಕು ಎಂದು ಡಿಕೆ.ಶಿವಕುಮಾರ್‌ಗೆ ಏಕವಚನದಲ್ಲಿ ಕರೆದರು. ಇದನ್ನೂ ಓದಿ: ಬಾಲಕಿಯ ಮೇಲೆ ಆ್ಯಸಿಡ್ ಎರಚಿದವರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿ: ಗೌತಮ್ ಗಂಭೀರ್

BJP

ನಡ್ಡಾ ಕಾರ್ಯಕ್ರಮದಲ್ಲಿ ಬಿಎಸ್‍ವೈ ಕಡೆಗಣನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಕೊಪ್ಪಳದಲ್ಲಿ ನಡೆಯಲಿರುವ ನಡ್ಡಾ ಕಾರ್ಯಕ್ರಮಕ್ಕೆ ಬಿಎಸ್‍ವೈ ಹೋಗಿದ್ದಾರೆ. ಬಿಜೆಪಿಯಲ್ಲಿ ಅಕಸ್ಮಾತ ಗೊಂದಲ ಬಂದರೆ, ನಮ್ಮ ಕೇಂದ್ರ ಹೈಕಮಾಂಡ್ ಗಟ್ಟಿಯಾಗಿದೆ. ಹೈಕಮಾಂಡ್ ಏನ್ ಸೂಚನೆ ನೀಡುತ್ತೆ ಅದನ್ನ ಪರಿಪಾಲನೆ ಮಾಡುವ ಪಕ್ಷ ನಮ್ಮದು. ನಮಗೆ ಹೇಳೋರು ಕೇಳೋರು ಇದ್ದಾರೆ. ಅಕಸ್ಮಾತ್ ಏನಾದ್ರು ಬಿಎಸ್‍ವೈ ವಿಚಾರದಲ್ಲಿ ಕಡೆಗಣನೆ ಆಗಿದ್ದರೇ, ಅದು ನಂಗೆ ಗೊತ್ತಿಲ್ಲ. ಹೈಕಮಾಂಡ್ ಸರಿ ಪಡಿಸುತ್ತದೆ ಎಂದರು. ಇದನ್ನೂ ಓದಿ: ನಕಲಿ ಡಾಕ್ಟರ್ ಎಡವಟ್ಟು – ಜ್ವರ ಎಂದು ಹೋದ ಮಹಿಳೆ ಕಾಲಿಗೆ ಗಂಡಾಂತರ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *