ಮಡಿಕೇರಿ: ಮನುವಾದಿಗಳು, ಪುರೋಹಿತಶಾಹಿಗಳು ಅಪಾಯಕಾರಿ ಎಂದು ಸಿದ್ದರಾಮಯ್ಯ ಹೇಳಿಕೆ ವಿಚಾರ ರಾಜ್ಯದಲ್ಲಿ ಸಿದ್ದರಾಮಯ್ಯನಂತಹ ಇಷ್ಟು ದುಷ್ಟನನ್ನು ಎಲ್ಲೂ ನೋಡಿಲ್ಲ ಎಂದು ಸಿದ್ದರಾಮಯ್ಯ (Siddaramaiah) ವಿರುದ್ಧ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (KS Eshwarappa) ವಾಗ್ದಾಳಿ ನಡೆಸಿದರು.
ಮಡಿಕೇರಿಯಲ್ಲಿ (Madikeri) ಮಾತಾನಾಡಿದ ಅವರು, ಮುಂಚೆ ಕುಂಕುಮ ಎಂದರೆ ಸಿದ್ದರಾಮಯ್ಯ ಬೆಚ್ಚಿ ಬೀಳುತ್ತಿದ್ದರು. ಆದರೆ ಇಂದು ಹಣೆತುಂಬ ಕುಂಕುಮ ಹಚ್ಚುತ್ತಾರೆ. ದೇವಸ್ಥಾನ, ಮಠಗಳನ್ನು ಬಿಟ್ಟು ಸಿದ್ದರಾಮಯ್ಯ ಬದುಕುತ್ತಿಲ್ಲ. ನಾನು ಯಾವ ಕಾರಣಕ್ಕೂ ಇವೆಲ್ಲವನ್ನು ಇನ್ನು ಮುಂದೆ ಮಾಡುವುದಿಲ್ಲ ಎಂದು ಸಿದ್ದು ಹೇಳಲಿ. ನಾವು ಮುಸಲ್ಮಾನರ ಪರ, ಗೋಹತ್ಯೆ ವಿರೋಧಿಸುತ್ತೇವೆ ಅಂತ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಲಿ ಎಂದು ಸವಾಲು ಹಾಕಿದರು.
ಬಿಜೆಪಿ ಮತಾಂತರ ವಿರೋಧಿಸುತ್ತೇವೆ, ಗೋವಿನಪರ. ನಾವು ಭಾರತೀಯ ಸಂಸ್ಕೃತಿಯ ಪರ ಇದ್ದೇವೆ. ಆದರೆ ನೀವು ಗೋವು ಕಡಿಯುತ್ತೇವೆ ನಮಗೆ ಮತಕೊಡಿ ಅಂತ ಕಾಂಗ್ರೆಸ್ ಹೇಳಲಿ ನೋಡೋಣ ಎಂದು ಪ್ರಶ್ನೆ ಮಾಡಿದ ಅವರು, ಸಿದ್ದರಾಮಯ್ಯ ಅವರು ನಾಮಪತ್ರ ಸಲ್ಲಿಸಲು ಹೋಗುವಾಗ ದೇವಾಸ್ಥಾನಕ್ಕೆ ಹೋಗಲ್ವ ಎಂದು ಈಶ್ವರಪ್ಪ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಪೊಲೀಸ್ ಹೆಸರಿನಲ್ಲಿ ನಟಿಯ ತಾಯಿ ಬಳಿ ಹಣ ಪೀಕಿದ ವ್ಯಕ್ತಿ
ಪೇಪರಿನಲ್ಲಿ ಹೆಡ್‌ಲೈನ್‌ಗಾಗಿ ಇದೆಲ್ಲ ನಾಟಕೀಯ ವ್ಯವಸ್ಥೆ. ಈ ನಾಟಕೀಯವನ್ನು ರಾಜ್ಯದ ಜನ ಒಪ್ಪಲಿಲ್ಲ. ಹೀಗಾಗಿ ಚಾಮುಂಡೇಶ್ವರಿಯಲ್ಲಿ ಜನರು ಸೋಲಿಸಿದ್ದಾರೆ. ಈಗ ರಾಜ್ಯದಲ್ಲಿ ಎಲ್ಲಿ ನಿಲ್ಲಬೇಕು ಎಂದು ಸಿದ್ದರಾಮಯ್ಯ ಹುಡುಕಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ದೇವರ ಹಣದಲ್ಲೂ ಕಮಿಷನ್ ಪಡೀತಿದ್ದಾರೆ: ಗೌರಿಶಂಕರ್ ವಿರುದ್ಧ ಸುರೇಶ್ ಗೌಡ ಆರೋಪ