ಹಾಸನ: ಯಾರನ್ನು ಮತ್ತೆ ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ, ಕೇಂದ್ರ ನಾಯಕರು ತೀರ್ಮಾನ ಮಾಡ್ತಾರೆ. ಅದಕ್ಕೆ ನಾವೆಲ್ಲರೂ ಬದ್ಧ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಹೇಳಿದರು.
ಹಾಸನದಲ್ಲಿ (Hassan) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಸಚಿವರಾಗುತ್ತಾರೆ ಎಂದು ಮುಖ್ಯಮಂತ್ರಿಗಳಿಗೆ ಗೊತ್ತು, ಅವರು ಕೇಂದ್ರ ನಾಯಕರ ಜೊತೆ ಚರ್ಚೆ ಮಾಡುತ್ತಾರೆ. ನಾನು ಸಚಿವ ಸ್ಥಾನದ ಆಕಾಂಕ್ಷಿ ಹೌದು, ಆದರೆ ಸಚಿವ ಸ್ಥಾನ ನೀಡುವುದರ ಕುರಿತು ತೀರ್ಮಾನ ಮಾಡುವುದು ಕೇಂದ್ರದ ನಾಯಕರು, ಮುಖ್ಯಮಂತ್ರಿಗಳಾಗಿದ್ದಾರೆ. ಅವರು ಸಚಿವ ಸ್ಥಾನ ಕೊಟ್ಟರೆ ತೆಗೆದುಕೊಳ್ಳುತ್ತೇನೆ ಎಂದರು.
Advertisement
Advertisement
ಷಡ್ಯಂತ್ರ ಮಾಡಿ ನನ್ನ ಮೇಲೆ ಕೇಸ್ ಹಾಕಿಸಿದ್ದಾರೆ ಎನ್ನುವುದು ಇಡೀ ರಾಜ್ಯದ ಬಿಜೆಪಿ (BJP) ಕಾರ್ಯಕರ್ತರಿಗೆ ಗೊತ್ತು. ಆ ಕೇಸ್‍ನಿಂದ ಮುಕ್ತರಾಗಿ ಬರಲಿ ಎಂದು ಎಲ್ಲರ ಅಪೇಕ್ಷಿಯಿತ್ತು. ಅದಾದ ಬಳಿಕ ಕೇಸ್‍ಗೆ ಸಂಬಂಧಿಸಿದಂತೆ ಕ್ಲೀನ್ ಚಿಟ್ ದೊರಕಿ, ಕೇಸ್ ಮುಕ್ತಾಯವಾಗಿತು. ಈಗ ತೀರ್ಮಾನ ಕೇಂದ್ರ ನಾಯಕರದ್ದು, ಬಹಳ ಚರ್ಚೆ ಮಾಡುವ ವಿಚಾರ ಏನಲ್ಲ ಎಂದರು.
Advertisement
ಭಾರತ್ ಜೋಡೋ ಯಾತ್ರೆಯಿಂದ (Bharat Jodo Yatra) ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದು ರಾಹುಲ್‍ಗಾಂಧಿ (Rahul Gandhi) ಬಳಿ ಸಿದ್ದರಾಮಯ್ಯ ಹೇಳಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಅವರು ಮೂರು ಜನ ವೆಂಕ, ನಾಣಿ, ಸೀನ ಇದ್ದಂಗೆ. ಇಂತಹ ಅನೇಕ ಯಾತ್ರೆಯನ್ನು ನಾವು ಮಾಡಿದ್ದೀವಿ. ಲಾಲ್ ಕೃಷ್ಣ ಅಡ್ವಾನಿಯವರು ಅಯೋಧ್ಯೆ ರಥಯಾತ್ರೆ ಮಾಡಿದ್ದರು. ಅದು ಯಶಸ್ವಿಯಾಯಿತು. ಆದಾದ ಮೇಲೆ ನರೇಂದ್ರ ಮೋದಿ, ಮುರುಳಿ ಮನೋಹರ್ ಜೋಶಿ ಅವರು ತಿರಂಗ ಯಾತ್ರೆ ಮಾಡಿದ್ದರು ಎಂದರು.
Advertisement
ಅಷ್ಟೇ ಅಲ್ಲದೇ ಆ ಸಂದರ್ಭದಲ್ಲಿ ಲಾಲ್ ಚೌಕ್‍ನಲ್ಲಿ ಪಾಕಿಸ್ತಾನದ ಧ್ವಜ ಹಾರಾಡುತ್ತಿತ್ತು. ಅದನ್ನು ಕಿತ್ತು ನಮ್ಮ ರಾಷ್ಟ್ರ ಧ್ವಜ ಹಾರಿಸಬೇಕು ಎಂದು ಆಗಿನ ಕಾಂಗ್ರೆಸ್ ಸರ್ಕಾರದ ಬಳಿ ಎಷ್ಟೇ ಮನವಿ ಮಾಡಿದರೂ ಅದು ಪ್ರಯೋಜನವಾಗಿರಲಿಲ್ಲ. ಅಷ್ಟೇ ಅಲ್ಲದೇ ಲಾಲ್ ಚೌಕ್‍ನಲ್ಲಿ ತ್ರಿವರ್ಣ ಧ್ವಜ ಹಾರಿಸಿದರೆ 10 ಲಕ್ಷ ರೂ, ಬಹುಮಾನವನ್ನು ಎಂದು ಅಲ್ಲಿನ ಉಗ್ರರು ಬೋರ್ಡ್ ಹಾಕಿದ್ದರು. ಆದರೆ ಆಗ ಕಾಂಗ್ರೆಸ್‍ನವರು ಆ ಸವಾಲು ಸ್ವೀಕರಿಸಲಿಲ್ಲ. ಆಗ ಭಾರತಮಾತೆ ಬಂಜೆಯಲ್ಲ, ಭಾರತ ಮಾತೆ ಮಕ್ಕಳು ನಾವ್ಯಾರು ಮೂರ್ಖರಲ್ಲ ಎಂದು ಮೋದಿಯವರು, ಮುರುಳಿ ಮನೋಹರ ಜೋಶಿಯವರು ತಿರಂಗ ಯಾತ್ರೆ ಮಾಡಿ ಅಲ್ಲಿದ್ದ ಪಾಕಿಸ್ತಾನ ಧ್ವಜ ಕಿತ್ತುಹಾಕಿ, ತ್ರಿವರ್ಣ ಧ್ವಜ ಹಾರಿಸಿದ್ದರು ಎಂದು ತಿಳಿಸಿದರು.
ಇದೇ ರೀತಿ ನಮ್ಮ ಯಾತ್ರೆಗಳು ಒಂದು ಗುರಿ ಇಟ್ಕಂಡು ಮಾಡುತ್ತಿದ್ದರು. ಬಡವರಿಗೆ ಸಹಾಯ ಆಗಲಿಎಂದು ಯಡಿಯೂರಪ್ಪ ಅವರು ಅನೇಕ ಯಾತ್ರೆ ಮಾಡಿದ್ದಾರೆ. ಆದರೆ ಕಾಂಗ್ರೆಸ್‍ನವರ ಯಾತ್ರೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರನ್ನು ಜೋಡಿಸುವುದೇ ಇವರ ಗುರಿ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹಿಂದೂಸ್ತಾನ, ಪಾಕಿಸ್ತಾನ ಅಂತ ಎರಡು ಭಾಗ ಮಾಡಿದರು ಎಂದು ಕಿಡಿಕಾರಿದ ಅವರು, ಅಧಿಕಾರದ ಆಸೆಯಿಂದ ಕಾಂಗ್ರೆಸ್‍ನ್ನು ಹಾಳು ಮಾಡಿತ್ತೀರಿ ವಿಸರ್ಜನೆ ಮಾಡಿ ಎಂದು ಅಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ಅದೇ ರೀತಿ ಇಂದು ಆಗಿದೆ. ಇಡಿ ದೇಶದಲ್ಲಿ ಕಾಂಗ್ರೆಸ್‍ನ್ನು ಬೂದುಗನ್ನಡಿ ಹಿಡಿದು ನೋಡಬೇಕಾದ ಪರಿಸ್ಥಿತಿ ಕಾಂಗ್ರೆಸ್‍ಗೆ ಬಂದಿದೆ ಎಂದು ಟೀಕಿಸಿದರು. ಇದನ್ನೂ ಓದಿ: BJPಯವರಿಗೆ ಮಾನ ಮುಚ್ಚಿಕೊಳ್ಳೋದೇ ಕಷ್ಟವಾಗಿದೆ – ದಿನೇಶ್ ಗುಂಡೂರಾವ್
ಇಡೀ ದೇಶದಲ್ಲಿ ಬಿಜೆಪಿ (BJP) ರಾಷ್ಟ್ರೀಯ ವಿಚಾರಗಳು, ಧರ್ಮ ರಕ್ಷಣೆ ಮಾಡುವ ವಿಚಾರ ಹೇಳಿ ಕೊಡುತ್ತಿದೆ. ಇದರಿಂದ ಬಿಜೆಪಿ ದೇಶದಲ್ಲಿ ಹೆಚ್ಚು ಸ್ಥಾನ ಗೆಲ್ಲುತ್ತಿದ್ದು, ಕೇಂದ್ರ ರಾಜ್ಯ ನಮ್ಮ ಕೈಲಿದೆ ಎಂದರು. ಇದನ್ನೂ ಓದಿ: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ – ಬಳ್ಳಾರಿಯಲ್ಲಿ ರಾಹುಲ್ ಮತದಾನ