ಶಿವಮೊಗ್ಗ: ಸಿದ್ದರಾಮಯ್ಯ ಮುಂದಿನ ಬಾರಿ, ಬದಾಮಿಯಿಂದ ಸ್ಪರ್ಧೆ ಮಾಡಲ್ಲ. ಇವರಿಗೆ ಜಮೀರ್ ಅಹಮದೇ ಗತಿ. ಮುಸಲ್ಮಾನರೇ ಇವರಿಗೆ ಕೈ ಹಿಡಿಯಬೇಕು. ಜಮೀರ್ ಕಾಲು ಹಿಡಿದು, ಚಾಮರಾಜಪೇಟೆಯಲ್ಲೇ ಸ್ಪರ್ಧೆ ಮಾಡುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಒಂದು ಮನೆಯೂ ಹಂಚಿಲ್ಲ ಎಂದಿದ್ದಾರೆ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯರಿಗೆ ಜ್ಞಾನ ಇಲ್ಲದಂತಾಗಿದೆ. ಮುಖ್ಯಮಂತ್ರಿಯಾಗಿದ್ದವರು, ವಿಪಕ್ಷ ನಾಯಕರಾಗಿರುವವರು ಮೊದಲು ತಿಳಿದುಕೊಂಡು ಮಾತನಾಡಿ. ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಮನೆ ಹಂಚೋಕೆ ಬರಲ್ಲ. ನೀವು ಅಜ್ಞಾನಿಯಾಗಿದ್ದೀರಾ. ನನಗೆ ಸಂಬಂಧವಿಲ್ಲದ ವಸತಿ ಇಲಾಖೆ ಬಗ್ಗೆ ನನಗೆ ಹೇಳುತ್ತಿರಲ್ಲ. ಪ್ರಚಾರ ಸಭೆಯಲ್ಲಿ ಬಿಜೆಪಿ ಬಗ್ಗೆ ಆರೋಪ ಮಾಡಲು ಕಾರಣವೇ ಇಲ್ಲ. ಹೀಗಾಗಿ ಇಲ್ಲಿಗೆ ಬಂದು ನನ್ನ ವಿರುದ್ಧ ಮಾತನಾಡಿದ್ದಾರೆ. ನಾನು ಏನಾದರೂ ಹೇಳುತ್ತೇನೆ, ಅದಕ್ಕೂ, ಇವನಿಗೂ ಸಂಬಂಧವೇನು? ಇವನ್ಯಾವನು ಇದನ್ನೆಲ್ಲಾ ಕೇಳೋಕೆ? ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಯಾರು? ಎಂದು ಏಕ ವಚನದಲ್ಲಿ ಟೀಕಿಸಿದರು. ಇದನ್ನೂ ಓದಿ: ಕೊರೊನಾ ಮನುಷ್ಯರಿಂದ ಪ್ರಾಣಿಗಳಿಗೆ ಹರಡುತ್ತದೆ – ಸಂಶೋಧನಾ ವರದಿ
ನಾನು ಹಿಂದುಳಿದ ನಾಯಕ ಆಗಲೂ ಹೊರಟಿಲ್ಲ. ಕುರುಬರ ನಾಯಕನಾಗಲು ಹೊರಟಿಲ್ಲ. ಇವರಿಗೆ ಯಾಕೆ ಪ್ರತಿಕ್ರಿಯಿಸಬೇಕು? ಯಡಿಯೂರಪ್ಪ ಅವರ ಕಣ್ಣೀರು, ಬಿಜೆಪಿಗೆ ಶಾಪ ತಟ್ಟುತ್ತೆ ಎಂದು ಡಿಕೆಶಿ ಪದೆ ಪದೇ ಹೇಳುತ್ತಾರೆ. ಡಿಕೆಶಿ ತಿಹಾರ್ ಜೈಲಿಗೆ ಹೋಗಿದ್ರಲ್ಲ ಆಗ ನಿಮ್ಮ ತಾಯಿ ಕಣ್ಣೀರು ಹಾಕಿದ್ರಲ್ಲ ಆ ಕಣ್ಣೀರು, ನಿಮಗೆ ಶಾಪ ತಟ್ಟುತ್ತೋ, ಕಾಂಗ್ರೆಸ್ ಗೆ ತಟ್ಟುತ್ತೋ? ಎಂದು ಕಿಡಿಕಾರಿದರು. ಇದನ್ನೂ ಓದಿ: ಲಸಿಕೆ ಪ್ರಮಾಣ ಪತ್ರ ಎಡವಟ್ಟು – ವ್ಯಾಕ್ಸಿನ್ ಪಡೆಯಲು ಬಂದಾತನಿಗೆ ಶಾಕ್