ಶಿವಮೊಗ್ಗ: ನಾನು ಇವತ್ತೇ ಮದುವೆ ಗಂಡು (Groom) ಆಗಲು ತಯಾರಾಗಿದ್ದೇನೆ ಎಂದು ಹೇಳುವ ಮೂಲಕ ತಾವು ಮಂತ್ರಿಯಾಗಲು(Minister) ಸಿದ್ಧರಿರುವುದಾಗಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ(KSEshwarappa) ಹೇಳಿದ್ದಾರೆ.
Advertisement
ಶಿವಮೊಗ್ಗದಲ್ಲಿ ಮಾಧ್ಯಮದವರು ಮಂತ್ರಿ ಸ್ಥಾನ ನೀಡದಿದ್ದಕ್ಕೆ ನೀವು ಅಸಮಾಧಾನಗೊಂಡಿದ್ದಾರಾ? ಇದಕ್ಕಾಗಿಯೇ ಸದನಕ್ಕೆ ಹಾಜರಾಗುತ್ತಿಲ್ಲವಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ ಅವರು, ಈ ಬಗ್ಗೆ ನಮ್ಮ ನಾಯಕರಾದ ಯಡಿಯೂರಪ್ಪ (Yediyurappa) ಹಾಗೂ ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರನ್ನು ಕೇಳಬೇಕು. ನನ್ನನ್ನು ಕೇಳಿದರೆ ನಾನು ಏನು ಹೇಳುವುದಕ್ಕೆ ಆಗುತ್ತದೆ. ಇವತ್ತು ಬಂದು ಮಂತ್ರಿ ಆಗು ಅಂದರೆ ಇವತ್ತೆ ಆಗುತ್ತೇನೆ ಇದೆಲ್ಲಾ ನನ್ನ ಕೈಯಲ್ಲಿ ಇಲ್ಲ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ (Basavraj Bommai), ಯಡಿಯೂರಪ್ಪ, ಕಟೀಲ್ ಹಾಗೂ ಕೇಂದ್ರದ ನಾಯಕರು ಚರ್ಚೆ ಮಾಡಬೇಕು. ಆದರೆ ಏಕೆ ಅವರು ಯಾಕೆ ಹಿಂದೆ ಮುಂದೆ ನೋಡುತ್ತಿದ್ದಾರೆ ಗೊತ್ತಿಲ್ಲ ಎಂದಿದ್ದಾರೆ.
Advertisement
Advertisement
ಎಷ್ಟು ಖಾಲಿ ಇದೆಯೋ ಅದೆಲ್ಲಾ ಭರ್ತಿ ಮಾಡಲಿ ಎನ್ನುವುದು ನನ್ನ ಅಪೇಕ್ಷೆ. ಆರೋಪ ಮುಕ್ತರಾದ ಮೇಲೆ ಅವಕಾಶ ಕೊಡುತ್ತೇವೆ ಅಂದಿದ್ದರು. ಹಾಗಾಗಿ ನೀವು ಈ ಪ್ರಶ್ನೆಯನ್ನು ಈಗ ಅವರಿಗೆ ಹೋಗಿ ಕೇಳಿ. ನಾನು ಇವತ್ತು ಮದುವೆ ಗಂಡು ಆಗುವುದಕ್ಕೆ ತಯಾರಿದ್ದೇನೆ. ತೀರ್ಮಾನ ಮಾಡಬೇಕಾದವರು ಹಿರಿಯರು. ಅವರೇನು ಮಾಡಲಿಲ್ಲ ಅಂದರೆ ನಾನೇನು ಮಾಡಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬ್ಯಾಂಕುಗಳಿಗೆ ಸ್ಥಳೀಯ ಭಾಷಿಕರನ್ನೇ ನೇಮಿಸಿ- ನಿರ್ಮಲಾ ಸೀತಾರಾಮನ್ ಸಲಹೆ
Advertisement
ನನ್ನ ಮನೆ ದೇವರು ಚೌಡೇಶ್ವರಿ ಈ ಆರೋಪದಿಂದ ನನ್ನನ್ನು ಮುಕ್ತ ಮಾಡಿದ್ದಾಳೆ. ನಾನು ಆರೋಪ ಮುಕ್ತ ಆಗಿರುವುದರಿಂದ ಸಿಎಂ, ಯಡಿಯೂರಪ್ಪ, ಕಟೀಲ್ ಬೇಗ ತೀರ್ಮಾನ ತೆಗೆದುಕೊಳ್ಳಬೇಕು. ನನ್ನ ಪ್ರಕರಣವೇ ಬೇರೆ, ಬೇರೆಯವರ ಪ್ರಕರಣವೇ ಬೇರೆ ಹೀಗಾಗಿ ನಮ್ಮ ನಾಯಕರು ನಿರ್ಧರಿಸಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ನೇಪಾಳದಲ್ಲಿ ಭೂಕುಸಿತ – 14 ಸಾವು, 10 ಮಂದಿ ನಾಪತ್ತೆ