– ಕಾಂಗ್ರೆಸ್ ಪಕ್ಷವೇ ಕೆಟ್ಟು ಹೋಗಿದೆ
– ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಕಾಂಗ್ರೆಸ್ ಪಕ್ಷ ಇವತ್ತು ಇಲ್ಲ
ಶಿವಮೊಗ್ಗ: ದೇಶದಲ್ಲಿ ಕಾಂಗ್ರೆಸ್ ಒಂದು ಹಾಸ್ಯಾಸ್ಪದ ಪಕ್ಷವಾಗಿದೆ. ರಾಜ್ಯದಲ್ಲಿ ಕೂಡಾ ಅದೇ ರೀತಿ ಆಗಿದೆ. ಉಗ್ರಪ್ಪ ಮತ್ತು ಸಲೀಂ ಅವರು ಡಿಕೆಶಿ ಬಗ್ಗೆ ಏನೇನು ಮಾತನಾಡಿದ್ದಾರೆ ಎಂಬುದನ್ನು ಟಿವಿಗಳಲ್ಲಿ ನೋಡಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದಲ್ಲಿ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಕೆಶಿ ಡೀಲ್ ಬಗ್ಗೆ ಉಗ್ರಪ್ಪ, ಸಲೀಂ ಮಾತುಕತೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಒಂದು ಹಾಸ್ಯಾಸ್ಪದ ಪಕ್ಷ ಆಗಿದೆ. ರಾಜ್ಯದಲ್ಲಿ ಕೂಡಾ ಅದೇ ರೀತಿ ಆಗಿದೆ. ಉಗ್ರಪ್ಪ ಮತ್ತು ಸಲೀಂ ಅವರು ಡಿಕೆಶಿ ಬಗ್ಗೆ ಏನೇನು ಮಾತನಾಡಿದ್ದಾರೆ ಎಂಬುದನ್ನು ಟಿವಿಗಳಲ್ಲಿ ನೋಡಿದೆ. ನಾನು ಆ ಪದಗಳನ್ನು ಬಳಸಲು ಹೋಗುವುದಿಲ್ಲ. ಕಾಂಗ್ರೆಸ್ನವರ ಪರಿಸ್ಥಿತಿ ಅದೇ ರೀತಿ ಇದೆ. ಡಿಕೆಶಿ ಬೆಂಬಲಿಗರು ಸಿದ್ದರಾಮಯ್ಯ ಅವರ ವಿರುದ್ಧ ಅದಕ್ಕಿಂತ ಜಾಸ್ತಿ ಹೇಳುತ್ತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಪರ್ಸಂಟೇಜ್ ಆರೋಪ – ನನಗೂ, ಪಕ್ಷಕ್ಕೂ ಸಂಬಂಧವಿಲ್ಲದ ವಿಚಾರ ಅಂದ್ರು ಡಿಕೆಶಿ
ಅವರು ಕುಡುಕರು, ಕುಡಿದು ಮಾತನಾಡ್ತಾರೆ, ಅವರ ಬಾಯಿ ತೊದಲಿಸುತ್ತದೆ. ಈ ರೀತಿ ಪದಗಳನ್ನು ಯಾರೋ ಹೊರಗಡೆ ಅವರ ಹೇಳುತ್ತಿಲ್ಲ. ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಗುಂಪು, ಡಿಕೆಶಿ ವಿರುದ್ಧ ಸಿದ್ದರಾಮಯ್ಯ ಗುಂಪು ಆರೋಪ ಮಾಡುತ್ತಿದೆ. ಇದು ಒಳಗೊಳಗೆ ನಡೆಯುತಿತ್ತು. ಇಂದು ಬಹಿರಂಗ ಆಗಿದೆ. ಬರುವ ವಿಧಾನ ಸಭಾ ಚುನಾವಣೆಯೊಳಗೆ ಕಾಂಗ್ರೆಸ್ ಎರಡು ಗುಂಪು ಆಗುತ್ತದೆ. ಅವರ ಪಕ್ಷದ ಆಂತರಿಕ ವಿಚಾರ ನನಗೆ ಗೊತ್ತಾಗಿಯೇ ಇದನ್ನ ಹೇಳಿದ್ದೆ. ಅದಕ್ಕೆ ಬಹಿರಂಗವಾಗಿಯೇ ಸಿಕ್ಕಂತಹ ಸಾಕ್ಷಿ ಇದು ಎಂದು ವಾಗ್ದಾಳಿ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷವೇ ಕೆಟ್ಟು ಹೋಗಿದೆ. ಕಾಂಗ್ರೆಸ್ ಪಕ್ಷವೇ ಕೆಟ್ಟ ಪಕ್ಷ ಆಗಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಕಾಂಗ್ರೆಸ್ ಪಕ್ಷ ಇವತ್ತು ಇಲ್ಲ, ಇವರನ್ನ ನಾಯಕರು ಅಂತಾ ಒಪ್ಪಿಕೊಳ್ಳಬೇಕು. ಗುಂಪುಗಾರಿಕೆ ಇದುವರೆಗೆ ಒಳಗೆ ಕುದಿಯುತಿತ್ತು. ಆದರೆ ಇಂದು ಅದು ಬಹಿರಂಗವಾಗಿದೆ ಅಷ್ಟೇ. ಒಬ್ಬ ನಾಯಕರು ಇನ್ನೊಬ್ಬ ನಾಯಕರಿಗೆ ಟೀಕೆ ಮಾಡುವ ಸಮಯದಲ್ಲಿ ಈ ರೀತಿ ಪದ ಬಳಸಬೇಡಿ ಎಂದು ಸೂಚನೆ ನೀಡಿದ್ದಾರೆ.