ಬೆಳಗಾವಿ: ಅಂದು ಸವಾಲು ಹಾಕಿದ್ದೇ ಹಾಕಿದ್ದು. ಮತ್ತೆ ಸಚಿವನಾಗಿಯೇ ವಿಧಾನಸಭೆಗೆ ಕಾಲಿಡುವ ಶಪಥ ಮಾಡಿದ್ರು. ಆದ್ರೆ ಸಚಿವ ಆಗಲೇ ಇಲ್ಲ. ಮಾಜಿ ಸಚಿವನಾಗಿ ವಿಧಾನಸಭೆಗೆ ರಮೇಶ್ ಜಾರಕಿಹೊಳಿ (Ramesh Jarkholi) ಕಾಲಿಟ್ಟಿದ್ದಾರೆ. ಇನ್ನೊಂದೆಡೆ ಕೆ.ಎಸ್ ಈಶ್ವರಪ್ಪ (KS Eshwarappa) ಹಠ ಕೂಡ ಹಠಾತ್ತನೇ ಬಿಟ್ಟು ಹೋಯ್ತು. ಹಾಗಾದ್ರೆ ಇಬ್ಬರು ಹಠ ಬಿಟ್ಟಿದ್ದು ಹೇಗೆ ಎಂಬುದಕ್ಕೆ ಇದೀಗ ಕಾರಣ ರಿವೀಲ್ ಆಗಿದೆ.
Advertisement
ಕ್ಲೀನ್ ಚಿಟ್ ಸಿಕ್ಕ ಬಳಿಕ ನಾವು ಸಚಿವರಾಗಬೇಕು. ಸಚಿವ ಸ್ಥಾನ ಇಲ್ಲದೆ ಅಧಿವೇಶಕ್ಕೆ (Assembly Session) ಕಾಲಿಡುವುದುಂಟೇ. ಈ ಹಠದ ರಾಜಕಾರಣ ಮಾಡಿದವರು ರಮೇಶ್ ಜಾರಕಿಹೊಳಿ, ಈಶ್ವರಪ್ಪ. ಅಷ್ಟೇ ಅಲ್ಲದೆ ಬೆಳಗಾವಿ (Belagavi) ಚಳಿಗಾಲದ ಅಧಿವೇಶನದ ವೇಳೆಯೇ ಬೆಂಗಳೂರಿಗೆ ತೆರಳಿ ಪೊಲಿಟಿಕಲ್ ಬಾಂಬ್ ಸಿಡಿಸುವ ಪ್ಲ್ಯಾನ್ ವಿಫಲವಾಗಿದೆ. ನಿನ್ನೆ ರಾತ್ರಿ ಸಿಎಂ ಜೊತೆ ರಮೇಶ್ ಜಾರಕಿಹೊಳಿ, ಈಶ್ವರಪ್ಪ ಮಾತುಕತೆ ನಡೆಸಿದ ಬಳಿಕ ತಾತ್ಕಾಲಿಕ ಶಮನವಾಗಿದೆ. ಇವತ್ತು ಇಬ್ಬರು ಒಟ್ಟಿಗೆ ಸುವರ್ಣಸೌಧಕ್ಕೆ ಆಗಮಿಸಿ ಮಾಧ್ಯಮಗಳ ಮುಂದೆ ಕಾಣಿಸಿಕೊಂಡ್ರು. ಅಲ್ಲದೆ ಒಂದೂವರೆ ವರ್ಷದ ಬಳಿಕ ರಮೇಶ್ ಜಾರಕಿಹೊಳಿ, 7 ತಿಂಗಳ ಬಳಿಕ ಈಶ್ವರಪ್ಪ ವಿಧಾನಸಭೆಗೆ ಹಾಜರಾದ್ರು. ಈಶ್ವರಪ್ಪ ಕಲಾಪಕ್ಕೆ ಬರುತ್ತಿದ್ದಂತೆ ಯಡಿಯೂರಪ್ಪ ಅವರನ್ನು ಮಾತನಾಡಿಸಿ ನಾಲ್ಕನೇಯ ಸಾಲಿನಲ್ಲಿ ಕುಳಿತ್ರೆ, ರಮೇಶ್ ಜಾರಕಿಹೊಳಿ, ಸಿ.ಟಿ.ರವಿಯನ್ನು ಮಾತನಾಡಿಸಿ ನಾಲ್ಕನೇ ಸಾಲಿನಲ್ಲಿ ಕುಳಿತ್ರು. ಇದನ್ನೂ ಓದಿ: ಮಂಗಳೂರು ವಿವಿ ಫಲಿತಾಂಶ 10 ದಿನದೊಳಗೆ ಪ್ರಕಟ – ಅಶ್ವಥ್ ನಾರಾಯಣ
Advertisement
Advertisement
ಅಂದು 2021ರ ಮಾರ್ಚ್ 3 ರಂದು ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಟ್ಟಿದ್ದರು. ಸಿಡಿ ಪ್ರಕರಣ ಹೊರಬಂದಾಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಆಗ ಶಪಥ ಮಾಡಿದ್ದ ರಮೇಶ್ ಜಾರಕಿಹೊಳಿ, ಮತ್ತೆ ಸಚಿವನಾಗಿಯೇ ವಿಧಾನಸಭೆಗೆ ಬರ್ತೀನಿ ಅಂತೇಳಿದ್ರು. ಅಲ್ಲಿಂದ ಇಲ್ಲಿ ತನಕ ನಡೆದಿರುವ ಅಧಿವೇಶನದ ಕಲಾಪದಲ್ಲಿ ಭಾಗವಹಿಸಿರಲಿಲ್ಲ. ಅಲ್ಲದೆ ಕಳೆದ ಬಾರಿ ನಡೆದ ಬೆಳಗಾವಿ ಅಧಿವೇಶನದಲ್ಲೂ ಭಾಗವಹಿಸದೇ ಹಠಕ್ಕೆ ಬಿದ್ದಿದ್ದರು. ಆದ್ರೀಗ ಚುನಾವಣೆ ವೇಳೆ ಹೈಕಮಾಂಡ್ ಬುದ್ಧಿಮಾತು ಕೇಳಿ ಕಲಾಪಕ್ಕೆ ಬಂದಿದ್ದಾರೆ. ಇದನ್ನೂ ಓದಿ: `ಮಹಾ’ ಕ್ಯಾತೆಗೆ ವಿಧಾನಸಭೆಯಲ್ಲಿ ಸರ್ವಾನುಮತದ ಖಂಡನಾ ನಿರ್ಣಯ ಅಂಗೀಕಾರ
Advertisement
ಒಟ್ನಲ್ಲಿ ಎಂತಹ ಪ್ರಭಾವಿಯಾದ್ರೂ ಕಾಲ ಚಕ್ರದೊಳಗೆ ಸಿಲುಕಿದ್ರೆ ಹಠ, ಶಪಥ ಎಲ್ಲವೂ ಶೂನ್ಯ ಅನ್ನೋದು ರಮೇಶ್ ಜಾರಕಿಹೊಳಿ, ಈಶ್ವರಪ್ಪ ನಡೆಯ ಉದಾಹರಣೆಯಿಂದ ಸ್ಪಷ್ಟವಾದಂತಿದೆ.