ರಾಜ್‍ಕೋಟ್: ಗಾಯಗೊಂಡು ವಿಶ್ರಾಂತಿ ಪಡೆಯುತ್ತಿರುವ ರಿಷಭ್ ಪಂತ್ ಅವರ ಸ್ಥಾನದಲ್ಲಿ ಆಂಧ್ರ ಪ್ರದೇಶದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆ.ಎಸ್.ಭಾರತ್ ರಾಜ್‍ಕೋಟ್ ಏಕದಿನ ಪಂದ್ಯದಲ್ಲಿ ಭಾರತ ತಂಡವನ್ನು ಸೇರಿಕೊಂಡಿದ್ದಾರೆ. ಆದರೆ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಪಂದ್ಯದಲ್ಲಿ ಅವರಿಗೆ ಆಡಲು ಅವಕಾಶ ಸಿಗಲಿಲ್ಲ.
ರಿಷಭ್ ಪಂತ್ ಬದಲಿಗೆ ಮನೀಶ್ ಪಾಂಡೆ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದರು. ಇತ್ತ ಕೆಎಲ್ ರಾಹುಲ್ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ಮಾಡಲಿದ್ದಾರೆ. ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಭಾರತ-ಎ ಪ್ರವಾಸಕ್ಕೆ ನ್ಯೂಜಿಲೆಂಡ್‍ಗೆ ಹೋಗುವುದರೊಂದಿಗೆ, ಅವರನ್ನು ಪಂತ್ ಅವರ ಬ್ಯಾಕಪ್ ಆಗಿ ಸೇರಿಸಲು ಮಂಡಳಿ ನಿರ್ಧರಿಸಿದೆ.
Advertisement
Advertisement
ಪಂತ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಚೇತರಿಕೆ ಬಗ್ಗೆ ಇಲ್ಲಿ ನಿಗಾ ವಹಿಸಲಾಗುತ್ತಿದೆ. ಭಾನುವಾರ ಮೂರನೇ ಏಕದಿನ ಪಂದ್ಯದಲ್ಲಿ ಅವರು ಆಡಬೇಕೋ, ಬೇಡವೋ ಎಂದು ನಿರ್ಧರಿಸಲಾಗುತ್ತದೆ. ಮುಂಬೈನಲ್ಲಿ ನಡೆದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಪಂತ್ ತಲೆಗೆ ಪೆಟ್ಟಾಗಿತ್ತು. ಈ ಪಂದ್ಯದಲ್ಲಿ ಪಂತ್ 28ರನ್ ಸಿಡಿಸಿದ್ದರು. ಪಂತ್ ವಿಶ್ರಾಂತಿ ಹಿನ್ನೆಲೆಯಲ್ಲಿ ಮನೀಶ್ ಪಾಂಡೆ ಮೈದಾನಕ್ಕಿಳಿದರು. ಆ ಪಂದ್ಯದಲ್ಲಿ ಕೆ.ಎಲ್.ರಾಹುಲ್ ವಿಕೆಟ್ ಕೀಪಿಂಗ್ ಮಾಡಿದ್ದರು.
Advertisement
Advertisement
ರಾಜ್‍ಕೋಟ್ ಏಕದಿನ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಗಾಯಗೊಂಡರೆ, ಆ ಸಂದರ್ಭದಲ್ಲಿ ಭರತ್ ಅವರನ್ನು ಕಣಕ್ಕಿಳಿಸಬಹುದು. ತಂಡಕ್ಕೆ ಬ್ಯಾಕಪ್ ಆಗಿ ಭರತ್ ಅವರನ್ನು ಕರೆಸಿಕೊಳ್ಳುವುದು ಇದೇ ಮೊದಲಲ್ಲ. ಕಳೆದ ವರ್ಷ ಬಾಂಗ್ಲಾದೇಶ ವಿರುದ್ಧ ಕೋಲ್ಕತ್ತಾದಲ್ಲಿ ನಡೆದ ಮೊದಲ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ವೃದ್ಧಿಮಾನ್ ಸಹಾ ಅವರ ಬ್ಯಾಕಪ್ ಆಗಿ ಭರತ್ ಅವರನ್ನು ಉಳಿಸಿಕೊಳ್ಳಲಾಗಿತ್ತು.
ಆಂಧ್ರಪ್ರದೇಶ ಪರ ಆಡಿದ ಭಾರತ್ 71 ಪ್ರಥಮ ದರ್ಜೆ ಪಂದ್ಯಗಳಲ್ಲಿ 37.66 ಸರಾಸರಿಯಲ್ಲಿ 4,143 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ, ಅವರು 51 ಗ್ರೇಡ್-ಎ ಪಂದ್ಯಗಳಲ್ಲಿ 1,351 ರನ್ ಗಳಿಸಿದ್ದಾರೆ.
A look at the Playing XI for #INDvAUS
Manish Pandey and Navdeep Saini come in, in place of Pant and Shardul Thakur respectively.
Rishabh Pant is undergoing his rehabilitation protocol at the National Cricket Academy. pic.twitter.com/FaT5yuMLp5
— BCCI (@BCCI) January 17, 2020