– ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ 750 ಪುಟಗಳ ಚಾರ್ಜ್‍ಶೀಟ್ ಸಲ್ಲಿಕೆ
ಉಡುಪಿ: ವಿಚಾರವಾದಿ, ಸಾಹಿತಿ ಪ್ರೋ. ಕೆ.ಎಸ್.ಭಗವಾನ್ ಹತ್ಯೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಾರಪೇಟೆ ಪೊಲೀಸರು ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ 750 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಚಾರ್ಜ್ ಶೀಟ್ ನಲ್ಲಿ ಹಲವು ಸ್ಫೋಟಕ ಮಾಹಿತಿಗಳು ಬಹಿರಂಗವಾಗಿವೆ.
ಗುಂಡುಗಳನ್ನು ನೀಡಿದ್ದು ಯಾರು?:
ಭಗವಾನ್ ಹತ್ಯೆಗೆ ಸಂಬಂಧಿಸಿದಂತೆ ಬಂಧಿತನಾಗಿರುವ ಕೆ.ಟಿ.ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜ, ಎರಡು ಜೀವಂತ ಗುಂಡುಗಳನ್ನು ನೀಡಿದ್ದನು. ನವೀನ್ ಬಳಿಯ ಎರಡು ಗುಂಡುಗಳನ್ನು ಪ್ರವೀಣ್ ಅಲಿಯಾಸ್ ಸುಜಿತ್ ಪಡೆದುಕೊಂಡಿದ್ದನು. ಪ್ರವೀಣ್ ಇದೇ ಗುಂಡುಗಳನ್ನು ನಿಹಾಲ್ ದಾದಾನಿಗೆ ತೋರಿಸಿದಾಗ, ಮುಂದೊಂದು ದಿನ ಧರ್ಮ ವಿರೋಧಿಗಳ ಸಮಾಪ್ತಿಗೆ ಗುಂಡುಗಳ ಉಪಯೋಗ ಆಗಲಿದೆ ಎಂದು ನಿಹಾಲ್ ದಾದಾ ಹೇಳಿದ್ದನು. ಗುಂಡುಗಳನ್ನು ಭದ್ರವಾಗಿ ಪ್ರವೀಣ್ ತನ್ನ ದಾವಣಗೆರೆಯ ಅಜ್ಜಿ ಮನೆಯಲ್ಲಿ ಅಕ್ರಮವಾಗಿ ಇರಿಸಿದ್ದನು.
Advertisement
Advertisement
ಬೆಳಗಾವಿಯಲ್ಲಿ ಸ್ಕೆಚ್:
ಭಗವಾನ್ ಹತ್ಯೆಗೆ ಬೆಳಗಾವಿ ಸುಖಸಾಗರ್ ಹೋಟೆಲ್‍ನಲ್ಲಿ ಸ್ಕೆಚ್ ರೂಪಿಸಲಾಗಿತ್ತು. ಹೋಟೆಲ್‍ನಲ್ಲಿ ಪ್ರವೀಣ್ ಅಲಿಯಾಸ್ ಸುಜಿತ್, ಅಮೋಲ್ ಕಾಳೆ, ಅಮಿತ್ ದಗ್ವೇಕರ್ ನಿಹಾಲ್ ದಾದಾ, ಮನೋಹರ್ ಯಡವೆ ಎಲ್ಲರೂ ಸೇರಿ ಹತ್ಯೆಗೆ ಸಂಚು ರೂಪಿಸಿದ್ದರು. ಕೆ.ಎಸ್.ಭಗವಾನ್ ಧರ್ಮಕ್ಕೆ ಅಪಮಾನ ಮಾಡುತ್ತಿರುವುದರಿಂದ ಅವರನ್ನ ಕೊಲೆ ಮಾಡಬೇಕೆಂದು ಎಲ್ಲರು ನಿರ್ಧರಿಸಿದ್ದರು.
Advertisement
ಭಗವಾನ್ ಹತ್ಯೆ ಮಾಡಲು ಗುಂಡುಗಳು ಸಿದ್ಧವಾಗಿದ್ದವು ಆದ್ರೆ ಗನ್ ಸಿಕ್ಕಿರಲಿಲ್ಲ. ಅನಿಲ್ ಎಂಬಾತನಿಂದ ಏರ್ ಪಿಸ್ತೂಲ್ ಮತ್ತು ಏರ್‍ಗನ್ ಖರೀದಿ ಮಾಡಿದ್ದರು. ಏರ್ ಗನ್ ಖರೀದಿ ಮಾಡಲು ಆರೋಪಿ ಕೆ.ಟಿ.ನವೀನ್ ಧನ ಸಹಾಯ ಮಾಡಿದ್ದನು. ಬೆಳಗಾವಿಯಲ್ಲಿಯೇ ಏರ್‍ಗನ್ ಚಲಾಯಿಸುವ ತರಬೇತಿಯನ್ನು ಸಹ ಆರೋಪಿಗಳು ಪಡೆದುಕೊಂಡಿದ್ದರು.
Advertisement
ಭಗವಾನ್ ಟಾರ್ಗೆಟ್ ಯಾಕೆ?:
ಮೈಸೂರಿನ ಮೈಲಾರಿ ಹೋಟೆಲ್ ಬಳಿ ಆರೋಪಿಗಳೆಲ್ಲರೂ ಮತ್ತೊಮ್ಮೆ ನನ್ನ ಹತ್ಯೆಗೆ ಸ್ಕೆಚ್ ರೂಪಿಸಿದ್ದರು. ಇನ್ನು ಆರೋಪಿ ಕೆ.ಟಿ. ನವೀನ್ ಕುಮಾರ್‍ನನ್ನು ಎಲ್ಲೋ ನೋಡಿದ ಹಾಗಿದೆ. ಹಾಗಾಗಿ ನನ್ನ ಕೊಲೆಗೆ ಇವರೆಲ್ಲಾ ಸಂಚು ರೂಪಿಸಿರುವ ಸಾಧ್ಯತೆಗಳಿವೆ. ಹಿಂದೂ ಧರ್ಮದ ಶೋಷಣೆಗಳ ವಿರುದ್ಧ ಧ್ವನಿ ಎತ್ತಿದ್ದಕ್ಕೆ ನನ್ನನ್ನು ಟಾರ್ಗೆಟ್ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸನಾತನ ಸಂಸ್ಥೆ ಮತ್ತು ಶ್ರೀರಾಮ ಸೇನೆಯ ವಿಚಾರಣೆ ನಡೆಸಿ ಸತ್ಯಾಸತ್ಯೆತಯನ್ನು ಪತ್ತೆ ಹಚ್ಚಬೇಕೆಂದು ಕೆ.ಎಸ್.ಭಗವಾನ್ ಉಪ್ಪಾರ ಪೇಟೆ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.
ಹಿಂದೂ ಸಂಘಟನೆಯ ಕಾರ್ಯಕರ್ತನಾಗಿದ್ದ ಪ್ರವೀಣ್ ಬೇರೆ ಬೇರೆ ಹೆಸರುಗಳಿಂದ ಗುರುತಿಸಿಕೊಂಡಿದ್ದನು. ಯಾವ ಸಂಘಟನೆಯಲ್ಲಿ ಯಾರು ಮೂಲ ಹೆಸರುಗಳನ್ನು ಹೇಳುವಂತಿಲ್ಲ ಮತ್ತು ಕರೆಯುವಂತಿಲ್ಲ ಎಂದು ಎಲ್ಲ ಆರೋಪಿಗಳು ನಿರ್ಧರಿಸಿದ್ದರು. ಒಂದು ವೇಳೆ ಪೊಲೀಸರಿಗೆ ಯಾರಾದರೂ ಸಿಕ್ಕರೆ ನಮ್ಮ ಹೆಸರುಗಳು ಬಹಿರಂಗವಾಗಬಾರದು ಎಂಬ ಹಿನ್ನೆಲೆಯಲ್ಲಿ ಸಂಚು ರೂಪಿಸಿದ್ದರು. ನವೀನ್ ಬಂಧನದ ಬಳಿಕ ಬೆದರಿದ ಎಲ್ಲ ಆರೋಪಿಗಳಿಗೂ ತಪ್ಪಿಸಿಕೊಳ್ಳುವಂತೆ ಅಮಿತ್ ಸೂಚಿಸಿದ್ದನು.
ಅಮಿತ್ ಸೂಚನೆಯಂತೆ ಎಲ್ಲರೂ ತಲೆ, ಮೀಸೆ ಬೋಳಿಸಿಕೊಂಡು ಗುರುತು ಸಿಗದಂತೆ ಮಹಾರಾಷ್ಟ್ರದಲ್ಲಿ ಅವಿತುಕೊಂಡಿದ್ದರು. ಬಹು ದಿನಗಳ ನಂತರ ದಾವಣಗೆರೆಗೆ ಆಗಮಿಸಿದ್ದ ಅಮೋಲ್ ಕಾಳೆ , ಬಸ್ ನಿಲ್ದಾಣದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದನು.
ಯಾರು ಅಮಿತ್ ದೆಗ್ವೇಕರ್?:
ಸನಾತನ್ ಪ್ರಭಾತ್‍ನಲ್ಲಿ ಪ್ರೂಫ್ ರೀಡರ್ ಆಗಿ ಗುರುತಿಸಿಕೊಂಡಿದ್ದ ವ್ಯಕ್ತಿಯೇ ಅಮಿತ್ ದೆಗ್ವೇಕರ್. ಹಿಂದೂ ಧರ್ಮದ ಬಗ್ಗೆ ಕಾಳಜಿಯುಳ್ಳ ಅಮಿತ್ ಮಠ, ಮಂದಿರ ಆಶ್ರಮಗಳಿಗೆ ಭೇಟಿ ಕೊಡುತ್ತಿದ್ದನು. ಅಮಿತ್ ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಧರ್ಮದ ಕಾರ್ಯಗಳಲ್ಲಿ ತೊಡಗಿದ್ದನು. ಕರ್ನಾಟಕಕ್ಕೆ ಬಂದಾಗ ಪ್ರವೀಣ್ ಮತ್ತು ದಾದಾನ ಪರಿಚಯವಾಗಿತ್ತು. ಮುಂದೆ ಇದೇ ಪ್ರವೀಣ್ ಮೂಲಕ ನವೀನ್‍ಕುಮಾರನ ಸ್ನೇಹ ಸಂಪಾದಿಸಿದ್ದನು. ನವೀನ್ ಮೂಲಕವೇ ಧರ್ಮದ ರಕ್ಷಣೆಗೆ ಶಸ್ತ್ರ ಸಜ್ಜಿತ ಹೋರಾಟಕ್ಕೆ ಅಮಿತ್ ಇಳಿದಿದ್ದನು.
ಮತ್ತೋರ್ವ ಆರೋಪಿ ಮನೋಹರ್ ಯಡವೆ ಸಹ ಧರ್ಮ ರಕ್ಷಣೆಯ ಹೋರಾಟಕ್ಕಾಗಿ ನವೀನ್‍ಗ್ಯಾಂಗ್ ಸೇರಿಕೊಂಡಿದ್ದನು. ಗ್ಯಾಂಗ್ ಸೇರುವ ಮುನ್ನ ಭಾರತೀಯ ಸೇನೆ, ವೀರ ಹೋರಾಟಗಾರ ಹೆಸರಿನಲ್ಲಿ ಧರ್ಮ ರಕ್ಷಣೆಗೆ ಕೆಲಸ ಮಾಡುತ್ತಿದ್ದನು.