ನವದೆಹಲಿ: ಟೀಂ ಇಂಡಿಯಾ ಆಲ್ರೌಂಡರ್ ಕೃನಾಲ್ ಪಾಂಡ್ಯ ಅವರ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಿದ್ದು, ಹ್ಯಾಕರ್ರೊಬ್ಬ ಅವರಿಗೆ ಬಿಟ್ಕಾಯಿನ್ಗೆ ಬೇಡಿಕೆಯಿಟ್ಟಿದ್ದಾನೆ.
ಹ್ಯಾಕರ್, ಕೃನಾಲ್ರವರ ಖಾತೆಯಿಂದ ಟ್ವೀಟ್ ಮಾಡಿ, ಬಿಟ್ಕಾಯಿನ್ಗಳಿಗಾಗಿ ನಿಮ್ಮ ಖಾತೆಯನ್ನು ಮಾರಾಟ ಮಾಡುತ್ತಿದ್ದೇನೆ ಎಂದಿದ್ದಾನೆ. ಸುಮಾರು ಬೆಳಗ್ಗೆ 7:31ಕ್ಕೆ ಹ್ಯಾಕ್ ಸಂಭವಿಸಿದ ನಂತರ ಹ್ಯಾಕರ್ ಮತ್ತೆ ರಿಟ್ವೀಟ್ ಮಾಡಿ, ಅವರಿಗೆ ಧನ್ಯವಾದ ತಿಳಿಸಿದ್ದಾನೆ.
Advertisement
Krunal Pandya bhi Hack ho gaya ???????????? pic.twitter.com/plsKILJYDs
— Rodony (@Rodony_) January 27, 2022
Advertisement
ಕೃನಾಲ್ ಖಾತೆಯನ್ನು ಹ್ಯಾಕ್ ಮಾಡಿದ ವ್ಯಕ್ತಿ ಕಳೆದ ವರ್ಷ 2020 ರಂದು 100 ಕ್ಕೂ ಹೆಚ್ಚು ಉನ್ನತ ಪ್ರೋಫೈಲ್ ಖಾತೆಗಳನ್ನು ಹ್ಯಾಕ್ ಮಾಡಿದ್ದ ಎಂದು ವರದಿಯಾಗಿದೆ. ಇದನ್ನೂ ಓದಿ: ಅಜ್ಜಿ ಜೊತೆ ಶ್ರೀವಲ್ಲಿ ಹಾಡಿಗೆ ಹೆಜ್ಜೆಹಾಕಿದ ಪಾಂಡ್ಯ
Advertisement
ಕೃನಾಲ್ ಕೊನೆಯ ಬಾರಿಗೆ ಬರೋಡಾ ತಂಡವನ್ನು ಪ್ರತಿನಿಧಿಸಿದ್ದು, ವಿಜಯ ಹಜಾರೆ ಟ್ರೋಫಿ 2022ರಲ್ಲಿ ಕಾಣಿಸಿಕೊಂಡಿದ್ದರು. ಭಾರತ ತಂಡದ ಅಂಡರ್-19 ಟಿ-20ಯಲ್ಲಿ 5 ಟಿ-20 ಪಂದ್ಯಗಳಲ್ಲಿ ಆಡಿದ್ದಾರೆ. ಐಪಿಎಲ್ 2022 ರ ಮೆಗಾ ಹರಾಜು ಮುಂದಿನ ತಿಂಗಳು ನಡೆಯಲಿದೆ.
Advertisement
ಮುಂಬೈ ಇಂಡಿಯನ್ಸ್ ತಂಡವು ಈ ವರ್ಷದ ಮೆಗಾ ಹರಾಜಿನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದ ಇಬ್ಬರೂ ಪಾಂಡ್ಯ ಸಹೋದರರನ್ನು ಉಳಿಸಿಕೊಂಡಿಲ್ಲ. ಹಾರ್ದಿಕ್ ಈಗಾಗಲೇ ಹೊಸ ತಂಡ ಅಹಮದಾಬಾದ್ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದು, ನಾಯಕನಾಗಿ ನೇಮಕಗೊಂಡಿದ್ದಾರೆ.
ಫೆಬ್ರವರಿ 12 ಮತ್ತು 13 ರಂದು 2 ದಿನಗಳ ಕಾಲ ಬೆಂಗಳೂರಿನಲ್ಲಿ ಹರಾಜು ನಡೆಯಲಿದೆ. ಭಾರತದಲ್ಲಿನ ಕೋವಿಡ್-19 ಪರಿಸ್ಥಿತಿಯನ್ನು ನೋಡಿದರೆ, ಐಪಿಎಲ್ 2022 ಅನ್ನು ಮತ್ತೆ ದುಬೈಗೆ ಸ್ಥಳಾಂತರಿಸುವ ಲಕ್ಷಣಗಳಿವೆ. ಕಳೆದ ವರ್ಷ ಐಪಿಎಲ್ 2021ರ ಮೊದಲಾರ್ಧವನ್ನು ಭಾರತದಲ್ಲಿ ಆಡಲಾಗಿದ್ದು, ಮತ್ತು ಉಳಿದ ಪಂದ್ಯಗಳು ಯುಎಇಯಲ್ಲಿ ಪೂರ್ಣಗೊಂಡಿತ್ತು. ಇದನ್ನೂ ಓದಿ: ಭಾರತದ ವಿರುದ್ಧ ಸರಣಿ ಗೆದ್ದ ಬಳಿಕ ‘ಜೈ ಶ್ರೀರಾಮ್’ ಎಂದು ಸಂಭ್ರಮಿಸಿದ ಕೇಶವ್ ಮಹಾರಾಜ್
ಈ ವರ್ಷದ ಚುಟುಕು ಕ್ರಿಕೆಟ್ ಹಬ್ಬವನ್ನು ಭಾರತದಲ್ಲಿ ಆಡಿಸಲು ಮುಂದಾಗಿದ್ದು, ಎಲ್ಲ ಪಂದ್ಯಗಳನ್ನು ಮುಂಬೈಯಲ್ಲಿ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ.