ಮುಂಬೈ: ಒಂದೇ ಕುಟುಂಬದಿಂದ ಇಬ್ಬರು ಅಂತರರಾಷ್ಟ್ರೀಯ ಕ್ರಿಕೆಟಿಗರನ್ನು ನಾವು ಹೆಚ್ಚಾಗಿ ನೋಡಿಲ್ಲ. ಇಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಭಾರೀ ಸ್ಪರ್ಧೆ ಇದೆ. ಆದರೆ ಪಾಂಡ್ಯ ಸಹೋದರರಾದ ಕೃನಾಲ್ ಮತ್ತು ಹಾರ್ದಿಕ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರ್ಯಾಂಚೈಸ್ ಮುಂಬೈ ಇಂಡಿಯನ್ಸ್ ಮತ್ತು ಭಾರತೀಯ ರಾಷ್ಟ್ರೀಯ ತಂಡಕ್ಕೆ ಸ್ಥಿರವಾದ ಪ್ರದರ್ಶನ ನೀಡಿ, ಗುರುತಿಸಿಕೊಂಡಿದ್ದಾರೆ.
ಪಾಂಡ್ಯ ಸಹೋದರರು ಆರಂಭಿಕ ದಿನಗಳಿಂದ ಇಲ್ಲಿಯವರೆಗೆ ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದಾರೆ. ಕೃನಾಲ್ ಮತ್ತು ಹಾರ್ದಿಕ್ ಅವರ ಬಾಲ್ಯ, ಬೆಳವಣಿಗೆ ಕುರಿತು ‘ರಾಗ್ಸ್ ಟು ರಿಚಸ್’ ಕಥೆ ತಿಳಿಸುತ್ತಿದೆ. ಇದೇ ವಿಚಾರವಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ ಕೃನಾಲ್ ಪಾಂಡ್ಯ, ಆರಂಭಿಕ ದಿನಗಳಲ್ಲಿ ಸೋಹದರರಿಬ್ಬರು ಒಂದೇ ಬ್ಯಾಟ್ ಬಳಸುತ್ತಿದ್ದ ಕಥೆಯನ್ನು ಬಿಚ್ಚಿಟ್ಟಿದ್ದಾರೆ.
Advertisement
Advertisement
ಇಂದು ನಾವು ಹೀಗೆ ಇರುವುದು ನಿಜವೇ? ನಮ್ಮ ಸದ್ಯದ ಸ್ಥಿತಿಯನ್ನುನಂಬಲು ನಾನು ಆಗಾಗ್ಗೆ ನನ್ನನ್ನು ಪ್ರಶ್ನಿಸಿಕೊಳ್ಳುತ್ತಲೇ ಇರುತ್ತೇನೆ ಎಂದು ಕೃನಾಲ್ ಹೇಳಿದ್ದಾರೆ.
Advertisement
”ಗುಜರಾತ್‍ನ ವಡೋದರಾದ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ನಮಗೆ ಎಲ್ಲ ರೀತಿಯ ಸೌಲಭ್ಯಗಳು ಸಿಗುವುದು ಸುಲಭದ ವಿಚಾರವಲ್ಲ. ಆ ಸಮಯದಲ್ಲಿ ಉತ್ತಮ-ಗುಣಮಟ್ಟದ ಇಂಗ್ಲಿಷ್ ವಿಲೋ ಬ್ಯಾಟ್ ಐಎನ್‍ಆರ್ ಬೆಲೆ 7ರಿಂದ 8 ಸಾವಿರ ರೂ. ಆಗಿತ್ತು. ಆಗ ಅದು ದೊಡ್ಡ ಮೊತ್ತ. ನಾನು ಹಾಗೂ ಹಾರ್ದಿಕ್ ಕ್ರಿಕೆಟ್ ಆಡುತ್ತಿದ್ದರಿಂದ ಇಬ್ಬರಿಗೂ ದುಬಾರಿ ಮೌಲ್ಯದ ಬ್ಯಾಟ್, ಕಿಟ್ ಕೊಡಿಸಲು ಅಪ್ಪನಿಗೂ ಕಷ್ಟವಾಗುತ್ತಿತ್ತು. ತಂದೆಯ ಹೆಗಲ ಮೇಲೆ ನಮ್ಮಿಬ್ಬರ ಮೇಲೆ ಜವಾಬ್ದಾರಿ ಇತ್ತು” ಎಂದು ಕೃನಾಲ್ ಬಹಿರಂಗಪಡಿಸಿದ್ದಾರೆ.
Advertisement
”ರಣಜಿ ಟ್ರೋಫಿ ಆಡುವವರೆಗೂ ನಮ್ಮ ಬಳಿ ಬ್ಯಾಟ್ ಇರಲಿಲ್ಲ. ವಿಜಯ್ ಹಜಾರೆ ಟೂರ್ನಿಯಲ್ಲಿ ನಾವು ವಡೋದರಾ ಪರ ಆಡುತ್ತಿದ್ದಾಗ ಹಾರ್ದಿಕ್‍ಗೆ ಟೀಂ ಇಂಡಿಯಾ ಮಾಜಿ ಆಲ್‍ರೌಂಡರ್ ಇರ್ಫಾನ್ ಪಠಾಣ್ ಅವರು ಉಡುಗೊರೆಯಾಗಿ ಬ್ಯಾಟ್ ನೀಡಿದ್ದರು. ಆದರೆ ನಾನು ಇನ್ನೊಂದು ಬ್ಯಾಟ್ ಹೊಂದಿದ್ದೆ. ನಿರ್ಣಾಯಕ ಆಟದ ವೇಳೆ ಹಾರ್ದಿಕ್‍ನ ಬ್ಯಾಟ್ ಮುರಿಯಿತು. ಆಗ ಅವರು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರೆ, ನಾನು ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕಿತ್ತು. ಹೀಗಾಗಿ ಹಾರ್ದಿಕ್ ನನ್ನ ಬ್ಯಾಟ್ ತೆಗೆದುಕೊಂಡು ಆಟ ಮುಂದುವರಿಸಿದ್ದ” ಎಂದು ಕೃನಾಲ್ ನೆನೆದಿದರು.
The story of @krunalpandya24 and @hardikpandya7 is the perfect example of rags to riches but did you ever think that they had to make do with just one bat until they played for Baroda in the Ranji Trophy. Watch this story only on #SpicyPitch#Mumbai #TeamIndia pic.twitter.com/cWdruXBsTd
— Cricbuzz (@cricbuzz) April 14, 2020
”ನಾನು ನಂತರ ಬ್ಯಾಟಿಂಗ್ ಮಾಡಲು ಹೊರಟಾಗ ಹಾರ್ದಿಕ್ ಇನ್ನೂ ಕ್ರೀಸ್‍ನಲ್ಲಿದ್ದ. ಆಗ ನನಗೆ ಬ್ಯಾಟ್ ಕೂಡ ಇರಲಿಲ್ಲ. ಹೀಗಾಗಿ ಸ್ಪೇರ್ ಬ್ಯಾಟ್ ನೀಡುವಂತೆ ತಂಡದ ಸಹ ಆಟಗಾರನಿಗೆ ವಿನಂತಿಸಿಕೊಂಡಿದ್ದೆ. ಈ ಸನ್ನಿವೇಶ ಬಹಳ ಮುಜುಗರ ತಂದಿತ್ತು. ಹೀಗೆ ಮತ್ತೊಬ್ಬರ ಬ್ಯಾಟ್ ಕೇಳುವುದು ರಣಜಿ ಟ್ರೋಫಿ ಮಟ್ಟದಲ್ಲಿಯೂ ಸರಿಯಾದ ಕ್ರಮವಲ್ಲ. ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕು ಅಂತ ತೀರ್ಮಾನಿಸಿದೆ ಎಂದು ಹೇಳಿದರು.