ಮಂಡ್ಯ: ಕೊಡಗು ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಹಳೆ ಮೈಸೂರು ಭಾಗದ ಜೀವನಾಡಿಯಾಗಿರುವ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಡ್ಯಾಂಗೆ ಒಳಹರಿವು ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ನಿನ್ನೆ ಕೆಆರ್ಎಸ್ಗೆ 5,056 ಕ್ಯೂಸೆಕ್ ಒಳ ಹರಿವು ಇದ್ದರೆ ಇಂದು 20,488 ಕ್ಯೂಸೆಕ್ ನೀರು ಕೆಆರ್ಎಸ್ಗೆ ಸೇರುತ್ತಿದೆ.
Advertisement
ಈ ಮೂಲಕ ಒಂದೇ ದಿನದ ಅಂತರದಲ್ಲಿ ದುಪ್ಪಟ್ಟಕ್ಕೂ ಹೆಚ್ಚು ನೀರು ಕೆಆರ್ಎಸ್ ಜಲಾಶಯದಲ್ಲಿ ಸಂಗ್ರಹವಾಗುತ್ತಿದೆ. ಸದ್ಯ ಕೆಆರ್ಎಸ್ ಡ್ಯಾಂನಲ್ಲಿ ನೀರಿನಮಟ್ಟ 107.17 ಅಡಿ, ಒಳಹರಿವು 20488 ಕ್ಯೂಸೆಕ್, ಹೊರ ಹರಿವು 4659 ಕ್ಯೂಸೆಕ್, ನೀರಿನ ಸಂಗ್ರಹ 28.971 ಟಿಎಂಸಿ ಇದ್ದರೇ, ಡ್ಯಾಂನ ಗರಿಷ್ಠ ಸಾಮರ್ಥ್ಯ 49.50 ಟಿಎಂಸಿ ಇದೆ.
Advertisement
Advertisement
ಕಳೆದ ಎರಡು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ದಾಖಲೆಯ ಮಳೆಯಾಗಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಮನವಿ ಮಾಡಿಕೊಂಡಿದೆ. ಕೊಡಗಿನ 15 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 100 ಮಿಲಿ ಮೀಟರ್ ಗೂ ಅಧಿಕ ಮಳೆಯಾಗಿದ್ದು, ಅಲ್ಲಲ್ಲಿ ಗುಡ್ಡ ಕುಸಿತ ಸಂಭವಿಸಿದೆ.