ಚಾಮರಾಜನಗರ: ಕೃಷ್ಣರಾಜಸಾಗರ (ಕೆಆರ್‌ಎಸ್) ಅಣೆಕಟ್ಟಿನಿಂದ ಅಧಿಕ ನೀರು ಹೊರಗೆ ಹರಿಸಿರುವ ಹಿನ್ನೆಲೆಯಲ್ಲಿ ಪುರಾತನ ಕಾಲದ ವೆಸ್ಲೀ ಸೇತುವೆ ಕೊಚ್ಚಿ ಹೋಗಿದೆ.
ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿರುವ ವೆಸ್ಲೀ ಸೇತುವೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಈ ಸೇತುವೆ ಒಂದು ಭಾಗ ಇದೀಗ ಸಂಪೂರ್ಣವಾಗಿ ಕೊಚ್ಚಿಹೋಗಿದೆ.
Advertisement
Advertisement
ಸೇತುವೆ ಹಿನ್ನೆಲೆ: 1799 ರಲ್ಲಿ ಬ್ರಿಟಿಷರ ವಿರುದ್ಧ ನಡೆದ 4ನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಮರಣಹೊಂದಿದ್ದು, ಈ ವೇಳೆ ಮೈಸೂರು ಸಂಸ್ಥಾನಕ್ಕೆ ಪೂರ್ಣಯ್ಯ ಅವರು ದಿವಾನರಾಗಿದ್ದರು. ಈ ವೇಳೆ ಪೂರ್ಣಯ್ಯ ಅವರ ಮುಂದಾಳತ್ವದಲ್ಲಿ ಕಪಿಲ ಹಾಗೂ ಕಾವೇರಿ ನದಿಗಳು ಸೇರುವ ಸ್ಥಳದಲ್ಲಿ 1808 ರಲ್ಲಿ ಈ ಸೇತುವೆ ನಿರ್ಮಾಣ ಮಾಡಲಾಗಿತ್ತು. ಬ್ರಿಟಿಷ್ ರಾಯಬಾರಿ ವೆಸ್ಲೀ ಮೈಸೂರು ಆಸ್ಥಾನಕ್ಕೆ ಭೇಟಿ ನೀಡಿ ಆಳ್ವಿಕೆ ಮರುಸ್ಥಾಪಿಸಲು ನೆರವು ನೀಡಿದ ಕಾರಣ ಈ ಸೇತುವೆಗೆ ವೆಸ್ಲಿ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.
Advertisement
ಹಲವು ವರ್ಷಗಳಿಂದ ಶಿಥಿಲಾವಸ್ಥೆಯಿಂದ ಕೂಡಿದ್ದ ಈ ಸೇತುವೆ ಸದ್ಯ ಕೆಆರ್ ಎಸ್ ಅಣೆಕಟ್ಟಿನಿಂದ ಅಧಿಕ ಪ್ರಮಾಣದ ನೀರು ಹರಿಸಿದ ಕಾರಣ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಇದೀಗ ಆ ಸೇತುವೆ ನೀರಿನಲ್ಲಿ ಕೊಚ್ಚಿಹೋಗಿರುವ ಕಾರಣ, ಇನ್ನೂ ಮುಂದೆ ವೆಸ್ಲೀ ಸೇತುವೆ ನೆನಪು ಮಾತ್ರ.