ಮಂಡ್ಯ: ಸುಪ್ರೀಂ ಕೋರ್ಟ್ (Supreme Court) ಆದೇಶದಂತೆ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದ್ದು, KRS ಜಲಾಶಯದ ನೀರಿನ ಮಟ್ಟ 96.90 ಅಡಿಗೆ ಕುಸಿದಿದೆ.
ನಿನ್ನೆ ತಮಿಳುನಾಡಿಗೆ (TamilNadu) 2,673 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿತ್ತು, ಇಂದು 3,000 ಕ್ಯೂಸೆಕ್‌ಗೆ ಏರಿಕೆಯಾಗಿದೆ. ತಮಿಳುನಾಡಿಗೆ ಕೆಆರ್‌ಎಸ್‌ನಿಂದ ಬಿಡುಗಡೆ ಮಾಡಲಾದ ನೀರಿನ ಪ್ರಮಾಣದಲ್ಲಿ 300 ಕ್ಯೂಸೆಕ್‌ನಷ್ಟು ಹೆಚ್ಚುವರಿ ನೀರು ಹರಿಸಲಾಗಿದೆ. ಇದನ್ನೂ ಓದಿ: ಇಂದು ಮಂಡ್ಯ, ಮದ್ದೂರ್ ಬಂದ್- ಪೊಲೀಸ್ ಬಿಗಿ ಭದ್ರತೆ
Advertisement
Advertisement
ಮತ್ತೊಂಡೆದೆ ಕೆಆರ್‌ಎಸ್ ಜಲಾಶಯದ (KRS Reservoir) ಹೊರ ಹರಿವಿನ ಪ್ರಮಾಣ ಹೆಚ್ಚಾಗಿದ್ದರೂ ಒಳಹರಿವಿನ ಪ್ರಮಾಣ ಮಾತ್ರ ಕಡಿಮೆಯಾಗಿದೆ. ನಿನ್ನೆ 5,845 ಕ್ಯೂಸೆಕ್ ಇದ್ದ ಒಳ ಹರಿವಿನ ಪ್ರಮಾಣ ಇಂದು 5,147 ಕ್ಯೂಸೆಕ್‌ಗೆ ಇಳಿಕೆಯಾಗಿದೆ. ಇದರಿಂದ 124.80 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದ ಮಟ್ಟ 96.90 ಅಡಿಗೆ ಕುಸಿದಿದೆ. ಇದನ್ನೂ ಓದಿ: ತೀವ್ರ ಆಕ್ರೋಶದ ನಡುವೆಯೂ KRS, ಕಬಿನಿಯಿಂದ ತಮಿಳುನಾಡಿಗೆ 5,000 ಕ್ಯೂಸೆಕ್ ನೀರು
Advertisement
Advertisement
ಕೆಆರ್‌ಎಸ್ ಇಂದಿನ ನೀರಿನ ಮಟ್ಟ
ಗರಿಷ್ಟ ಮಟ್ಟ: 124.80 ಅಡಿಗಳು
ಇಂದಿನ ಮಟ್ಟ: 96.90 ಅಡಿಗಳು
ಗರಿಷ್ಠ ಸಂಗ್ರಹ: 49.452 ಟಿಎಂಸಿ
ಇಂದಿನ ಸಂಗ್ರಹ: 20.477 ಟಿಎಂಸಿ
ಒಳಹರಿವು: 5,147 ಕ್ಯೂಸೆಕ್
ಹೊರಹರಿವು: 6,034 ಕ್ಯೂಸೆಕ್
Web Stories