ಮಂಡ್ಯ: ಕಾವೇರಿ ಜಲನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚಿರುವ ಹಿನ್ನೆಲೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಅಣೆಕಟ್ಟೆಗೆ ಒಳಹರಿವಿನ ಪ್ರಮಾಣ ಹೆಚ್ಚಿದ್ದು, ಸದ್ಯ 13,418 ಕ್ಯೂಸೆಕ್ ನೀರು ಡ್ಯಾಂಗೆ ಹರಿದು ಬರುತ್ತಿದೆ.
ಕೆಆರ್‌ಎಸ್ ಡ್ಯಾಂನ ಗರಿಷ್ಠ ಮಟ್ಟ 124.80 ಅಡಿಗಳಿದ್ದು, ಸದ್ಯ 109.52 ಅಡಿ ಭರ್ತಿಯಾಗಿದೆ. ಟಿಎಂಸಿ ಪ್ರಮಾಣದಲ್ಲಿ ಕೆಆರ್‌ಎಸ್ ಗರಿಷ್ಠ ಸಾಂದ್ರತೆ 49.452 ಟಿಎಂಸಿ ಇದ್ರೆ, ಪ್ರಸ್ತುತ 31.242 ಟಿಎಂಸಿಯಷ್ಟು ನೀರು ತುಂಬಿದೆ. ಇದನ್ನೂ ಓದಿ: ನಮ್ಮ ರಕ್ತದಲ್ಲಿ ಕಾಂಗ್ರೆಸ್ ಇದೆ: JDS ತೊರೆದು ಕಾಂಗ್ರೆಸ್ ಸೇರಿದ ಹೆಚ್.ಆರ್.ಶ್ರೀನಾಥ್
Advertisement
Advertisement
ಡ್ಯಾಂನಿಂದ 1,258 ಕ್ಯೂಸೆಕ್ ನೀರನ್ನು ಹೊರಗಡೆ ಬಿಡುಗಡೆ ಮಾಡಲಾಗುತ್ತಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಇದೇ ರೀತಿ ಮಳೆ ಮುಂದುವರಿದರೆ ಆಗಸ್ಟ್ ಎರಡನೇ ವಾರಕ್ಕೆ ಕೆಆರ್‌ಎಸ್ ಡ್ಯಾಂ ಭರ್ತಿಯಾಗಲಿದೆ. ಇದರಿಂದ ಹಳೆ ಮೈಸೂರು ಭಾಗದ ರೈತರು ಹಾಗೂ ಜನರಿಗೆ ಸಂತಸದ ವಾತಾವರಣ ನಿರ್ಮಾಣವಾಗಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ನೂತನ ಕದ್ರಿ ರೋಲರ್ಸ್ ಸ್ಕೇಟಿಂಗ್ ಕ್ಲಬ್ ಆರಂಭ – ಅಧ್ಯಕ್ಷರಾಗಿ ಡಾ.ರಾಜೇಶ್ ಹುಕ್ಕೇರಿ ಆಯ್ಕೆ