ಮಂಡ್ಯ: ಸೋಮವಾರ ಕೊಡಗಿನಲ್ಲಿ (Kodagu) ಅಲ್ಪ ಪ್ರಮಾಣದಲ್ಲಿ ಮಳೆಯಾದ ಕಾರಣ, ಪ್ರಸಕ್ತ ವರ್ಷದಲ್ಲಿ ಕೆಆರ್‌ಎಸ್ ಡ್ಯಾಂಗೆ (KRS Dam) ಮೊದಲ ಬಾರಿಗೆ ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ.
ಮಳೆ ಕೈಕೊಟ್ಟ ಹಿನ್ನೆಲೆ ಡ್ಯಾಂನ ಒಳಹರಿವು ಕುಗ್ಗಿತ್ತು. ಈ ಸಂದರ್ಭದಲ್ಲಿ ನಿನ್ನೆ ಕೊಡಗಿನಲ್ಲಿ ಸ್ವಲ್ಪ ಪ್ರಮಾಣದ ಮಳೆಯಾಗಿತ್ತು. ಹೀಗಾಗಿ ಇಂದು ಕೆಆರ್‌ಎಸ್ ಡ್ಯಾಂಗೆ 1,151 ಕ್ಯೂಸೆಕ್ ನೀರು ಬಿಡಲಾಗಿದೆ. ಇದನ್ನೂ ಓದಿ: ಕೆಆರ್‌ಎಸ್‌ನಲ್ಲಿ ನೀರಿನ ಮಟ್ಟ ಕುಸಿತ – 5 ವರ್ಷದ ಬಳಿಕ ಶತಮಾನದ ಹಿಂದಿನ ದೇವಾಲಯ ಗೋಚರ
Advertisement
Advertisement
2023ರಲ್ಲಿ ಇದೇ ಮೊದಲ ಬಾರಿಗೆ ಒಳಹರಿವಿನ ಪ್ರಮಾಣ ಸಾವಿರ ಕ್ಯೂಸೆಕ್ ದಾಟಿದೆ. ಕಳೆದ ವರ್ಷ ಈ ದಿನ ಡ್ಯಾಂಗೆ 22,467 ಕ್ಯೂಸೆಕ್ ಒಳಹರಿವು ಇತ್ತು. ಇದನ್ನೂ ಓದಿ: ಕಳೆದ 5 ವರ್ಷಗಳಲ್ಲೇ ಕಡಿಮೆ ಮಟ್ಟಕ್ಕೆ ಕುಸಿದ ಕೆಆರ್‌ಎಸ್ ಡ್ಯಾಂ ನೀರು ಸಂಗ್ರಹ
Advertisement
Advertisement
ಕೆಆರ್‌ಎಸ್ ಇಂದಿನ ನೀರಿನ ಮಟ್ಟ
ಗರಿಷ್ಠ ಮಟ್ಟ – 124.80 ಅಡಿಗಳು
ಇಂದಿನ ಮಟ್ಟ – 78.38 ಅಡಿಗಳು
ಗರಿಷ್ಠ ಸಾಂದ್ರತೆ – 49.452 ಟಿಎಂಸಿ
ಇಂದಿನ ಸಾಂದ್ರತೆ – 10.090 ಟಿಎಂಸಿ
ಒಳ ಹರಿವು – 1,151 ಕ್ಯೂಸೆಕ್
ಹೊರ ಹರಿವು – 308 ಕ್ಯೂಸೆಕ್
Web Stories