-ಬಸವರಾಜ ಬೊಮ್ಮಯಿ ಅವರಿಗಿಲ್ಲ ಬಾಗಿನ ಬಿಡುವ ಭಾಗ್ಯ
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಹಿಂಗಾರು ಹಾಗೂ ಮುಂಗಾರು ಮಳೆ ಬೀಳದ ಕಾರಣ ಹಳೇ ಮೈಸೂರು ಭಾಗದ ಜೀವನಾಡಿಯಾಗಿರುವ ಕೆಆರ್ಎಸ್ ಜಲಾಶಯ ಈ ಬಾರಿ ಭರ್ತಿಯಾಗಿಲ್ಲ. ಹೀಗಾಗಿ ಬೇಸಿಗೆಗಾಲದಲ್ಲಿ ಬೆಂಗಳೂರು, ಮೈಸೂರು, ಮಂಡ್ಯ ಭಾಗದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಹೀಗಾಗಿ ಜನರು ನೀರನ್ನು ಹಿತ-ಮಿತವಾಗಿ ಬಳಕೆ ಮಾಡಬೇಕಾಗಿದೆ.
Advertisement
ಪ್ರತಿ ವರ್ಷ ಹಳೆ ಮೈಸೂರು ಭಾಗದ ಜೀವನಾಡಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್ಎಸ್ ಜಲಾಶಯ ಭರ್ತಿಯಾಗಿ, ರೈತರಲ್ಲಿ ಹಾಗೂ ಜನರಲ್ಲಿ ನೆಮ್ಮದಿಯನ್ನುಂಟು ಮಾಡುತ್ತಿತ್ತು. ಆದರೆ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಹಿಂಗಾರು ಹಾಗೂ ಮುಂಗಾರು ಮಳೆಯಾಗದ ಕಾರಣ ಸದ್ಯ ಕೆಆರ್ಎಸ್ ಜಲಾಶಯ ಭರ್ತಿಯಾಗಿಲ್ಲ. ಅಲ್ಲದೇ ಪ್ರತಿವರ್ಷ ತಮಿಳುನಾಡಿಗೆ 177 ಟಿಎಂಸಿ ಅಷ್ಟು ನೀರನ್ನು ಹರಿಸಬೇಕು, ಸದ್ಯ ಇಲ್ಲಿಯವರೆಗೆ ತಮಿಳುನಾಡಿಗೆ 80 ಟಿಎಂಸಿ ನೀರನ್ನು ಮಾತ್ರ ಬಿಡಲಾಗಿದೆ. ಸದ್ಯ 124.80 ಅಡಿ ಇರುವ ಕೆಆರ್ಎಸ್ ಜಲಾಶಯದಲ್ಲಿ 115.92 ಅಡಿ ಮಾತ್ರ ನೀರಿದೆ. ಟಿಎಂಸಿ ಲೆಕ್ಕಾಚಾರದಲ್ಲಿ ಹೇಳುವುದಾದರೆ ಕೆಆರ್ಎಸ್ ಜಲಾಶಯ ಸಾಮರ್ಥ್ಯ 49.452 ಟಿಎಂಸಿಯಷ್ಟು ಇದ್ದರೆ, ಈಗ 38.107 ಟಿಎಂಸಿಯಷ್ಟು ಮಾತ್ರ ನೀರು ಸಂಗ್ರಹವಾಗಿದೆ. ಈಗ ಇರುವ 38.107 ಟಿಎಂಸಿ ನೀರಿನಲ್ಲಿ ಬೆಳೆಗಳಿಗೆ ನೀರು, ಕುಡಿಯುವ ನೀರು ಹಾಗೂ ತಮಿಳುನಾಡಿಗೆ ಬಿಡಬೇಕಾದ ಕೋಟಾವನ್ನು ಮ್ಯಾನೇಜ್ ಮಾಡಬೇಕಿದೆ. ಸದ್ಯ ಕೆಆರ್‌ಎಸ್‌ಗೆ ಒಳನೀರಿನ ಪ್ರಮಾಣ 5,097 ಕ್ಯೂಸೆಕ್ ಇದ್ದು, ನಿತ್ಯ 10 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ಹರಿ ಬಿಡಲಾಗುತ್ತಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಛತ್ತೀಸ್‍ಗಢದ ಬಿಜೆಪಿ ಮಾಜಿ MLA ನಿಧನ
Advertisement
Advertisement
ಪ್ರತಿ ವರ್ಷ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದ ಕಾರಣ, ಮುಂಗಾರು ಮಳೆ ಮುಗಿಯುವ ಹೊತ್ತಿಗೆ ತಮಿಳುನಾಡಿನ ಮುಕ್ಕಾಲು ಭಾಗದ ಕೋಟಾವನ್ನು ಮುಗಿಸಲಾಗುತ್ತಿತ್ತು. ಆದರೆ ಈ ಬಾರಿ ಡ್ಯಾಂ ತುಂಬದ ಕಾರಣ ಇನ್ನೂ ಅರ್ಧದಷ್ಟು ಕೋಟಾವನ್ನು ಮುಗಿಸಲು ಸಾಧ್ಯವಾಗಿಲ್ಲ. ಒಂದು ವೇಳೆ ಮುಂದಿನ ದಿನಗಳಲ್ಲಿ ಮಳೆಯಾಗದೇ ಇದ್ದರೆ, ಡ್ಯಾಂನಲ್ಲಿ ತಮಿಳುನಾಡಿಗೆ ನೀರು ಬಿಡಲು ಸಂಕಷ್ಟ ಸೂತ್ರವನ್ನು ಅನುಸರಿಸಬೇಕಾಗುತ್ತದೆ. ಅಷ್ಟೋತ್ತಿಗೆ ಬೇಸಿಗೆ ಕಾಲ ಆರಂಭವಾಗಲಿದ್ದು, ಆ ವೇಳೆಗೆ ಬೆಂಗಳೂರು, ಮೈಸೂರು, ಮಂಡ್ಯ ಭಾಗಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಜನರು ಹೀಗಿನಿಂದಲೇ ಎಚ್ಚೆತ್ತುಕೊಂಡು ನೀರನ್ನು ಹಿತ-ಮಿತವಾಗಿ ಬಳಸುವುದು ಸೂಕ್ತವಾಗಿದೆ. ಇದನ್ನೂ ಓದಿ: ವಿಸರ್ಜನೆ ಸಂಬಂಧ ಜಿಲ್ಲಾಡಳಿತ, ಗಣಪತಿ ಮಂಡಳಿ ನಡುವೆ ಜಟಾಪಟಿ
Advertisement
ಈ ಬಾರಿ ಕೆಆರ್ಎಸ್ ಜಲಾಶಯ ಭರ್ತಿಯಾಗದ ಕಾರಣ ಕಾವೇರಿ ಮಾತೇಗೆ ಪ್ರತಿವರ್ಷ ಸಿಎಂ ಬಾಗಿನ ನೀಡುವ ಸಂಪ್ರದಾಯ ಏನು ಇತ್ತು ಅದು ಕೂಡ ನೇರವೇರಿಲ್ಲ. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಾವೇರಿಗೆ ಬಾಗಿನ ಬಿಡುವ ಭಾಗ್ಯವು ಸಹ ಇಲ್ಲದಂತೆ ಆಗಿದೆ. ಈ ಹಿಂದೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ವೇಳೆ 2015 – 2017 ರವರೆಗೆ ಸತತ ಮೂರು ವರ್ಷಗಳ ಕಾಲ ಕೆಆರ್ಎಸ್ ಜಲಾಶಯ ಭರ್ತಿಯಾಗಿರಲಿಲ್ಲ, ಹೀಗಾಗಿ ಅವರು ಸಹ ಮೂರು ಬಾರಿ ಬಾಗಿನ ನೀಡುವ ಭಾಗ್ಯವನ್ನು ಕಳೆದುಕೊಂಡಿದ್ದರು. ಯಡಿಯೂರಪ್ಪ ಅವರು ಸಿಎಂ ಆಗಿದ್ದ ಅವಧಿಗಳಲ್ಲಿ ಕೆಆರ್ಎಸ್ ಭರ್ತಿಯಾಗಿದ್ದ ಕಾರಣ ಐದು ಬಾರಿ ಕಾವೇರಿ ಮಾತೆಗೆ ಬಾಗಿನ ನೀಡಿ ಅತೀ ಹೆಚ್ಚು ಬಾರಿ ಕೆಆರ್‌ಎಸ್‌ಗೆ ಬಾಗಿನ ಸಲ್ಲಿಸದ ಅದೃಷ್ಟ ಅವರದ್ದಾಗಿದೆ. ಇದನ್ನೂ ಓದಿ: ಮೊದಲ ಅವಾರ್ಡ್ ಅಪ್ಪನ ಫೋಟೋ ಮುಂದೆ ಇರಿಸಿದ ಅಭಿಷೇಕ್ ಅಂಬರೀಷ್
ಈ ಬಾರಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಹಿಂಗಾರು ಮತ್ತು ಮುಂಗಾರು ನಿರೀಕ್ಷಿತ ಮಟ್ಟದಲ್ಲಿ ಬೀಳದ ಕಾರಣ ಕೆಆರ್ಎಸ್ ಭರ್ತಿಯಾಗಿಲ್ಲ. ಇದರಿಂದ ತಮಿಳುನಾಡಿನ ಕೋಟಾ ಮುಗಿಯದೇ ಇರುವುದರಿಂದ ಬೇಸಿಗೆಯಲ್ಲಿ ನೀರಿಗಾಗಿ ಹಾಹಾಕಾರ ಪಡಬೇಕಾದಂತಹ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ. ಹೀಗಾಗಿ ಜನರು ಈ ಬಗ್ಗೆ ಎಚ್ಚೆತ್ತುಕೊಂಡು ಜನರು ನೀರನ್ನು ಹಿತ-ಮಿತವಾಗಿ ಬಳಕೆ ಮಾಡಬೇಕಾಗಿದೆ.