ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್ ಡ್ಯಾಂನಿಂದ (KRS Dam) ತಮಿಳುನಾಡಿಗೆ (Tamil Nadu) ನೀರು ಬಿಡಲಾಗಿದೆ. 5,308 ಕ್ಯೂಸೆಕ್ ನೀರನ್ನು ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.
ನಾಲೆಗಳಿಗೆ ಬಿಡುತ್ತಿದ್ದ ನೀರನ್ನು ಸ್ಥಗಿತಗೊಳಿಸಲಾಗಿದೆ. ತಮಿಳುನಾಡಿಗೆ ಬಿಡಬೇಕಾದ ಖೋಟಾ ನೀರನ್ನು ಬಿಡುಗಡೆ ಮಾಡಲಾಗಿದೆ. ರೈತರ ಬೆಳೆಗಳಿಗೆ ನೀರು ಬಿಡುಗಡೆಯ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜನಪ್ರತಿನಿಧಿಗಳು ತಿಳಿಸಿದ್ದಾರೆ. ಹೀಗಿರುವಾಗ ಕಾವೇರಿ ನೀರಾವರಿ ನಿಗಮ ತಮಿಳುನಾಡಿಗೆ ನೀರು ಹರಿಸಿದೆ. ಇದನ್ನೂ ಓದಿ: ವಸತಿಗೃಹಗಳಲ್ಲಿ ಇರೋರು ಇನ್ಮುಂದೆ ಕಟ್ಬೇಕು ಜಿಎಸ್‌ಟಿ – ಹಾಸ್ಟೆಲ್, ಪಿಜಿಗಳ ಬೆಲೆ ಏರಿಕೆಗೆ ನಿರ್ಧಾರ
Advertisement
Advertisement
ಮುಂಗಾರಿನ ಹಿನ್ನೆಲೆ ಕೆಲ ದಿನಗಳ ಹಿಂದೆ ಕೊಡಗಿನಲ್ಲಿ ಉತ್ತಮ ಮಳೆಯಾಗಿತ್ತು. ಹೀಗಾಗಿ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟವೂ ಹೆಚ್ಚಿದೆ. ಈಗ ಮತ್ತೆ ಮಳೆ ಪ್ರಮಾಣ ತಗ್ಗಿದೆ. ಈಗಾಗಲೇ ಕೆಆರ್‌ಎಸ್ 113 ಅಡಿ ತುಂಬಿದೆ. ಡ್ಯಾಂ ಸಂಪೂರ್ಣ ಭರ್ತಿಗೆ ಇನ್ನೂ 11 ಅಡಿಯಷ್ಟೇ ಬಾಕಿ ಇದೆ. ಇದನ್ನೂ ಓದಿ: ಬೇಲ್ ಮೇಲೆ ರಿಲೀಸ್ ಆಗ್ತಿದ್ದಂತೆ ರೌಡಿಶೀಟರ್ ಮರ್ಡರ್ – ಮಗ ಬರ್ತಾನೆ ಅಂತ ಮಟನ್ ಚಾಪ್ಸ್ ಮಾಡ್ತಿದ್ಲು ತಾಯಿ!
Advertisement
Advertisement
KRS ಡ್ಯಾಂನ ಇಂದಿನ ನೀರಿನ ಮಟ್ಟ
ಗರಿಷ್ಠ ಮಟ್ಟ – 124.80 ಅಡಿ
ಇಂದಿನ ಮಟ್ಟ – 113.44 ಅಡಿ
ಒಳ ಹರಿವು – 5,270 ಕ್ಯೂಸೆಕ್
ಹೊರ ಹರಿವು – 5,358 ಕ್ಯೂಸೆಕ್
ಗರಿಷ್ಠ ಸಂಗ್ರಹ ಸಾಮರ್ಥ್ಯ – 49.452 ಟಿಎಂಸಿ
ಇಂದು ಸಂಗ್ರಹ ಇರುವ ನೀರು – 35.325 ಟಿಎಂಸಿ
Web Stories