ಮಂಡ್ಯ: ಕೆಆರ್‌ಎಸ್ (KRS Dam) ಆಣೆಕಟ್ಟಿನಲ್ಲಿ ನೀರು ದಾಖಲೆ ಪ್ರಮಾಣದಲ್ಲಿ ಕುಸಿದಿದ್ದು, ಮುಳುಗಡೆಯಾಗಿದ್ದ ಶತಮಾನದ ಹಿಂದಿನ ನಾರಾಯಣಸ್ವಾಮಿ ದೇವಾಲಯ (Narayanaswami Temple) ಐದು ವರ್ಷಗಳ ಬಳಿಕ ಗೋಚರವಾಗುತ್ತಿದೆ.
Advertisement
ಕಾವೇರಿ ಜಲಾನಯನ (Kaveri River) ಪ್ರದೇಶದಲ್ಲಿ ಇನ್ನೂ ಮುಂಗಾರು ಮಳೆ ಆರಂಭವಾಗದ ಹಿನ್ನೆಲೆ ಕೆಆರ್‌ಎಸ್ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಒಂದೆಡೆ ನೀರಿನ ಕೊರತೆ ಎದುರಾಗುವ ಆತಂಕವಿದೆ. ಮತ್ತೊಂದೆಡೆ ಐದು ವರ್ಷಗಳ ಬಳಿಕ ಅಣೆಕಟ್ಟೆಯಲ್ಲಿ ಮುಳುಡೆಯಾದ ವೈಶಿಷ್ಟ್ಯಗಳು ಬೆಳಿಕಿಗೆ ಬರುತ್ತಿವೆ. ಇದನ್ನೂ ಓದಿ: ಜೆಡಿಎಸ್ ಯುವ ಅಧ್ಯಕ್ಷ ಸ್ಥಾನಕ್ಕೆ ನಿಖಿಲ್ ರಾಜೀನಾಮೆ
Advertisement
Advertisement
ಡ್ಯಾಂನಲ್ಲಿ 110 ಅಡಿಗೂ ಹೆಚ್ಚು ನೀರು ಸಂಗ್ರಹವಾದರೆ ದೇವಾಲಯ ಸಂಪೂರ್ಣ ಮುಳುಗಡೆಯಾಗುತ್ತದೆ. ಈಗ ಡ್ಯಾಂನಲ್ಲಿ 81 ಅಡಿ ನೀರು ಸಂಗ್ರಹವಾಗಿದೆ. ಇದರಿಂದಾಗಿ ದೇವಾಲಯ ಹಾಗೂ ಶತಮಾನದ ವೀರಗಲ್ಲುಗಳು ಕಾಣಲು ಸಿಗುತ್ತಿವೆ.
Advertisement
ಕೆಆರ್‌ಎಸ್ ಹಿನ್ನೀರಿನ ಬೋರೆ ಆನಂದೂರು ಗ್ರಾಮದ ಬಳಿಯ ಹಿನ್ನೀರಿನಲ್ಲಿ ಈ ಪುರಾತನ ಕಾಲದ ದೇವಸ್ಥಾನವಿದೆ. ಡ್ಯಾಂ ನಿರ್ಮಾಣ ಆಗುವುದಕ್ಕೂ ಮುನ್ನ ಇಲ್ಲಿನ ಸುತ್ತಮುತ್ತಲಿನ ಗ್ರಾಮಸ್ಥರಿಂದ ಪೂಜೆ ಮಾಡಲಾಗುತ್ತಿತ್ತು. ಡ್ಯಾಂ ನಿರ್ಮಾಣದ ಬಳಿಕ ದೇವಾಲಯ ಹಾಗೂ ಹಲವು ಹಳ್ಳಿಗಳು ನೀರಿನಲ್ಲಿ ಮುಳುಗಡೆಯಾದವು. ಈಗ ಮೂಲ ವಿಗ್ರಹವನ್ನು ಮಜ್ಜಿಗೆಪುರ ಗ್ರಾಮದ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ. ಇದನ್ನೂ ಓದಿ: ಬೈಕ್ ಅಪಘಾತದಲ್ಲಿ ಕಾಫಿನಾಡಿನ ಎನ್‌ಎಸ್‌ಜಿ ಬ್ಲ್ಯಾಕ್ ಕ್ಯಾಟ್ ಕಮಾಂಡೋ ಸಾವು