ಮಂಡ್ಯ: ಕೆಲ ದಿನಗಳ ಹಿಂದೆ ಬಣಗುತ್ತಿದ್ದ ಕೆಆರ್ಎಸ್ ಡ್ಯಾಂಗೆ (KRS Dam) ಉತ್ತಮ ಮಳೆಯಿಂದಾಗಿ ಹೆಚ್ಚಿನ ಪ್ರಮಾಣದ ನೀರು ಹರಿದುಬರುತ್ತಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ (Cauvery Basin) ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಕಳೆದ 12 ಗಂಟೆಗಳ ಅವಧಿಯಲ್ಲಿ ಕೆಆರ್ಎಸ್ ಡ್ಯಾಂ 3 ಅಡಿ ಭರ್ತಿಯಾಗಿದ್ದು, ನೀರಿನ ಮಟ್ಟ 95 ಅಡಿಗೆ ಏರಿಕೆಯಾಗಿದೆ. ಅಲ್ಲದೇ ಕಳೆದ 12 ಗಂಟೆಗಳ ಅವಧಿಯಲ್ಲಿ 2 ಟಿಎಂಸಿ ನೀರು ಹರಿದು ಬಂದಿದ್ದು, 19.139 ಟಿಎಂಸಿಯಷ್ಟು ನೀರು ಶೇಖರಣೆಯಾಗಿದೆ. ಇದನ್ನೂ ಓದಿ: ಕಾವೇರಿ ನೀರಿಗೆ ತಮಿಳುನಾಡು ಬೇಡಿಕೆ – ಯಾವ ತಿಂಗಳು ಎಷ್ಟು ನೀರು ಬಿಡಬೇಕು?
Advertisement
Advertisement
ಇನ್ನೂ ಡ್ಯಾಂನ ಒಳಹರಿವಿನ ಪ್ರಮಾಣದಲ್ಲೂ ಭಾರೀ ಏರಿಕೆ ಕಂಡಿದೆ. ಸದ್ಯ ಡ್ಯಾಂಗೆ 29,552 ಕ್ಯೂಸೆಕ್ ನೀರು ಒಳಹರಿವಿದ್ದು, ಹೊರಹರಿವು 5,297 ಕ್ಯೂಸೆಕ್ ನಷ್ಟಿದೆ. ಇದನ್ನೂ ಓದಿ: ಗುಡ್ನ್ಯೂಸ್ – 24 ಗಂಟೆಗಳಲ್ಲಿ KRSನಲ್ಲಿ 2.50 ಅಡಿ ನೀರು ಭರ್ತಿ
Advertisement
ಕೆಆರ್ಎಸ್ ಡ್ಯಾಂ ನೀರಿನ ಮಟ್ಟ
ಗರಿಷ್ಠ ಮಟ್ಟ – 124.80 ಅಡಿಗಳು
ಇಂದಿನ ಮಟ್ಟ – 95.00 ಅಡಿಗಳು
ಗರಿಷ್ಠ ಸಾಂದ್ರತೆ – 49.452 ಟಿಎಂಸಿ
ಇಂದಿನ ಸಾಂದ್ರತೆ – 19.139 ಟಿಎಂಸಿ
ಒಳ ಹರಿವು – 29,552 ಕ್ಯೂಸೆಕ್
ಹೊರ ಹರಿವು – 5,297 ಕ್ಯೂಸೆಕ್
Advertisement
ಆಲಮಟ್ಟಿ ಜಲಾಶಯಷ
ಗರಿಷ್ಠ ಮಟ್ಟ- 123.081 ಟಿಎಂಸಿ
ಇಂದಿನ ಮಟ್ಟ – 62.534 ಟಿಎಂಸಿ
ಒಳ ಹರಿವು – 1,14,445 ಕ್ಯೂಸೆಕ್
ಹೊರ ಹರಿವು – 6,761 ಕ್ಯೂಸೆಕ್
ತುಂಗಭದ್ರಾ ಜಲಾಶಯ
ಗರಿಷ್ಠ ಮಟ್ಟ – 1,633 ಅಡಿಗಳು
ಇಂದಿನ ಮಟ್ಟ – 1,602.84 ಅಡಿಗಳು
ಗರಿಷ್ಠ ಟಿಎಂಸಿ – 105.788 ಟಿಎಂಸಿ
ಇಂದಿನ ಟಿಎಂಸಿ – 25.417 ಟಿಎಂಸಿ
ಒಳ ಹರಿವು – 47,294 ಕ್ಯೂಸೆಕ್
ಹೊರ ಹರಿವು – 213 ಕ್ಯೂಸೆಕ್
Web Stories