ಕೆಆರ್‌ಎಸ್ ಡ್ಯಾಂ ಭರ್ತಿ – ನಾಳೆ ಕಾವೇರಿ ಬಾಗಿನ ಅರ್ಪಿಸಿ ಸಿಎಂ ಹೊಸ ದಾಖಲೆ

Public TV
1 Min Read
KRS Dam

ಮಂಡ್ಯ: ಹಳೆ ಮೈಸೂರು ಭಾಗದ ಜೀವನಾಡಿ ಕೆಆರ್‌ಎಸ್ ಅಣೆಕಟ್ಟೆ (KRS Dam) ಇತಿಹಾಸದಲ್ಲೇ ಮೊದಲ ಬಾರಿಗೆ ಜೂನ್ ತಿಂಗಳಲ್ಲಿ ಭರ್ತಿಯಾಗಿದೆ. ಈ ಹಿನ್ನೆಲೆ ಸೋಮವಾರ ಸಿಎಂ ಸಿದ್ದರಾಮಯ್ಯ (Siddaramaiah) ಕಾವೇರಿ ಬಾಗಿನ ಅರ್ಪಿಸಿ ಜೂನ್‌ನಲ್ಲಿ ಬಾಗಿನ ಅರ್ಪಿಸಿದ ಮೊದಲ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ.

ಸಿಎಂ ದಾಖಲೆ ಬರೆಯುವುದಕ್ಕಾಗಿ ಕಾವೇರಿ ನೀರಾವರಿ ನಿಗಮದ ಭರದ ಸಿದ್ಧತೆ ನಡೆಸುತ್ತಿದೆ. ಡ್ಯಾಂಗೆ ಸುಣ್ಣ ಬಣ್ಣ ಬಳಿಯುವ ಕಾರ್ಯ ಪ್ರಾರಂಭಗೊಂಡಿದೆ. ಮತ್ತೊಂದೆಡೆ ಡ್ಯಾಂ ಮೇಲೆ ಕನ್ನಡ ಬಾವುಟಗಳು ರಾರಾಜಿಸುತ್ತಿವೆ. ಬಾಗಿನ ಅರ್ಪಿಸಿ ಕಾವೇರಿ ಮಾತೆಗೆ ಸಿದ್ದರಾಮಯ್ಯ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಿಎಂ ದಾಖಲೆ ಬರೆಯುವ ತವಕ ಹಿನ್ನೆಲೆ ತರಾತುರಿಯಲ್ಲಿ ಬಾಗಿನ ಸಮರ್ಪಿಸುವ ಕಾರ್ಯಕ್ರಮ ನಿಗದಿಪಡಿಸಲಾಗಿದೆ. ಇದನ್ನೂ ಓದಿ: ಬೇರೆ ಬ್ಯಾರಕ್‌ಗೆ ಶಿಫ್ಟ್‌ ಮಾಡಿ- ರನ್ಯಾ ರಾವ್‌ಗೆ ಮಹಿಳಾ ಕೈದಿಗಳಿಂದಲೇ ಕಿರುಕುಳ!

ಸೋಮವಾರ ಬೆಳಗ್ಗೆ 11:30ರ ಅಭಿಜಿನ್ ಮೂಹೂರ್ತದಲ್ಲಿ ಬಾಗಿನ ಅರ್ಪಣೆ ಕಾರ್ಯಕ್ರಮ ನಡೆಯಲಿದೆ. ವೈದಿಕ ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನಡೆಯಲಿದ್ದು, ಬಾಗಿನ ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ಪೂಜೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೇ ಬಾಗಿನ ಅರ್ಪಿಸುವ 40 ಜೊತೆ ಬಾಗಿನ ಕೂಡ ತಯಾರು ಮಾಡಲಾಗಿದೆ. ಮೊರದಲ್ಲಿ ನವ ಧಾನ್ಯ, ಅರಿಶಿಣ ಕುಂಕುಮ, ಸೀರೆ, ಬಳೆ ಹಾಕಿ ಬಾಗಿನ ಸಿದ್ಧಪಡಿಸಲಾಗಿದೆ. ಇದನ್ನೂ ಓದಿ: ಸ್ಯಾನಿಟರಿ ಪ್ಯಾಡ್ ಸುಟ್ಟ ಕೇಸ್ – ಫರಹತಾಬಾದ್ ಪಿಹೆಚ್‌ಸಿ ವೈದ್ಯಾಧಿಕಾರಿಗೆ ನೋಟಿಸ್

Share This Article