ಮಂಡ್ಯ: ಚಿರತೆ ಆತಂಕದಿಂದ ಸಂಪೂರ್ಣ ಬಂದ್ ಆಗಿದ್ದ ಕೆಆರ್‌ಎಸ್ ಬೃಂದಾವನ (KRS Brindavan) 25 ದಿನದ ಬಳಿಕ ಮತ್ತೆ ಪ್ರವಾಸಿಗರಿಗೆ ಮುಕ್ತವಾಗಿದೆ.
KRS ಡ್ಯಾಂ ಹಾಗೂ ಬೃಂದಾವನದ ಸುತ್ತಮುತ್ತ ಪದೇ ಪದೇ ಚಿರತೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ನಿರಂತರವಾಗಿ ಕಾರ್ಯಾಚರಣೆಯಿಂದಲೂ ಚಿರತೆ ಇನ್ನೂ ಸೆರೆಯಾಗಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು 8 ಬೋನ್ ಇಟ್ಟು ಬೀದಿ ನಾಯಿ ಕೊಟ್ಟಿದ್ದರು. ಬೋನ್‌ಗೆ ಸೆರೆಯಾಗದಿದ್ದಾಗ ಕೂಂಬಿಂಗ್ ಜೊತೆ ಡ್ರೋಣ್ ಕಾರ್ಯಾಚರಣೆ ನಡೆಸಿದ್ದರು. ಆದರೂ ಚಿರತೆ ಸೆರೆಯಾಗಿಲ್ಲ. ಚಿರತೆ ಸೆರೆ ಸಿಕ್ಕದಿದ್ದರೂ ಬೃಂದಾವನದ ಪ್ರಸಿದ್ಧಿ ಹಾಳಾಗಬಾರದೆಂದು ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದನ್ನೂ ಓದಿ: ಲಿವ್ ಇನ್ ರಿಲೇಶನ್‌ಶಿಪ್‍ನಲ್ಲಿದ್ದ ಪ್ರಿಯತಮೆ ಕೊಲೆಗೈದ ಪ್ರಿಯಕರ
Advertisement
Advertisement
ಅರಣ್ಯ ಇಲಾಖೆ ಸೂಚನೆಯಂತೆ ಕಾವೇರಿ ನೀರಾವರಿ ನಿಗಮ ಬೃಂದಾವನ ಓಪನ್ ಮಾಡಿದೆ. 25 ದಿನಗಳಿಂದ ಬಣಗುಡುತ್ತಿದ್ದ ಬೃಂದಾವನದಲ್ಲಿ ಇಂದಿನಿಂದ ಮತ್ತೆ ಪ್ರವಾಸಿಗರ ಕಲರವ ಶುರುವಾಗಲಿದೆ.
Advertisement
25 ದಿನದಲ್ಲಿ ಸರ್ಕಾರಕ್ಕೆ ಸುಮಾರು 80 ಲಕ್ಷಕ್ಕೂ ಅಧಿಕ ನಷ್ಟವಾಗಿದೆ. ಟಿಕೆಟ್ ಹಾಗೂ ವಾಹನ ಪಾರ್ಕಿಂಗ್‌ನಿಂದ ಬರುತ್ತಿದ್ದ ಹಣ, ನಿರಂತರವಾಗಿ ಬೃಂದಾವನ ಬಂದ್ ಆಗಿದ್ದರಿಂದ ಸರ್ಕಾರಕ್ಕೆ ನಷ್ಟವಾಗಿತ್ತು. ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಬೃಂದಾವನ 25 ದಿನ ಮುಚ್ಚಿತ್ತು. ಇದನ್ನೂ ಓದಿ: ಕಾಂಗ್ರೆಸ್ ರೌಡಿಗಳ ಪಕ್ಷ.. ಡಿಕೆಶಿ ತಿಹಾರ್ ಜೈಲಿಗೆ ಹೋಗಿ ಬಂದವರು – ಈಶ್ವರಪ್ಪ ತಿರುಗೇಟು
Advertisement
ಚಿರತೆ ಕಾಣಿಸಿಕೊಂಡ ತಕ್ಷಣವೇ ಅಧಿಕಾರಿಗಳು ಕಾರ್ಯಾಚರಣೆ ಚುರುಕುಗೊಳಿಸಲಿಲ್ಲ. ಎರಡು ಬೋನ್ ಇಟ್ಟು ಚಿರತೆ ತಾನಾಗಿಯೇ ಸೆರೆಯಾಗುತ್ತದೆ ಎಂದು ನಿರ್ಲಕ್ಷ್ಯ ವಹಿಸಿದ್ದರು. ಪದೇ ಪದೇ ಚಿರತೆ ಕಾಣಿಸಿಕೊಳ್ಳಲು ಆರಂಭಿಸಿದ ಬಳಿಕ 8 ಬೋನ್ ಇಟ್ಟಿದ್ಥರು. ಆರಂಭದಲ್ಲಿ ಕಾಟಾಚಾರಕ್ಕೆ ಕೂಂಬಿಂಗ್ ನಡೆಸಿ ಕೈಚಲ್ಲಿದ್ದರು. ಆಕ್ರೋಶ ಹೆಚ್ಚಾದ ಬಳಿಕ ಮೂರ್ನಾಲ್ಕು ದಿನದಿಂದ ಕಾರ್ಯಾಚರಣೆ ಚುರುಕುಗೊಳಿಸಿದ್ದರು.