ಬೆಂಗಳೂರು: ಕೆಆರ್‍ಎಸ್ ವಿಚಾರದ ಬಗ್ಗೆ ಸರ್ಕಾರ ಮೌನ ವಹಿಸಿಲ್ಲ, ಈಗಾಗಲೇ ಸ್ಪಷ್ಟಪಡಿಸಿದೆ. ಕೆಆರ್‍ಎಸ್ ಬಿರುಕು ಬಿಟ್ಟಿಲ್ಲ, ನೀರಾವರಿ ತಜ್ಞರು ಸಹ ಈ ಬಗ್ಗೆ ವರದಿ ಕೊಟ್ಟಿದ್ದಾರೆ. ಕೆಆರ್‍ಎಸ್ ಡ್ಯಾಂ ಸುರಕ್ಷಿತವಾಗಿದೆ. ಇದನ್ನು ರಾಜಕೀಯ ದಾಳವನ್ನಾಗಿ ಬಳಸಬಾರದು. ಇದರೆ ಬಗ್ಗೆ ಯಾರಿಗೂ ನೋವುಂಟು ಮಾಡಬಾರದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
Advertisement
ಸಂಸದೆ ಸುಮಲತಾ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಜಟಾಪಟಿ ವಿಚಾರ ಸಂಬಂಧ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಹಾಗೂ ಸುಮಲತಾ ಇಬ್ಬರ ಜಟಾಪಟಿ ಲೋಕಸಭಾ ಚುನಾವಣೆಯ ರಿಫ್ಲೆಕ್ಷನ್. ಬೇರೆ ಏನಾದರೂ ಇದ್ದರೆ ಮಾತನಾಡಿಕೊಳ್ಳಲಿ, ಕೆಆರ್‍ಎಸ್ ಬಗ್ಗೆ ಹೀಗೆ ಮಾತನಾಡುವುದು ಸರಿಯಲ್ಲ. ಕೆಆರ್‍ಎಸ್ ಬಿರುಕು ಬಿಟ್ಟಿದೆ ಎಂದರೆ ಸ್ಥಳೀಯರು ಆತಂಕಗೊಳ್ಳುತ್ತಾರೆ ಎಂದು ವಿನಂತಿಸಿದರು.
Advertisement
ಕೆಆರ್‍ಎಸ್ ಬಗ್ಗೆ ಹೇಳಬೇಕಾಗಿರುವುದು ಸರ್ಕಾರ. ಅದನ್ನು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಕುಮಾರಸ್ವಾಮಿಯವರಾಗಲಿ, ಸುಮಲತಾ ಅವರಾಗಲಿ ಕೆಆರ್‍ಎಸ್ ಬಗ್ಗೆ ಏನಾದರೂ ಕೇಳುವುದಾದರೆ ಸರ್ಕಾರವಿದೆ, ಇದರ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಲಿದೆ ಎಂದರು.
Advertisement
Advertisement
ಇವರಿಬ್ಬರ ಜಟಾಪಟಿ ಕೆಆರ್‍ಎಸ್ ವಿಚಾರವಾಗಿ ಅಲ್ಲ, ಬೇರೆ ಏನೋ ಅಜೆಂಡಾ ಇಟ್ಟುಕೊಂಡು ಮಾತನಾಡುತ್ತಿದ್ದಾರೆ. ವೈಯಕ್ತಿಕವಾಗಿ ವಾದ ನಡೆಯುತ್ತಿದೆ. ಸದ್ಯಕ್ಕೆ ಇದು ನಿಲ್ಲುವುದಿಲ್ಲ ಅನ್ನಿಸುತ್ತಿದೆ. ಇಲ್ಲಿಗೇ ಮುಕ್ತಾಯ ಮಾಡಿ ಎಂದು ವಿನಂತಿ ಮಾಡುತ್ತೇನೆ ಎಂದರು.