ಬಾಲಿವುಡ್ ನಟ ಹೃತಿಕ್ ರೋಷನ್ (Hrithik Roshan) ಬೆಳ್ಳಿಪರದೆಯಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚಿದ್ದಾಯ್ತು ಇದೀಗ ನಿರ್ದೇಶನದತ್ತ ಮುಖ ಮಾಡಿದ್ದಾರೆ. ನಟನೆಯ ಜೊತೆ ಆ್ಯಕ್ಷನ್ ಕಟ್ ಹೇಳಲು ಅವರು ರೆಡಿಯಾಗಿದ್ದಾರೆ. ಇದನ್ನೂ ಓದಿ:ಲಾಂಗ್ ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣ- ರಜತ್, ವಿನಯ್ ಗೌಡ ಜೈಲಿನಿಂದ ರಿಲೀಸ್
ಬಹುನಿರೀಕ್ಷಿತ ‘ಕ್ರಿಶ್ 4’ ಸಿನಿಮಾ ಶುರುವಾದಗಿನಿಂದ ಒಂದಲ್ಲಾ ಒಂದು ಅಡೆ ತಡೆ ಎದುರಿಸುತ್ತಿದೆ. ಹಾಗಾಗಿ ಇದೀಗ ಸ್ವತಃ ಹೃತಿಕ್ ಡೈರೆಕ್ಷನ್ ಕ್ಯಾಪ್ ತೊಟ್ಟಿದ್ದಾರೆ. ಮೊದಲ ಬಾರಿಗೆ ತಾವೇ ನಟಿಸಲಿರುವ ‘ಕ್ರಿಶ್ 4’ಗೆ (Krrish 4) ನಿರ್ದೇಶನ ಮಾಡಲು ಹೊರಟಿದ್ದಾರೆ. ಮಗನ ಸಿನಿಮಾ ರಾಕೇಶ್ ರೋಷನ್ ಬಂಡವಾಳ ಹೂಡುತ್ತಿದ್ದಾರೆ.ಇದನ್ನೂ ಓದಿ:ದರ್ಶನ್ ಅಭಿಮಾನಿಗಳಿಂದ ಥಿಯೇಟರ್ ಧ್ವಂಸ ಆರೋಪ – ದೇವ್ರು ಒಳ್ಳೆಯದು ಮಾಡ್ಲಿ ಎಂದ ಧನ್ವೀರ್!
700 ಕೋಟಿ ರೂ. ಬಜೆಟ್‌ನಲ್ಲಿ ಶುರುವಾಗಲಿರುವ ಈ ಸಿನಿಮಾ ಶೂಟಿಂಗ್ ಅಪ್‌ಡೇಟ್ ಸದ್ಯದಲ್ಲೇ ಹೊರಬೀಳಲಿದೆ. ಈ ಹಿಂದೆ ರಿಲೀಸ್ ಆಗಿರುವ ಕ್ರಿಶ್ ಸರಣಿ ಸಿನಿಮಾ ಸೂಪರ್ ಸಕ್ಸಸ್ ಕಂಡಿವೆ. ಹಾಗಾಗಿ ‘ಕ್ರಿಶ್ 4’ಗೆ ಹೃತಿಕ್ ನಟಿಸಿ, ನಿರ್ದೇಶನ ಮಾಡ್ತಿರೋ ಕಾರಣ ಸಿನಿಮಾ ಮೇಲೆ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದೆ.
View this post on Instagram
ಹೃತಿಕ್ ರೋಷನ್‌ಗೆ ‘ಕ್ರಿಶ್ 4’ರಲ್ಲಿ ಯಾವ ನಟಿ ಜೋಡಿಯಾಗ್ತಾರೆ, ಸ್ಟೋರಿ ಲೈನ್ ಹೇಗಿದೆ? ಎಂಬುದರ ವಿವರ ಸದ್ಯದಲ್ಲೇ ಚಿತ್ರತಂಡ ರಿವೀಲ್ ಮಾಡಲಿದೆ. ಅಲ್ಲಿಯವರೆಗೂ ಕಾದುನೋಡಬೇಕಿದೆ.