ಕೊಪ್ಪಳ: ರಾಜ್ಯಾದ್ಯಂತ ಈಗಾಗಲೇ ಕೆಆರ್‌ಪಿಪಿ (KRPP) ಪಕ್ಷದ 12 ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಮಾರ್ಚ್ 30ರ ಒಳಗಾಗಿ 30ಕ್ಕೂ ಹೆಚ್ಚು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಲಿದೆ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (Janardhana Reddy) ಹೇಳಿದ್ದಾರೆ.
ಕೊಪ್ಪಳ (Koppala) ಜಿಲ್ಲೆ ಗಂಗಾವತಿಯ ವಿರೂಪಾಪುರ ತಾಂಡದಲ್ಲಿ ಸುದ್ದಿಗಾರರೊಂದಿಗೆ ಜನಾರ್ದನ ರೆಡ್ಡಿ ಮಾತನಾಡಿದರು. ಈ ವೇಳೆ ಬಿಜೆಪಿಯ (BJP) ಸಾಲು ಸಾಲು ನಾಯಕರು ಗಂಗಾವತಿಗೆ ಬಂದು ಅಬ್ಬರದ ಪ್ರಚಾರ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿ ನಾಯಕರು ಇವಾಗಲಾದರೂ ಗಂಗಾವತಿ ಕಡೆ ತಿರುಗಿ ನೋಡುತ್ತಿದ್ದಾರೆ ಎಂಬುದು ಒಳ್ಳೆಯ ವಿಚಾರ. ರಾಜ್ಯ ಮಟ್ಟದ ನಾಯಕರು 5 ವರ್ಷದಲ್ಲಿ ಒಮ್ಮೆಯೂ ಬಂದಿರಲಿಲ್ಲ. ನನ್ನಿಂದಾಗಿ ಎಲ್ಲಾ ನಾಯಕರು ಗಂಗಾವತಿಗೆ ಬಂದಿದ್ದು ನನಗೆ ಖುಷಿ ತಂದಿದೆ ಎಂದು ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು.
ಮತ್ತೆ ಬಿಜೆಪಿ ಸೇರ್ಪಡೆ ಆಗುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಈ ವಿಚಾರದಲ್ಲಿ ಸ್ಪಷ್ಟ ನಿಲುವು ತಗೆದುಕೊಂಡಿದ್ದೇನೆ. ನಾನು ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗುವುದಿಲ್ಲ. ಕೆಆರ್‌ಪಿಪಿಯಿಂದಲೇ ಚುನಾವಣೆ ಎದುರಿಸುತ್ತೇನೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಇನ್ಮುಂದೇ ಮಂಡ್ಯದಲ್ಲಿ ಮೂರನೇ ಆಟ ಶುರು : ಬಿಜೆಪಿ ಸೇರುವುದಾಗಿ ಶಿವರಾಮೇಗೌಡ ಘೋಷಣೆ
ಸಿದ್ದರಾಮಯ್ಯ ಕ್ಷೇತ್ರ ಗೊಂದಲ ವಿಚಾರದ ಬಗ್ಗೆ ಮಾತನಾಡಿ, ನಾನು ಯಾರ ಬಗ್ಗೆಯೂ ಮಾತನಾಡುವುದಿಲ್ಲ. ಈ ವಿಚಾರಗಳು ಅವರವರ ಪಕ್ಷದವರಿಗೆ ಬಿಟ್ಟಿದ್ದು ಎಂದರು.
ಇದೇ ವೇಳೆ ಯುಗಾದಿ ಒಳಗಾಗಿ ಕೆಆರ್‌ಪಿಪಿ ಪಕ್ಷದ ಚಿನ್ಹೆ ಗೊಂದಲ ಪರಿಹಾರ ಆಗಲಿದೆ ಎಂದು ತಿಳಿಸಿದರು. ಉರಿಗೌಡ, ನಂಜೇಗೌಡ ಕುರಿತ ಚರ್ಚೆ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ ಎಂದರು. ಇದನ್ನೂ ಓದಿ: ಡಿಕೆಶಿ ಕರ್ನಾಟಕದ ಇತಿಹಾಸದ ಕಥೆ ಬರೆಯಲು ತಿಹಾರ್ ಜೈಲಿಗೆ ಹೋದ್ರಾ? – ಕಟೀಲ್ ಟೀಕೆ