ಮುಂಬೈ: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರು, ಕಮಾಲ್ ಆರ್ ಖಾನ್ ಅವರಿಗೆ ಟ್ವಿಟರ್‌ನಲ್ಲಿ ಹಾಸ್ಯದ ಪ್ರತಿಕ್ರಿಯೆಗಳನ್ನು ನೀಡುವ ಮೂಲಕ ನೆಟ್ಟಿಗರ ಗಮನ ಸೆಳೆದಿದಿದ್ದಾರೆ.
ಅಭಿಷೇಕ್ ಅವರು ಶನಿವಾರ ಟೊವಿನೋ ಥಾಮಸ್ ಮತ್ತು ಕೀರ್ತಿ ಸುರೇಶ್ ಅಭಿನಯದ ವಾಶಿ ಚಿತ್ರದ ಪೋಸ್ಟರ್ ಅನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಅದಕ್ಕೆ ಅವರು ಮಲಯಾಳಂ ಚಲನಚಿತ್ರೋದ್ಯಮದಿಂದ ಮತ್ತೊಂದು ಅದ್ಭುತ ಚಿತ್ರ ಬರುತ್ತಿದೆ ಎಂದು ಶೀರ್ಷಿಕೆ ನೀಡಿದ್ದರು. ಇದನ್ನೂ ಓದಿ: ಉತ್ತರ ಪ್ರದೇಶಕ್ಕೆ 3ನೇ ಹಂತ, ಪಂಜಾಬ್ ಮತದಾನ ಇಂದು – ಅಖಿಲೇಶ್ ಯಾದವ್ ಭವಿಷ್ಯ ನಿರ್ಧಾರ
Advertisement
Bhai Kabhi Aap Bollywood Wale Bhi koi incredible film Bana Dena!???? https://t.co/t86eSYnTIA
— KRK (@kamaalrkhan) February 19, 2022
Advertisement
ಈ ವೇಳೆ ಅಭಿಷೇಕ್ ಅವರ ಟ್ವೀಟ್ ಅನ್ನು ಗಮನಿಸಿದ ಕೆಆರ್‌ಕೆಗೆ ಅದು ಇಷ್ಟವಾಗಲಿಲ್ಲ. ಅವರು ಆಗಾಗ್ಗೆ ಬಾಲಿವುಡ್ ನಟರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ‘ಸಹೋದರ, ಎಂದಾದರೂ ನೀವು ಬಾಲಿವುಡ್ ಜನರು ನಂಬಲುಸಾಧ್ಯವಾದ ಚಲನಚಿತ್ರವನ್ನು ಮಾಡಿ’ ಎಂದು ಟ್ವೀಟ್ ಮಾಡಿ ಟಾಂಗ್ ನೀಡಿದ್ದಾರೆ.
Advertisement
ಇದಕ್ಕೆ ಪ್ರತಿ ಉತ್ತರವಾಗಿ ಕೆಆರ್‌ಕೆಯ ಚಿತ್ರ `ದೇಶದ್ರೋಹಿ’ ಬಗ್ಗೆ ವ್ಯಂಗ್ಯವಾಡಿದ ಬಚ್ಚನ್, ನಾವು ಪ್ರಯತ್ನ ಮಾಡುತ್ತೇವೆ. ನೀವು ಒಂದು ಚಿತ್ರ ಮಾಡಿದ್ದೀರಲ್ಲ `ದೇಶದ್ರೋಹಿ’ ಎಂದು ಕುಟುಕಿದ್ದಾರೆ. ನಂತರ ಕೆಆರ್‌ಕೆ ಮತ್ತು ಅಭಿಷೇಕ್ ನಡುವಿನ ಟ್ವಿಟರ್ ಸಮರ ಇಲ್ಲಿಗೇ ಮುಗಿಯಲಿಲ್ಲ.
Advertisement
ಅಭಿಷೇಕ್‍ಗೆ ಪ್ರತಿಕ್ರಿಯಿಸಿದ ಕೆಆರ್‌ಕೆ, ಹಹಹಾ! ನನ್ನ ಒಂದು ಚಿತ್ರದ ಬಜೆಟ್ 1.5 ಕೋಟಿ ರೂ.ಗಿಂತ ಜಾಸ್ತಿ ಇರುವುದಿಲ್ಲ. ನನ್ನ ಚಿತ್ರದ ಬಜೆಟ್ ನಿಮ್ಮ ಮೇಕಪ್ ಮ್ಯಾನ್‍ಗೆ ಕೊಡುವ ಬಜೆಟ್‍ಗಿಂತ ಕಡಿಮೆ ಇರುತ್ತದೆ. ನಾನು ಬಾಲಿವುಡ್‍ನಲ್ಲಿ ಎರಡನೇ ಚಿತ್ರ ಮಾಡಲು ಬಯಸಿದ್ದೆ. ಆದರೆ ಬಾಲಿವುಡ್ ನನಗೆ ಅವಕಾಶ ನೀಡಲಿಲ್ಲ. ಇಲ್ಲದಿದ್ದರೆ ಅದು ಮತ್ತೊಂದು ಬ್ಲಾಕ್‍ಬಸ್ಟರ್ ಆಗುತ್ತಿತ್ತು ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಹಿಜಬ್ ಆಯ್ಕೆಯಲ್ಲ, ನಾವು ಪ್ರೀತಿಸುವ ದೇವರು ವಿಧಿಸಿರುವ ಶಿಷ್ಟಾಚಾರ: ಝೈರಾ ವಾಸಿಮ್
Another incredible movie coming from Malayalam film industry!!
Good luck @ttovino, @KeerthyOfficial and the entire cast and crew! #Vaashi #tovinothomas #keerthyofficial #malayalam pic.twitter.com/qentaJRkCh
— Abhishek ???????????????????????????????? (@juniorbachchan) February 19, 2022
ಈ ಟ್ವೀಟ್‍ಗೆ ಅಭಿಷೇಕ್ ಮತ್ತೊಮ್ಮೆ ಕೆಆರ್‌ಕೆಗೆ ಟಾಂಗ್ ಕೊಟ್ಟಿದ್ದು, ಬನ್ನಿ, ನೀವೂ ಪ್ರಯತ್ನಿಸಿ, ಹೋರಾಟ ಯಶಸ್ವಿಯಾಗಲಿ ಅಂತ ಹಾರೈಸೋಣ ಎಂದು ಪಂಥಾಹ್ವಾನ ನೀಡಿದ್ದಾರೆ.
ಅಭಿಷೇಕ್ ಮತ್ತು ಕೆಆರ್‍ಕೆಯ ಈ ಸಂಭಾಷಣೆಯ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಅಭಿಷೇಕ್ ಅವರು ದಾಸ್ವಿ ಎಂಬ ತಮ್ಮ ಮುಂಬರುವ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದು, ಚಿತ್ರದ ನಾಯಕಿಯಾಗಿ ಯಾಮಿ ಗೌತಮ್ ಅವರು ಕೂಡಾ ಕಾಣಿಸಿಕೊಳ್ಳಲಿದ್ದಾರೆ.