ಚಂದನವನದ ಬ್ಯೂಟಿ ಕ್ವೀನ್ ಕೃತಿ ಕರಬಂಧ (Kriti Kharbhanda) ಇದೀಗ ಹಿಂದಿ ಮತ್ತು ದಕ್ಷಿಣದ ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ತಮ್ಮ ಮದುವೆಯ ವಿಚಾರವಾಗಿ ನಟಿ ಕೃತಿ ಸುದ್ದಿಯಲ್ಲಿದ್ದಾರೆ. ಬಾಲಿವುಡ್‌ನ ಸ್ಟಾರ್ ನಟನ ಜತೆ `ಗೂಗ್ಲಿ ನಟಿ’ ಹಸೆಮಣೆ ಏರಲಿದ್ದಾರೆ.
View this post on Instagram
ಕನ್ನಡದ ಚಿರು, ಗೂಗ್ಲಿ, ಪ್ರೇಮ ಅಡ್ಡಾ, ಸೂಪರ್ ರಂಗಾ, ಬೆಳ್ಳಿ, ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅದರಲ್ಲೂ ಯಶ್‌ಗೆ ನಾಯಕಿಯಾಗಿ ನಟಿಸಿದ್ದ `ಗೂಗ್ಲಿ’ (Googly Film) ಚಿತ್ರದ ಕೃತಿಗೆ ದೊಡ್ಡ ಮಟ್ಟದಲ್ಲಿ ಬ್ರೇಕ್ ಕೊಟ್ಟಿತ್ತು. ಸದ್ಯ ಬಿಟೌನ್ ಅಡ್ಡಾದಲ್ಲಿ ಒಂದರ ಹಿಂದೆ ಒಂದು ಸಿನಿಮಾ ಮಾಡುತ್ತಾ ಮಾಡುತ್ತಾ ಬ್ಯುಸಿಯಾಗಿದ್ದಾರೆ. ಈಗ ಮದುವೆ ವಿಷ್ಯವಾಗಿ ಈ ನಟಿ ಸಂಚಲನ ಮೂಡಿಸುತ್ತಿದ್ದಾರೆ. ಇದನ್ನೂ ಓದಿ:`ಗಿಚ್ಚಿ ಗಿಲಿಗಿಲಿ’ ವಿನ್ನರ್ ಆದ ವನ್ಷಿಕಾ, ರನ್ನರ್ ಅಪ್ ಆಗಿ ನಿವೇದಿತಾ ಗೌಡ
ಬಾಲಿವುಡ್ ನಟ ಪುಲ್ಕಿತ್ ಸಾಮ್ರಾಟ್(Pulkit Samrat) ಜೊತೆ ನಟಿ ಕೃತಿ ಕರಬಂಧ ಕಳೆದ 4 ವರ್ಷಗಳಿಂದ ಡೇಟಿಂಗ್‌ನಲ್ಲಿದ್ದಾರೆ. ಈ ಜೋಡಿ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎನ್ನಲಾಗುತ್ತಿದೆ. ಕುಟುಂಬದ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಕೃತಿ ಮತ್ತು ಪುಲ್ಕಿತ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಸಲ್ಮಾನ್ ಖಾನ್ (Salman Khan) ಮಾಜಿ ಬಾಮೈದ ಪುಲ್ಕಿತ್ ಜೊತೆ ಕೃತಿ ಕರಬಂಧ ಮದುವೆ ಆಗುತ್ತಿರುವುದು ಅದೆಷ್ಟರ ಮಟ್ಟಿಗೆ ನಿಜ ಎಂಬುದನ್ನು ಈ ಜೋಡಿ ಅಧಿಕೃತವಾಗಿ ತಿಳಿಸುವವೆರೆಗೂ ಕಾದುನೋಡಬೇಕಿದೆ.