ದರ್ಶನ್ ಪ್ರಕರಣದ ಕುರಿತು ನಟಿ ಮಯೂರಿ ರಿಯಾಕ್ಷನ್

Public TV
1 Min Read
mayuri 1 1

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣವಾಗಿ ದರ್ಶನ್ (Darshan) ಅರೆಸ್ಟ್ ಆಗಿದ್ದಾರೆ. ಈ ಪ್ರಕರಣದ ಕುರಿತು ಸ್ಯಾಂಡಲ್‌ವುಡ್ ನಟಿ ಮಯೂರಿ (Mayuri) ಪ್ರತಿಕ್ರಿಯೆ ನೀಡಿದ್ದಾರೆ. ಇದು ಸೂಕ್ಷ್ಮ ವಿಚಾರ ಎಂದು ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:ಕಿರುತೆರೆಗೆ ಖ್ಯಾತ ಹಾಸ್ಯನಟ ನರಸಿಂಹರಾಜು ಮೊಮ್ಮಗ ಎಂಟ್ರಿ

ಶೂಟಿಂಗ್‌ನಲ್ಲಿ ಬ್ಯುಸಿ ಇರೋದ್ರಿಂದ ಈ ಘಟನೆ ಬಗ್ಗೆ ನನಗೆ ಅಷ್ಟೊಂದು ಮಾಹಿತಿ ಇಲ್ಲ. ಇದು ಸೂಕ್ಷ್ಮ ವಿಚಾರ. ಗೊತ್ತಿಲ್ಲದೇ ಇರುವ ವಿಷಯದ ಬಗ್ಗೆ ನಾನು ಮಾತನಾಡೋಕು ಇಷ್ಟಪಡಲ್ಲ. ಯಾರು ಜವಾಬ್ದಾರಿ ವಹಿಸಿಕೊಳ್ಳಬೇಕೋ ಅವರು ಅವರವರ ಕೆಲಸ ಮಾಡುತ್ತಿದ್ದಾರೆ ಎಂದು ‘ಕೃಷ್ಣಲೀಲಾ’ ಚಿತ್ರದ ನಟಿ ಮಯೂರಿ ಮಾತನಾಡಿದ್ದಾರೆ.

ಅಂದಹಾಗೆ, ಕೃಷ್ಣಲೀಲಾ, ಪೊಗರು, ಕರಿಯಾ 2, ಇಷ್ಟಕಾಮ್ಯ, ನನ್ನ ಪ್ರಕಾರ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ಮಯೂರಿ ನಟಿಸಿದ್ದಾರೆ.

Share This Article