ನವದೆಹಲಿ: ಕೃಷ್ಣ ನದಿ ನೀರು ವಿವಾದದ ವಿಚಾರಣೆ ನಡೆಸಲು ಹೊಸ ನ್ಯಾಯಪೀಠ ರಚನೆ ಮಾಡಬೇಕೇಂದು ಸುಪ್ರೀಂಕೋರ್ಟ್‌ಗೆ ಕರ್ನಾಟಕ ಇಂದು ಮನವಿ ಮಾಡಿದೆ. ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ತ್ರಿ ಸದಸ್ಯ ಪೀಠದ ಮುಂದೆ ವಿಷಯ ಪ್ರಸ್ತಾಪಿಸಿದ ಹಿರಿಯ ವಕೀಲರಾದ ಶ್ಯಾಮ್ ದಿವಾನ್ ಮತ್ತು ಸಿಎಸ್ ವೈದ್ಯನಾಥನ್ ಈ ಮನವಿ ಮಾಡಿದ್ದಾರೆ.
ಈ ಹಿಂದೆ ರಚನೆಯಾದ ಪೀಠದಲ್ಲಿದ್ದ ನ್ಯಾ. ಚಂದ್ರಚೂಡ್ ಮತ್ತು ನ್ಯಾ. ಬೋಪಣ್ಣ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಪ್ರಕರಣದ ವಿಚಾರಣೆ ಆರಂಭವಾಗಿಲ್ಲ ಹೀಗಾಗಿ ಶೀಘ್ರ ಹೊಸ ಪೀಠ ರಚನೆ ಮಾಡಬೇಕು ಎಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: ಅನೂಪ್ ಭಂಡಾರಿ ಜತೆ ಮತ್ತೊಂದು ಚಿತ್ರ : ಸರ್ಪೈಸ್ ಕೊಟ್ಟ ಸುದೀಪ್
Advertisement
Advertisement
ಈ ವೇಳೆ ಮಧ್ಯಸ್ಥಿಕೆ ಮೂಲಕ ಸಮಸ್ಯೆ ಬಗೆಹರಿಸಬಹುದೇ ಎಂದು ವಕೀಲರನ್ನು ಸಿಜೆಐ ಎನ್.ವಿ ರಮಣ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ವಕೀಲ ಶ್ಯಾಮ್ ದಿವಾನ್ ಕೆಲವು ಅಂಶಗಳನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸಬಹುದು, ಅನೇಕ ಸಮಸ್ಯೆಗಳಿಗೆ ಕೋರ್ಟ್ ನಿಂದ ಮಾತ್ರ ಪರಿಹಾರ ಸಾಧ್ಯ. ಹೀಗಾಗಿ ವಿಚಾರಣೆಯ ಅವಶ್ಯಕತೆ ಇದೆ ಎಂದು ಉತ್ತರಿಸಿದರು.