ಯಾದಗಿರಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಆಲಮಟ್ಟಿ ಜಲಾಶಯದ ಮೂಲಕ ನಾರಾಯಣಪುರ ಡ್ಯಾಂಗೆ 1 ಲಕ್ಷ 73 ಸಾವಿರ ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದ್ದು, ಯಾವುದೇ ಕ್ಷಣದಲ್ಲಿ ಕೃಷ್ಣಾ ನದಿಗೆ ಹೆಚ್ಚಿನ ನೀರು ಬಿಡುಗಡೆಯಾದ್ರೆ ರಾಯಚೂರು-ಕಲಬುರಗಿ ರಾಜ್ಯ ಹೆದ್ದಾರಿ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಗಳಿವೆ.
ಜಿಲ್ಲೆಯ ನಾರಾಯಣಪೂರ ಬಸವ ಸಾಗರ ಆಣೆಕಟ್ಟು ಭರ್ತಿಯಾಗಿದ್ದು 16 ಕ್ರಸ್ಟ್ ಗೇಟುಗಳ ಮೂಲಕ 1 ಲಕ್ಷ 70 ಸಾವಿರ ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಹರಿ ಬಿಡಲಾಗಿದೆ. ಕೃಷ್ಣೆ ಮೈದುಂಬಿ ಹರಿಯುತ್ತಿರುವುದರಿಂದ ಈಗಾಗಲೇ ನದಿಯ ನಡುವೇ ಇರುವ ನೀಲಕಂಠರಾಯನ ಗಡ್ಡಿ ಸಂಪರ್ಕ ಕಳೆದುಕೊಂಡಿದೆ. ಅದೇ ರೀತಿ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೇವದುರ್ಗ-ಶಹಾಪುರ ರಸ್ತೆಗೆ ಸಂಪರ್ಕ ಕಲ್ಪಿಸುವ ಕೋಳುರು ಬ್ರಿಜ್ ಮುಳುಗಡೆಯಾಗುವದಕ್ಕೆ ಕೇವಲ 2 ಅಡಿ ಅಂತರ ಉಳಿದಿದೆ.
Advertisement
ಇನ್ನು ನದಿಗೆ ನೀರು ಹೆಚ್ಚಾಗುವ ಸಂಭವ ಇರುವುದರಿಂದ ನದಿ ತೀರದ ಹೊಲ ಗದ್ದೆಗಳಿಗೆ ನೀರು ನುಗ್ಗುವ ಸಾಧ್ಯತೆವಿರುವುದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.