ರಾಯಚೂರು: ಜಿಲ್ಲೆಯ ಕೃಷ್ಣಾ ನದಿಯ ನಡುಗಡ್ಡೆಗಳಲ್ಲಿನ ನಾರದಗಡ್ಡೆ, ದತ್ತಾತ್ರೇಯ ದೇವಾಲಯಗಳಿಗೆ ತೆರಳಲು ಭಕ್ತರಿಗೆ ಮೊಸಳೆಗಳ ಭಯ ಎದುರಾಗಿದೆ. ದೇಗುಲಕ್ಕೆ ತೆರಳುವ ಪ್ರತಿಯೊಬ್ಬ ಭಕ್ತರಿಗೂ ಮೊಸಳೆ ದರ್ಶನವಾಗುತ್ತಿದೆ.
ಕೃಷ್ಣಾ ನದಿಯಲ್ಲಿ ಬೃಹತ್ ಗಾತ್ರದ ಮೊಸಳೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ನದಿಯಲ್ಲಿ ತೆರಳಲು ಭಕ್ತರು ಹೆದರಿದ್ದಾರೆ. ದಶಕ ಕಳೆದರೂ ಕೃಷ್ಣಾ ನದಿಯಲ್ಲಿ ನಡೆದಿರುವ ಸೇತುವೆ ಕಾಮಗಾರಿಗಳು ಅರ್ಧಕ್ಕೆ ನಿಂತಿರುವುದರಿಂದ ತೆಪ್ಪ, ಅರಗೋಲುಗಳ ಮುಖಾಂತರ ದತ್ತಾತ್ರೇಯ, ನಾರದಗಡ್ಡೆ ಚನ್ನಬಸವೇಶ್ವರ ದೇವಸ್ಥಾನಗಳಿಗೆ ಭಕ್ತರು ತೆರಳುತ್ತಾರೆ. ಈ ವೇಳೆ ಮೊಸಳೆಗಳು ಪ್ರತ್ಯಕ್ಷವಾಗುತ್ತಿರುವುದರಿಂದ ಭಕ್ತರು ಆತಂಕಕ್ಕೊಳಗಾಗಿದ್ದಾರೆ. ಇದನ್ನೂ ಓದಿ: 1-10 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚುತ್ತಿದೆ ಕೊರೊನಾ ಸೋಂಕು
- Advertisement
- Advertisement
ನದಿಯಲ್ಲಿ ಅಲ್ಲಲ್ಲಿ ಬಂಡೆಗಳ ಮೇಲೆ ಮಲಗಿರುವ ಮೊಸಳೆಗಳು ಸಾಮಾನ್ಯವಾಗಿ ಕಾಣಸಿಗುತ್ತವೆ. ಜುರಾಲಾ ಯೋಜನೆ ಹಿನ್ನೀರು ಸದಾ ಇರುವುದರಿಂದ ಮೊಸಳೆಗಳು ಹೆಚ್ಚು ಪ್ರಮಾಣದಲ್ಲಿವೆ. ಅಪಾಯದ ನಡುವೆಯೇ ನಡುಗಡ್ಡೆಗಳ ದೇಗುಲಗಳಿಗೆ ನದಿಯಲ್ಲಿ ತೆಪ್ಪಗಳ ಮೂಲಕ ಭಕ್ತರ ಸಂಚಾರ ನಡೆದಿದ್ದು, ಆದಷ್ಟು ಬೇಗ ಸೇತುವೆ ಕಾಮಗಾರಿಗಳನ್ನುಪೂರ್ಣಗೊಳಿಸಬೇಕು ಎಂದು ಭಕ್ತರು ಒತ್ತಾಯಿಸಿದ್ದಾರೆ.