ಉಡುಪಿ: ನಾಡಿನಾದ್ಯಂತ ಕೃಷ್ಣ ಭಕ್ತರು ಸಂಭ್ರಮದಲ್ಲಿದ್ದಾರೆ. ಯಾಕಂದ್ರೆ ಇಂದು ಕೃಷ್ಣ ಜನ್ಮಾಷ್ಟಮಿ. ಎಲ್ಲೆಡೆ ಕೃಷ್ಣ ನಾಮ ಜಪ ನಡೆಯುತ್ತಿದೆ. ಕಡೆಗೋಲು ಕೃಷ್ಣನ ನಾಡು ಉಡುಪಿಯಲ್ಲಿ ಮುರಾರಿಯ ಆರಾಧನೆ ಶುರುವಾಗಿದೆ.
ಕೃಷ್ಣನ ನಾಡು ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಶುರುವಾಗಿದೆ. ಮುಂಜಾನೆಯಿಂದಲೇ ಕೃಷ್ಣಮಠಕ್ಕೆ ಭಕ್ತರು ಭೇಟಿಕೊಟ್ಟು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಕೆ ಮಾಡುತ್ತಿದ್ದಾರೆ. ಕೃಷ್ಣಮಠವನ್ನು ಹೂವಿನಿಂದ ಅಲಂಕಾರ ಮಾಡಲಾಗಿದೆ. ಜಪ ತಪ, ಭಜನೆ ನಡೆಯುತ್ತಿದೆ. ಇಂದು ದಿನಪೂರ್ತಿ ಉಪವಾಸವಿರುವ ಕೃಷ್ಣಭಕ್ತರು, ರಾತ್ರಿ 11.45 ಕ್ಕೆ ಕೃಷ್ಣನಿಗೆ ಅಘ್ರ್ಯ ಸಲ್ಲಿಕೆ ಮಾಡುತ್ತಾರೆ. ಈ ಮೂಲಕ ಶ್ರೀಕೃಷ್ಣನ ಜನ್ಮವಾಗುತ್ತದೆ.
Advertisement
Advertisement
ನಾಳೆ ಉಡುಪಿಯಲ್ಲಿ ಕೃಷ್ಣ ಲೀಲೋತ್ಸವ ಕಾರ್ಯಕ್ರಮ ನಡೆಯುತ್ತದೆ. ಬೆಳಗ್ಗೆಯಿಂದಲೇ ಅನ್ನದಾಸೋಹ ನಡೆಯುತ್ತದೆ. ಮಠಕ್ಕೆ ಬರುವ ಭಕ್ತರಿಗೆ ವಿತರಿಸಲು ಎರಡು ಲಕ್ಷ ಲಡ್ಡು, 1 ಲಕ್ಷ ಚಕ್ಕುಲಿ ಪಾಕಶಾಲೆಯಲ್ಲಿ ಸಿದ್ಧಗೊಂಡಿದೆ. ಉಡುಪಿಯ ಸುತ್ತಮುತ್ತಲ ಶಾಲೆಗಳಿಗೆ ವಿತರಿಸಲು ಪ್ರಸಾದ ರೆಡಿಯಾಗಿದೆ.
Advertisement
ಕೃಷ್ಣಭಕ್ತ ರಜನಿಕಾಂತ್ ತಂತ್ರಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಇಂದು ಕೃಷ್ಣನ ದರ್ಶನ ಮಾಡುವುದು ಪುಣ್ಯದ ಕೆಲಸ. ಅಷ್ಟಮಿಯ ದಿನ ತಪ್ಪದೆ ಎಲ್ಲಿದ್ದರು ಉಡುಪಿ ಮಠಕ್ಕೆ ಬಂದು ದೇವರ ದರ್ಶನದ ಮಾಡುತ್ತೇನೆ. ಈ ಬಾರಿ ಸರಳವಾಗಿ ಹಬ್ಬ ಆಚರಿಸಲು ಸ್ವಾಮೀಜಿ ಕರೆ ನೀಡಿದ್ದಾರೆ. ಇದೊಂದು ಉತ್ತಮ ನಡೆ ಎಂದು ಶ್ಲಾಘಿಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv