ಲಕ್ನೋ: ಮಥುರಾ (Mathura) ಕೃಷ್ಣಜನ್ಮಭೂಮಿ (Krishna Janmabhoomi) ವಿವಾದ ಸಂಬಂಧ ಮಸೀದಿ ಸಮಿತಿಗೆ ಭಾರೀ ಹಿನ್ನಡೆಯಾಗಿದೆ. ಶಾಹೀ ಈದ್ಗಾ ಮಸೀದಿ ಸಮಿತಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ (Allahabad High Court) ವಜಾ ಮಾಡಿದೆ.
ಮಸೀದಿ ತೆರವು ಕೋರಿ ಹಿಂದೂಪರ ಸಂಘಟನೆಗಳು ಸಲ್ಲಿಸಿದ್ದ 15 ಅರ್ಜಿಗಳ ವಿಚಾರಣೆಗೆ ಹೈಕೋರ್ಟ್ ಒಪ್ಪಿಗೆ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಆಗಸ್ಟ್ 12ಕ್ಕೆ ಮುಂದೂಡಿದೆ. ಹಿಂದೂಗಳು ಸಲ್ಲಿಸಿರುವ ಅರ್ಜಿಗಳು ವಿಚಾರಣೆಗೆ ಯೋಗ್ಯವಾಗಿವೆ ಎಂದಿದೆ. ಈ ಮೂಲಕ ಹಿಂದೂಗಳ ವಾದಕ್ಕೆ ಹೈಕೋರ್ಟ್ ಮನ್ನಣೆ ನೀಡಿದೆ. ಇದನ್ನೂ ಓದಿ: ಬಿಜೆಪಿ ಪಾದಯಾತ್ರೆ – ಭಾಗಿಯಾಗಲು ಷರತ್ತು ವಿಧಿಸಿದ ಹೆಚ್‌ಡಿಕೆ
1991ರ ಕಾನೂನಿನಡಿ ಧಾರ್ಮಿಕ ಸ್ಥಳಗಳ ಸ್ವರೂಪ ಬದಲಾಯಿಸಬಾರದು ಎಂದು ಮುಸ್ಲಿಂ ಪರ ವಕೀಲರು ವಾದಿಸಿದ್ದರು. ಆದರೆ ಈ ಕಾನೂನಿನ ಅಂಶದ ವಾದವನ್ನು ಹೈಕೋರ್ಟ್ ತಿರಸ್ಕರಿಸಿದೆ.
ಕೃಷ್ಣ ಜನ್ಮಭೂಮಿ ದೇವಸ್ಥಾನದ ಪಕ್ಕದಲ್ಲಿರುವ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸಲು ಹಲವಾರು ಮೊಕದ್ದಮೆಗಳನ್ನು ಹೂಡಲಾಗಿತ್ತು. ಕೃಷ್ಣ ದೇವಸ್ಥಾನವನ್ನು ಕೆಡವಿದ ನಂತರ ಔರಂಗಜೇಬ್ ಕಾಲದ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ದಾವೆ ಹೂಡಲಾಗಿತ್ತು. ಇದನ್ನೂ ಓದಿ: SC, ST ಒಳ ಮೀಸಲಾತಿ ಕಾನೂನುಬದ್ಧ- ಸುಪ್ರೀಂ ಐತಿಹಾಸಿಕ ತೀರ್ಪು