ಬೆಂಗಳೂರು: ತೆರಿಗೆ ಹೊರೆ ಶ್ರೀಮಂತರ ಮೇಲಲ್ಲ, ಬಡವರ ಮೇಲೆ ಬೀಳುತ್ತಿದೆ ಎಂದು ಕೇಂದ್ರ ಸರ್ಕಾರದ ತೆರಿಗೆ ನೀತಿ ವಿರುದ್ಧ ಶಾಸಕ ಕೃಷ್ಣಬೈರೇಗೌಡ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸಭೆಯಲ್ಲಿ ಬೇಡಿಕೆಗಳ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಜಿಎಸ್‌ಟಿ ಪರಿಹಾರ ನಿಂತರೂ ತೆರಿಗೆ ಹಾಕುವುದು ಮುಂದುವರಿಯಲಿದೆ. ತಂಬಾಕು ವಸ್ತುಗಳ ಮೇಲೆ ಸಿನ್ ಗೂಡ್ಸ್ ಸೆಸ್ ಹಾಕುತ್ತಾರೆ. ಅದನ್ನು ಹಿಂದಕ್ಕೆ ಪಡೆಯಲು ಆಗುವುದಿಲ್ಲ ಎಂದು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಅವರದ್ದು ಸಮರ್ಥ ನಾಯಕತ್ವ: ರಾಜನಾಥ್ ಸಿಂಗ್ ಶ್ಲಾಘನೆ
Advertisement
Advertisement
ಜಿಎಸ್‌ಟಿ ಪರಿಹಾರ ಕೊಡುವುದಕ್ಕಾಗಿಯೇ ಸೆಸ್ ಹಾಕಲಾಗುತ್ತಿದೆ. ಪರಿಹಾರ ಕೊಡುವುದು ನಿಂತರೆ ಸೆಸ್ ಕೂಡ ನಿಲ್ಲಲಿದೆ ಎಂದು ಸಿಎಂ ಹೇಳುತ್ತಾರೆ. ಆದರೆ ವಾಸ್ತವವಾಗಿ ಜಿಎಸ್‌ಟಿ ಪರಿಹಾರ ನಿಂತರೂ ಸೆಸ್ ಮುಂದುವರಿಯುತ್ತದೆ.. ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಜಿಎಸ್‌ಟಿ ಪರಿಹಾರವನ್ನು ಮುಂದುವರಿಸಲು ಪತ್ರ ಬರೆದಿದ್ದಾರೆ. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ಜಿಎಸ್‌ಟಿ ಪರಿಹಾರ ಮುಂದುವರಿಸುವುದು ಅನುಮಾನವಾಗಿದೆ. ಕೇಂದ್ರದಿಂದ ತಮಗೆ ಬರುವ ಸಹಾಯಾನುದಾನ ಕಡಿಮೆ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement
ತೆರಿಗೆ ಹೊರೆ ಶ್ರೀಮಂತರ ಮೇಲೆ ಅಲ್ಲ, ಬಡವರ ಮೇಲೆ ಬೀಳುತ್ತಿದೆ. 2010ರಲ್ಲಿ ಕೇಂದ್ರ ಸರ್ಕಾರ ಎಲ್ಲ ಆದಾಯದಲ್ಲಿ ಸೆಸ್ ಪಾಲು ಶೇ.10.4 ಮಾತ್ರ ಇತ್ತು. ಆದರೆ ಈಗ ಸೆಸ್ ಪ್ರಮಾಣ ಶೇ.24 ಆಗಿದೆ. 15 ನೇ ಹಣಕಾಸು ಆಯೋಗದ ಪ್ರಕಾರ ಪೆಟ್ರೋಲ್ ಮೇಲಿನ ತೆರಿಗೆಯಲ್ಲಿ ಶೇ.59 ಕೇಂದ್ರದ ಪಾಲಾಗಿದ್ದರೆ, ಶೇ.41 ರಾಜ್ಯಗಳಿಗೆ ಕೊಡಬೇಕು. ಆದರೆ ಈಗ ಸೆಸ್ ಹಾಕುವುದರಿಂದ ರಾಜ್ಯಕ್ಕೆ ಶೇ.41 ಬದಲಿಗೆ ಕೇವಲ ಶೇ.29 ಮಾತ್ರ ಆದಾಯ ಬರುತ್ತಿದೆ. ತೆರಿಗೆಯನ್ನು ಸೆಸ್‌ಗೆ ಪರಿವರ್ತಿಸಿ ರಾಜ್ಯಗಳ ಪಾಲಿನ ಆದಾಯ ಕಡಿತವಾಗುತ್ತಿದೆ ಎಂದು ಬೇಸರಿಸಿದ್ದಾರೆ. ಇದನ್ನೂ ಓದಿ: ಪೆಗಾಸಸ್ ಕುತಂತ್ರಾಂಶ ಖರೀದಿಗೆ ಆಫರ್ ಬಂದಿತ್ತು, ನಾವು ರಿಜೆಕ್ಟ್ ಮಾಡಿದ್ದೆವು: ಕೇಂದ್ರಕ್ಕೆ ಚಾಟಿ ಬೀಸಿದ ಬ್ಯಾನರ್ಜಿ
Advertisement
ಇದೆಲ್ಲಾ ಉದ್ದೇಶಪೂರ್ವಕವಾಗಿ ಮಾಡಿದ ನಿರ್ಧಾರಗಳು. ಕಾರ್ಪೊರೇಟ್ ತೆರಿಗೆಯನ್ನು ಕಡಿಮೆ ಮಾಡಲಾಗಿದೆ. ಕೊರೊನಾ ಬಂದ ಬಳಿಕ ಒಟ್ಟು 4.60 ಕೋಟಿ ಮಂದಿ ಬಡತನಕ್ಕೆ ದೂಡಲ್ಪಟ್ಟಿದ್ದಾರೆ. ಕೇಂದ್ರ ಸರ್ಕಾರವೇ ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸುತ್ತಿದೆ ಎಂದು ಕೃಷ್ಣಬೈರೇಗೌಡ ಟೀಕಾಪ್ರಹಾರ ನಡೆಸಿದರು. ಆಗ ಮಧ್ಯಪ್ರವೇಶ ಮಾಡಿದ ಬಿಜೆಪಿ ಶಾಸಕ ವೀರಣ್ಣ ಚರಂತಿಮಠ, ಕೃಷ್ಣಬೈರೇಗೌಡರನ್ನು ಕೇಂದ್ರಕ್ಕೆ ಕಳುಹಿಸಿಬಿಡಿ. ಪಾಪ ಕೇಂದ್ರದ ಬಗ್ಗೆ ಜಾಸ್ತಿ ಮಾತಾಡುತ್ತಿದ್ದಾರೆ. ಅಲ್ಲಿ ಹೋಗಿ ಮಾತಾಡಲಿ ಎಂದು ಟಾಂಗ್ ನೀಡಿದ್ದಾರೆ.