ಬೆಂಗಳೂರು: ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಸಚಿವ ಲೋಕೋಪಯೋಗಿ ಸಚಿವ ಎಚ್‍ಡಿ ರೇವಣ್ಣ ಹಾಗೂ ಗ್ರಾಮೀಣಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ನಡುವೆ ಮಾತಿನ ಜಟಾಪಟಿ ನಡೆದಿದೆ.
ನೀರಿಗಾಗಿ ತಮಿಳುನಾಡು- ಕರ್ನಾಟಕ ಮಾದರಿಯಲ್ಲೇ ಸಚಿವರ ನಡುವೆ ಮಾತಿನ ಜಟಾಪಟಿ ನಡೆದ ಪ್ರಸಂಗ ಜಿಲ್ಲಾಧಿಕಾರಿಗಳ ಸಭೆಯಲ್ಲಿ ನಡೆಯಿತು. ಸಭೆಯ ವೇಳೆ ಹಾಸನದಿಂದ ಬಯಲುಸೀಮೆಗೆ ನೀರು ಹರಿಸಿದ್ದನ್ನು ಪ್ರಸ್ತಾಪಿಸಿದ ಸಚಿವ ರೇವಣ್ಣ, ಅಕ್ಕಪಕ್ಕದ ಜಿಲ್ಲೆಗೆ ನೀರು ಕೊಟ್ಟು ನಾವು ಭಿಕ್ಷುಕರಾಗಿದ್ದೇವೆ ಎಂದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಕೃಷ್ಣಭೈರೇಗೌಡ, ಬೇರೆ ಜಿಲ್ಲೆಗೆ ನೀರು ಕೊಡುವವರು ನೀವು. ಅದು ಹೇಗೆ ಭಿಕ್ಷುಕರಾಗುತ್ತಿರಿ ಎಂದು ಪ್ರಶ್ನಿಸಿದ್ದರು.
Advertisement
ಸಚಿವ ಕೃಷ್ಣಭೈರೇಗೌಡ ಅವರ ಮಾತಿಗೆ ತಿರುಗೇಟು ಕೊಟ್ಟ ರೇವಣ್ಣ, ನಮ್ಮಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಆ ಕಾರಣಕ್ಕಾಗಿ ಹೆಚ್ಚಿನ ಹಣ ನೀಡಿ ಎಂದು ಭಿಕ್ಷೆ ಬೇಡುತ್ತಿದ್ದೆವೆ ಎಂದು ತಮ್ಮ ಹೇಳಿಕೆಯನ್ನ ಸಮರ್ಥಿಸಿಕೊಂಡು.
Advertisement
Advertisement
ಸಿಎಂ ಗರಂ: ದೋಸ್ತಿ ಸರ್ಕಾರದ ಪ್ರತಿಯೊಂದು ವಿಚಾರದಲ್ಲಿ ಮೂಗು ತೂರಿಸ್ತಾರೆ ಎಂಬ ಟೀಕೆಗಳಿಗೆ ಸಚಿವ ರೇವಣ್ಣ ತಲೆ ಕೆಡಿಸಿಕೊಂಡಂತೆ ಕಾಣಿಸಲಿಲ್ಲ. ಇಂದಿನ ಡಿಸಿಗಳ ಸಭೆಯಲ್ಲಿಯೂ ಸಚಿವ ರೇವಣ್ಣ ಪ್ರತಿಯೊಂದು ವಿಚಾರದಲ್ಲಿ ಮಧ್ಯ ಪ್ರವೇಶ ಮಾಡುತ್ತಿದ್ದರು. ರೇವಣ್ಣ ಅವರಿಗೆ ಸಚಿವ ಜಿಟಿ ದೇವೇಗೌಡ ಬೇರೆ ಸಾಥ್ ನೀಡಿದ್ದರು. ಇದರಿಂದ ಸ್ವಲ್ಪ ಗರಂ ಆದ ಸಿಎಂ ಕುಮಾರಸ್ವಾಮಿ, ಬರೀ ಸಚಿವರು, ಪ್ರಿನ್ಸಿಪಲ್ ಸೆಕ್ರೆಟರಿಗಳೇ ಮಾತಾಡುತ್ತಿದ್ದರೆ ಹೇಗೆ. ನಾವು ನಾವೇ ಮಾತಾಡಿ ಮುಗಿಸುವುದಾದರೆ ಜಿಲ್ಲಾಧಿಕಾರಿಗಳನ್ನು ಕರೆಸಿದ್ದು ಏಕೆ ಎಂದು ಸಚಿವರನ್ನು ಪ್ರಶ್ನೆ ಮಾಡಿದರು.