ಬೆಂಗಳೂರು: ಮಹಾರಾಷ್ಟ್ರದಲ್ಲಿ (Maharashtra) ಸುರಿಯುತ್ತಿರುವ ಭಾರೀ ಮಳೆಗೆ (Mumbai Rain) ಬಾಗಲಕೋಟೆ ಜಿಲ್ಲೆಯ ಕೃಷ್ಣಾ (Krishna River), ಘಟಪ್ರಭಾ ಹಾಗೂ ಮಲಪ್ರಭಾ ನದಿಗಳು ಉಕ್ಕಿ ಹರಿಯುತ್ತಿದೆ.
ಈ ಹಿನ್ನೆಲೆ ಜಮಖಂಡಿ ಭಾಗದ ಸುಮಾರು ಹತ್ತಾರು ಹಳ್ಳಿಗಳಿಗೆ ಪ್ರವಾಹ ಆತಂಕ ಶುರುವಾಗಿದೆ. ಘಟಪ್ರಭಾ ನದಿಗೆ 53 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಿಲ್ಲೆಯ ಮುಧೋಳ, ರಬಕವಿ ಬನಹಟ್ಟಿ ತಾಲ್ಲೂಕುಗಳಲ್ಲಿ ಪ್ರವಾಹ (Flood) ಭೀತಿ ಶುರುವಾಗಿದೆ. ಇದನ್ನೂ ಓದಿ: ಮುಸ್ಲಿಂ ಯುವತಿಯರನ್ನ ಮದ್ವೆಯಾದ್ರೆ 5 ಲಕ್ಷ ರೂ. ಹೇಳಿಕೆ – ಶಾಸಕ ಯತ್ನಾಳ್ ವಿರುದ್ಧ FIR
ಹಾಗೇ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ.. ಬಾದಾಮಿ ತಾಲೂಕಿನ ನದಿದಡದ ಗೋವುನಕೊಪ್ಪ ಗ್ರಾಮದ ಕಿರು ಸೇತುವೆ ಮುಳುಗಡೆಯಾಗಿದ್ದು, ಪಕ್ಕದ ಗದಗ ಜಿಲ್ಲೆಯ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ. ನದಿದಡದ ಹೊಲಗದ್ದಗೆಗಳಿಗೆ ನುಗ್ಗಿದ ನೀರು, ಕಬ್ಬು, ಗೋವಿನಜೋಳ, ಜೋಳ, ಹೆಸರು ಬೆಳೆಗಳನ್ನ ಆಹುತಿ ಪಡೆದಿದೆ. ಇದನ್ನೂ ಓದಿ: ಸಾರ್ವಜನಿಕ ಹಿತದೃಷ್ಟಿಗೆ ಸೇವೆ ಸಲ್ಲಿಸುವ ನಮ್ಮ ಸಂಕಲ್ಪದ ಮೇಲೆ ಹೇಡಿತನದ ಕೃತ್ಯ: ಹಲ್ಲೆ ಬಗ್ಗೆ ದೆಹಲಿ ಸಿಎಂ ರಿಯಾಕ್ಷನ್
ಗೋಕಾಕ್ ಗ್ರಾಮಗಳಲ್ಲಿ ಪ್ರವಾಹ ಭೀತಿ
ಇನ್ನೂ ಘಟಪ್ರಭಾ ನದಿಯ ಅಬ್ಬರಕ್ಕೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಬಹುತೇಕ ಮನೆಗಳಿಗೆ ಘಟಪ್ರಭಾ ನದಿ ನೀರು ನುಗ್ಗಿದ್ದು, ಜನಜೀವನವನ್ನ ಅಸ್ತವ್ಯಸ್ತಗೊಳಿಸಿದೆ. ಇಲ್ಲಿನ ಜನರನ್ನು ಸ್ಥಳೀಯ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ನದಿಯ ಪ್ರವಾಹಕ್ಕೆ ಬೇಸತ್ತಿರುವ ಗ್ರಾಮಗಳ ಜನರು ಶಾಶ್ವತ ಪರಿಹಾರ ಕಲ್ಪಿಸುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.
ಇತ್ತ, ಘಟಪ್ರಭಾ ನದಿಯಿಂದ 2 ಕಿ.ಮೀ ದೂರದಲ್ಲಿರುವ. ಉದಗಟ್ಟಿ ಊದ್ದಮ್ಮ ದೇವಿ ದೇವಸ್ಥಾನವೂ ಜಲಾವೃತ್ತಗೊಂಡಿದೆ. ದೇವಸ್ಥಾನ ಮುಳುಗಡೆ ಭೀತಿ ಹಿನ್ನೆಲೆ ಬೆಲೆಬಾಳುವ ವಸ್ತುಗಳನ್ನ ಟ್ರಸ್ಟ್ ಕಮಿಟಿಯವರು ಸ್ಥಳಾಂತರ ಮಾಡಿದ್ದಾರೆ. ಇದನ್ನೂ ಓದಿ: ಮಳೆಯಿಂದ ನಷ್ಟ ಅನುಭವಿಸಿದ 2 ಕುಟುಂಬಗಳಿಗೆ ಆರ್ಥಿಕ ನೆರವು ನೀಡಿದ ಎಂ.ಬಿ ಪಾಟೀಲ್