ಬೆಂಗಳೂರು: ಸಾಧು ಸಂತರೊಂದಿಗೆ ಸೇರಿಕೊಂಡು ಕ್ರಾಂತಿವೀರ ಬ್ರಿಗೇಡ್ ಶುರು ಮಾಡಿದ್ದೇವೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ (KS Eshwarappa) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕ್ರಾಂತಿವೀರ ಬ್ರಿಗೇಡ್ (Krantiveera Brigade) ಉದ್ಘಾಟನೆ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಫೆ.4 ರಂದು ಬಸವನ ಬಾಗೇವಾಡಿಯಲ್ಲಿ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ ಆಗಲಿದೆ. ಇದು ಜಾತ್ಯಾತೀತವಾಗಿ ಮತ್ತು ಪಕ್ಷಾತೀತವಾ ಕಾರ್ಯಕ್ರಮ ನಡೆಯಲಿದೆ. ಹಿಂದೂ ಧರ್ಮ ರಕ್ಷಣೆ ಮಾಡಲು ಹಿಂದೂಗಳು ಒಂದಾಗಬೇಕು. ಹಿಂದೂಗಳು ಒಂದಾಗದಿದ್ದರೆ ಬಹಳ ಕಷ್ಟ. 1008 ಮಠಾಧೀಶರ ಪಾದಪೂಜೆಯೊಂದಿಗೆ ಉದ್ಘಾಟನೆ ಆಗಲಿದೆ. ಹಿಂದೂ ಧರ್ಮದ ಒಳಿತಿಗಾಗಿ ಕ್ರಾಂತಿವೀರ ಬ್ರಿಗೇಡ್ ಕೆಲಸ ಮಾಡಲಿದೆ ಎಂದರು.ಇದನ್ನೂ ಓದಿ: ರೂಲ್ಸ್‌ಗೆಲ್ಲಾ ಡೊಂಟ್ ಕೇರ್- ಮತ್ತೆ ಹೊಡೆದಾಡಿಕೊಂಡ ತ್ರಿವಿಕ್ರಮ್, ಉಗ್ರಂ ಮಂಜು
Advertisement
Advertisement
ಹಿಂದುಳಿದವರು ಮತ್ತು ದಲಿತರಿಗೆ ಬೆಂಬಲ ಸಮಾಜದಿಂದಲೂ, ಸರ್ಕಾರದಿಂದಲೂ ಸಿಗುತ್ತಿಲ್ಲ. ಯಾರಿಗೆ ಅನ್ಯಾಯ ಆಗಿದೆಯೋ ಅಲ್ಲಿ ಕ್ರಾಂತಿವೀರ ಬ್ರಿಗೇಡ್ ನಿಲ್ಲಲಿದೆ. ಸ್ವಾಮೀಜಿಗಳು ತೀರ್ಮಾನ ತೆಗೆದುಕೊಂಡಾಗ ನಾವು ಪೂರ್ಣ ಬೆಂಬಲ ನೀಡಿದ್ದೇವೆ. ಬಸವರಾಜ ಬಾಳೇಕಾಯಿ ಬ್ರಿಗೇಡ್ ಅಧ್ಯಕ್ಷರಾಗಿ, ಕೆ.ಇ. ಕಾಂತೇಶ್ ಕಾರ್ಯಾಧ್ಯಕ್ಷರಾಗಿ ಇರುತ್ತಾರೆ. ನಾನು ಮತ್ತು ಗೂಳಿ ಹಟ್ಟಿ ಶೇಖರ್ ಬ್ರಿಗೇಡ್‌ನ ಸಂಚಾಲಕರಾಗಿರುತ್ತೇವೆ. ಸಕಲ ಹಿಂದೂ ಸಮಾಜದ ರಕ್ಷಣೆಗೆ ಈ ಬ್ರಿಗೇಡ್ ಕೆಲಸ ಮಾಡಲಿದೆ. ಹಿಂದೆ ಬಿಜೆಪಿ ಸರ್ಕಾರದಲ್ಲಿ ಗೋಶಾಲೆ ಘೋಷಣೆ ಆಗಿತ್ತು. ಆದರೆ ಸಿದ್ದರಾಮಯ್ಯ ಸರ್ಕಾರ ಈ ಆದೇಶವನ್ನು ರದ್ದು ಮಾಡಿತು. ಸರ್ಕಾರದಲ್ಲಿ ಹಿಂದೂ ವಿರೋಧಿ ಕೆಲಸಗಳು ಆಗುತ್ತಿವೆ. ಧರ್ಮಸ್ಥಳದಲ್ಲಿ ನೇತ್ರಾವತಿ ನದಿಗೆ ತಲೆಕಡಿದ ಹಸು, ಹಸುವಿನ ರಕ್ತ ಬಂದು ಬೀಳುತ್ತಿದೆ. ವಕ್ಫ್ ಆಸ್ತಿ ಅಂತಾ ಪಹಣಿಯಲ್ಲಿ ಸೇರಿದ್ದನ್ನು ಒಂದಾದರೂ ವಾಪಸ್ ಪಡೆದಿದ್ದಾರಾ ಎಂದು ಪ್ರಶ್ನಿಸಿ ಕಿಡಿಕಾರಿದರು.
Advertisement
ಈ ಹಿಂದೆ ರಾಯಣ್ಣ ಬ್ರಿಗೇಡ್ ಅನ್ನು ಅಮಿತ್ ಶಾ ಅವರ ಮಾತು ಕೇಳಿ ನಿಲ್ಲಿಸಿದ್ದೆ. ಈಗ ಸಾಧು ಸಂತರ ಜೊತೆ ಸೇರಿಕೊಂಡು ಕ್ರಾಂತಿವೀರ ಬ್ರಿಗೇಡ್ ಶುರು ಮಾಡಿದ್ದೇವೆ. ಈಬಾರಿ ಯಾವುದೇ ಕಾರಣಕ್ಕೂ ನಿಲ್ಲಿಸೋದಿಲ್ಲ. ಯಾರು ಬೆಂಬಲಿಸಿದರೂ ಸ್ವಾಗತ ಮಾಡ್ತೇವೆ. ಹಿಂದೂ ಸಮಾಜದಲ್ಲಿರುವ ಎಲ್ಲ ಸಕಲ ಸಮಾಜದವರಿಗೆ ಈ ಬ್ರಿಗೇಡ್ ಬೆಂಬಲ ಕೊಡುತ್ತದೆ. ಹಿಂದೆ ರಾಯಣ್ಣ ಬ್ರಿಗೇಡ್ ಕಟ್ಟಿದ್ದಾಗ ಯಾವುದೇ ಸ್ವಾಮೀಜಿಗಳು ನೇತೃತ್ವ ತೆಗೆದುಕೊಂಡಿರಲಿಲ್ಲ. ದೊಡ್ಡವರ ಮಾತು ಕೇಳುವ ಅಭ್ಯಾಸ ಆಗ ನನಗೆ ಇತ್ತು, ಆದರೆ ಇವತ್ತು ಇಲ್ಲ. ಅಂದು ದೊಡ್ಡವರ ಮಾತು ಕೇಳಿ ನಿಲ್ಲಿಸಿದೆ. ಇಂದು ಯಾವುದೇ ಕಾರಣಕ್ಕೂ ಈ ಬ್ರಿಗೇಡ್ ನಿಲ್ಲುವುದಿಲ್ಲ. ಇದು ಯಾವುದೇ ಪಕ್ಷದ ಬ್ರಿಗೇಡ್ ಆಗಿಲ್ಲ.ಬಿಜೆಪಿಯಲ್ಲಿನ ಅಸಮಾಧಾನಿತರು, ಸಮಾಧಾನಿತರು ನಮ್ಮ ಜೊತೆ ಎನ್ನುವ ಪ್ರಶ್ನೆ ಇಲ್ಲ. ಫೆ.4 ರಂದು ಎಲ್ಲವೂ ವೇದಿಕೆ ಮೇಲೆ ಗೊತ್ತಾಗುತ್ತದೆ ಎಂದು ಹೇಳಿದರು.
Advertisement
ನಾನು ಲೋಕಸಭಾ ಚುನಾವಣೆಗೆ ನಿಲ್ಲುವ ವೇಳೆ ಯಾವ ಕಾರಣಕ್ಕೆ ನಿಲ್ಲುತ್ತಿದ್ದೇನೆ ಎಂದು ಹೇಳಿದ್ದೆ. ನಾನು ಯಾವ ವಿಚಾರ ಹೇಳಿದ್ದೇನೋ ಅದೇ ವಿಚಾರ ದೇವರ ದಯದಿಂದ ಇಂದು ಬಿಜೆಪಿಯಲ್ಲಿ ಚರ್ಚೆ ಆಗುತ್ತದೆ. ಇದು ತಾತ್ಕಾಲಿಕ ಗೊಂದಲ, ಬಗೆಹರಿಯುತ್ತದೆ. ನನ್ನ ಬಿಜೆಪಿ ಹೈಕಮಾಂಡ್ ಸೇರಿಸಲು ಯೋಚನೆ ಮಾಡಿದರೆ ಹೋಗಬೇಕಾ ಎಂದು ನಾನೂ ಯೋಚನೆ ಮಾಡಬೇಕು. ನಾನು ಬಿಜೆಪಿ ಬಿಟ್ಟು ಬೇರೆ ಪಕ್ಷ ಸೇರಲ್ಲ, ಬಿಜೆಪಿ ನನ್ನ ತಾಯಿ. ಬ್ರಿಗೇಡ್ ಬಿಡಿ ಎಂದು ಮೋದಿ ಯಾವುದೇ ಕಾರಣಕ್ಕೂ ಹೇಳಲ್ಲ. ಬಿಜೆಪಿಯಲ್ಲಿ ಹಿಂದುತ್ವ ಸಿದ್ಧಾಂತ ದೂರ ಹೋಗಿದೆ, ಹೊಂದಾಣಿಕೆ ರಾಜಕೀಯ ಹೆಚ್ಚಾಗಿದೆ. ಹೊಂದಾಣಿಕೆ ರಾಜಕೀಯ ಶುದ್ದೀಕರಣ ಆಗಲಿ ಎಂಬ ಆಸೆ ನನ್ನದು, ಅನೇಕ ಮುಖಂಡರ ಆಸೆಯೂ ಅದೇ ಆಗಿದೆ. ಬಿಜೆಪಿ ಶುದ್ದೀಕರಣ ಆಗುತ್ತದೆ, ಯಡಿಯೂರಪ್ಪ, ವಿಜಯೇಂದ್ರ ಬಗ್ಗೆ ವೈಯಕ್ತಿಕ ದ್ವೇಷ ಇಲ್ಲ. ಆದರೆ ಬಿಜೆಪಿಯೊಳಗಿನ ವ್ಯವಸ್ಥೆ ಸರಿಯಿಲ್ಲ, ಅದು ಬದಲಾಗಬೇಕು. ಶಿಕಾರಿಪುರದಲ್ಲಿ ನಮ್ಮ ಭಿಕ್ಷೆ ಎಂದು ಡಿಕೆಶಿ ಹೇಳಿದ್ದರು. ನಾನು ವರುಣಾದಲ್ಲಿ ನಿಂತಿದ್ದರೆ ಸಿದ್ದರಾಮಯ್ಯ ಕಥೆ ಏನಾಗುತ್ತಿತ್ತು ಎಂದು ವಿಜಯೇಂದ್ರ ಹೇಳಿದ್ದಾರೆ. ಅಂದರೆ ನಾನೇ ಗೆಲ್ಲಿಸಿದೆ ಅಂತಾ ತಾನೇ ಅರ್ಥ? ಇದು ಹೊಂದಾಣಿಕೆ ರಾಜಕೀಯ ಅಲ್ಲದೇ ಇನ್ನೇನು? ರಾಜಕೀಯ ಬೆತ್ತಲೆ ಇದು ಎಂದರು.ಇದನ್ನೂ ಓದಿ: ನನ್ನನ್ನು ಟಾರ್ಗೆಟ್ ಮಾಡುವುದು ಮುಖ್ಯವಲ್ಲ, ಗುತ್ತಿಗೆದಾರರ ಬಾಕಿ ಪಾವತಿಸಿ – ಸಿಎಂಗೆ ಹೆಚ್‌ಡಿಕೆ ತಿರುಗೇಟು