ಕೋಲಾರ : ನನ್ನನ್ನ ತುಂಬಾ ಜನರು ಜೈಲಿಗೆ ಕಳುಹಿಸಲು ಸಿದ್ದರಿದ್ದಾರೆ ಆದ್ರೆ ಅವರಿಗೆ ಗೊತ್ತಿಲ್ಲ ನಾನು ನಮ್ಮ ತಂದೆ ತಾಯಿಗೆ 8 ನೇ ಮಗ ಎಂದು, ಶ್ರೀಕೃಷ್ಣ ಕೂಡ ಅವರ ತಂದೆ ತಾಯಿಗೆ 8 ನೇ ಮಗ ಆತ ಹುಟ್ಟಿದ್ದು ಜೈಲಿನಲ್ಲೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಡಿಸಿಸಿ ಬ್ಯಾಂಕ್ ಸಾಲ ವಿತರಣೆ ಕಾರ್ಯಕ್ರಮದಲ್ಲಿ ತೆಲುಗು ಬಾಷೆಯಲ್ಲಿ ತನ್ನ ವಿರೋಧಿಗಳಿಗೆ ಟಾಂಗ್ ಕೊಟ್ಟರು.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಮಹಿಳಾ ಕಾಲೇಜು ಆವರಣದಲ್ಲಿ ಸುಮಾರು 300 ಸ್ತ್ರೀ ಶಕ್ತಿ ಸಹಾಯ ಸಂಘಗಳಿಗೆ ಶೂನ್ಯ ಬಡ್ಡಿ ದರದಲ್ಲಿ 23 ಕೋಟಿ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದುದ್ದಕ್ಕೂ ತೆಲುಗು ಬಾಷೆಯಲ್ಲಿ ವಿರೋಧಿಗಳಿಗೆ ಟಾಂಗ್ ಕೊಟ್ಟರು, ಇತ್ತೀಚೆಗೆ ಆರೋಗ್ಯ ಸಚಿವ ಸುಧಾಕರ್ ರಮೇಶ್ ಕುಮಾರ್ ಅವರನ್ನ ಜೈಲಿಗೆ ಕಳುಹಿಸುತ್ತೇನೆ ಎಂದು ಹೇಳಿದ್ದರು ಎಂದು ನೇರವಾಗಿ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಅಪ್ಪು ಸಮಾಧಿ ಬಳಿ ನೃತ್ಯ ನಮನ ಸಲ್ಲಿಸಿದ ಪುಟಾಣಿಗಳು
Advertisement
Advertisement
ಡಿಸಿಸಿ ಬ್ಯಾಂಕ್ ರೈತರು ಹಾಗೂ ಮಹಿಳೆಯರಿಗೆ ದೇವಸ್ಥಾನ ಇದ್ದಂತೆ, ಅದನ್ನ ಹಾಳು ಮಾಡಲು ಸಾಕಷ್ಟು ಜನ ಕಾಯುತ್ತಿದ್ದಾರೆ 10 ವರ್ಷಗಳ ಕಾಲ ಡಿಸಿಸಿ ಬ್ಯಾಂಕ್ ಅಸ್ಥಿತ್ವ ಕಳೆದುಕೊಂಡಿತ್ತು, ಆಗ ಯಾರೂ ಸಹ ಮಾತನಾಡಿಲ್ಲ, ಆದರೆ ಈಗ ಎಲ್ಲರೂ ಬ್ಯಾಂಕ್ ವಿರುದ್ದ ಮಾತನಾಡುತ್ತಿದ್ದಾರೆ. ಇನ್ನೂ ಕಾರ್ಯಕ್ರಮದಲ್ಲಿ ತನ್ನ ಪತ್ನಿಯನ್ನ ನೆನೆದು ಭಾವುಕರಾದ ರಮೇಶ್ ಕುಮಾರ್, ಪತ್ನಿಗೆ ಅನಾರೋಗ್ಯ ಹಿನ್ನೆಲೆಯಲ್ಲೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಸರ್ಜರಿಗೆ ಆಸ್ಪತ್ರೆಗೆ ತೆರಳುವ ವೇಳೆಯೂ ಜನರಿಗೆ ಒಳ್ಳೆಯದನ್ನ ಮಾಡಿ ಎಂದು ಕೈ ಹಿಡಿದುಕೊಂಡಾಕೆ ತನ್ನ ಸರ್ವಸ್ವವನ್ನ ಆಕೆ ನನಗಾಗಿ ಮುಡುಪಿಟ್ಟಿದ್ದಾಳೆ. ಆಕೆಗಾಗಿ ನಾನು ಏನೂ ಮಾಡಿಲ್ಲ, ಆಕೆ ನನ್ನ ಮಾವನ ಮಗಳು ಒಂದು ದಿನವೂ ನನಗೆ ಚಿನ್ನ, ಬಟ್ಟೆ ಬೇಕು ಎಂದು ಕೇಳಿಲ್ಲ ಭಾವುಕರಾಗಿ ಕಾರ್ಯಕ್ರಮದಲ್ಲಿದ್ದ ಹೆಣ್ಣು ಮಕ್ಕಳ ಗಮನ ಸೆಳೆದರು. ಇದನ್ನೂ ಓದಿ: ಬ್ಲೇಡ್ ನಿಂದ ಅಪ್ಪು ಎಂದು ಕೈ ಮೇಲೆ ಕುಯ್ದುಕೊಂಡ ವಿದ್ಯಾರ್ಥಿನಿ
Advertisement
Advertisement
ಕಾರ್ಯಕ್ರಮದ ಬಳಿ ಮಾತನಾಡಿದ ಅವರು, ಸಿದ್ದರಾಮಯ್ಯ ಏನೇ ಹೇಳಿಕೆ ನೀಡಿದ್ದರು ಅದು ಸರಿಯಾಗಿಯೇ ಇರುತ್ತೆ ಎನ್ನುವ ಮೂಲಕ ಸಿದ್ದರಾಮಯ್ಯ ರನ್ನ ರಮೇಶ್ ಕುಮಾರ್ ಸಮರ್ಥಿಸಿಕೊಂಡರು. ಅವರ ಹೇಳಿಕೆ ವಿರುದ್ದವಾಗಿ ಬಿಜೆಪಿಯವರು ಪ್ರತಿಭಟನೆ ಮಾಡುವುದು ಸಹಜ, ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ಪ್ರತಿಭಟನೆ ಮಾಡ್ತಿದೆ ಎಂದರೆ, ಅವರ ಹೇಳಿಕೆ ಸರಿಯಾಗಿಯೇ ಇರುತ್ತೆ ಎಂದು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಚಪ್ಪಲಿ ತೆಗೆದು ಅಭಿಮಾನಿಗಳಿಂದ ಅಪ್ಪುಗೆ ಅಂತಿಮ ನಮನ- ಬಿಬಿಎಂಪಿಯಿಂದ ರಾಶಿ ರಾಶಿ ಸ್ಲಿಪ್ಪರ್ಸ್ ತೆರವು