ಚಿಕ್ಕಬಳ್ಳಾಪುರ: ಪೆಟ್ರೋಲ್-ಡೀಸೆಲ್ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ, ಇಂದು ಕಾಂಗ್ರೆಸ್ ಪಕ್ಷದ ವತಿಯಿಂದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಸಚಿವ ಸುಧಾಕರ್ ಸ್ವಗ್ರಾಮದಲ್ಲಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸಿ ಶಕ್ತಿ ನಡೆಸುವುದರ ಮೂಲಕ ಸಚಿವ ಸುಧಾಕರ್ ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದರು.
ಪೇರೇಸಂದ್ರ ಗ್ರಾಮದಲ್ಲಿ ಸಾವಿರಾರು ಮಂದಿಯೊಂದಿಗೆ ಮೆರವಣಿಗೆ ನಡೆಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಸಚಿವ ಸುಧಾಕರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಕೆಪಿಸಿಸಿ ಸದಸ್ಯ ವಿನಯ್ ಶ್ಯಾಂ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಕಾರ್ಯಕ್ರಮದಲ್ಲಿಮ ರಮೇಶ್ ಕುಮಾರ್, ಕೃಷ್ಣಬೈರೇಗೌಡ, ಶಿವಶಂಕರರೆಡ್ಡಿ, ವಿ.ಮುನಿಯಪ್ಪ, ಸುಬ್ಬಾರೆಡ್ಡಿ ಭಾಗವಹಿಸಿದ್ದರು. ಇದನ್ನೂ ಓದಿ: ಸಿದ್ದರಾಮಯ್ಯನ ಕಾಲಿಗೆ ಹಗ್ಗ ಕಟ್ಟಿ ಎಳೆದುಕೊಂಡು ಹೋಗ್ತಿದ್ರು: ಸದಾನಂದಗೌಡ ತಿರುಗೇಟು
Advertisement
Advertisement
ನಾನು ವೈಯುಕ್ತಿಕವಾಗಿ ಯಾರ ಬಗ್ಗೆಯೂ ಮಾತನಾಡಲ್ಲ, ಅಂತಲೇ ಭಾಷಣ ಆರಂಭಿಸಿದರು. ಈ ಸರ್ಕಾರ ದಪ್ಪ ಎಮ್ಮೆ ಚರ್ಮದ ಸರ್ಕಾರ ಇದ್ದಂತೆ. ಕೊರೊನಾ ಬಂದಾಗ ಬೆಡ್ ಸಿಗಲಿಲ್ವೇ? ಆಕ್ಸಿಜನ್ ಸಿಗಲಿಲ್ವೇ? ಸರಿಯಾಗಿ ಔಷಧಿ ಕೊಡಲಿಲ್ವೇ? ನಾವು ರಾಜಕಾರಣಿಗಳು ಯಾರೂ ಸಾಯಲಿಲ್ಲ. ಸತ್ತ ಕುಟುಂಬಗಳಲ್ಲಿ ಇನ್ನೂ ನೋವು ಮಾಸಿಲ್ಲ ಎಂದರು.
Advertisement
Advertisement
ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ 31 ಜನ ಸತ್ತರೆ. ಮೂರೇ ಜನ ಸತ್ತರು ಅಂತೀರಾ? ನಾವು ನಮ್ಮ ಮನೆಯಲ್ಲಿ ಸಾಕಿದ ನಾಯಿ ಕುರಿ ಸತ್ತರೆ ನೋವಾಗುತ್ತದೆ. ಆ ದಿನ ಊಟ ಮಾಡಲ್ಲ. ಆದರೆ ನಮಗೆ ವೋಟು ಹಾಕಿದ ಜನ 31 ಮಂದಿ ಸತ್ತರೆನಿಮಗೆ ಭಾರತರತ್ನ ಬಿರುದು ಕೊಡಬೇಕಾ? ನಮ್ಮ ಗೂಟದ ಕಾರುಗಳು, ಪೆÇಲೀಸ್ ಸೆಕ್ಯೂರಿಟಿ ಎಲ್ಲವೂ ಕ್ಷಣಿಕ, ನಮ್ಮ ಅಹಂ ಹಮ್ಮು ಬಿಮ್ಮು ಮೂರು ಕಾಸಿಗೆ ಕೆಲಸಕ್ಕೆ ಬರಲ್ಲ. ಬಿಜೆಪಿ ಹುಟ್ಟಿದ್ದು ಸ್ವಾತಂತ್ರ್ಯ ಬಂದ ನಂತರ. ಸ್ವಾತಂತ್ರ್ಯ ಬಂದ ಮೇಲೆ ಹುಟ್ಟಿದ ನೀವು ಕಾಂಗ್ರೆಸ್ ಏನು ಮಾಡಿಲ್ಲ ಅಂತೀರಾ? ಇಂದಿರಾ ಗಾಂಧಿ ಈ ದೇಶಕ್ಕಾಗಿ ಪ್ರಾಣ ಬಿಟ್ಟರು. ಆದರೆ ಈಗ ಬಿಜೆಪಿಯವರು ದೇಶ ಉದ್ದಾರ ಮಾಡೋಕೆ ಬಂದಿದ್ದಾರಂತೆ, ಜನ ಒಂದು ಸಲ ಯಾಮಾರಬಹುದು, ಯಾವಾಗಲೂ ಯಾಮಾರಿಸೋಕೆ ಆಗಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ರೌಡಿಗಳಿಗೆ ಕಾನೂನಿನ ಭಯವಿಲ್ಲದೆ ಅಟ್ಟಹಾಸ ತೋರಿಸುತ್ತಿದ್ದಾರೆ: ಯು.ಟಿ.ಖಾದರ್
ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಳುಗಲ್ಲ. ನಾನು ಮಾನಮರ್ಯಾದೆ ಇಲ್ಲದವರ ಬಗ್ಗೆ ಮಾತನಾಡಲ್ಲ. ಅದು ನನ್ನ ಸ್ವಭಾವ ಅಂತಲೇ ಸಚಿವ ಸುಧಾಕರ್‍ಗೆ ಪರೋಕ್ಷವಾಗಿ ಟಾಂಗ್ ನೀಡಿದರು. ವಸ್ತುಗಳನ್ನ ಹರಾಜು ಮಾಡಿದಂತೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ಸ್ಥಾನಗಳನ್ನ ಹರಾಜು ಮಾಡಬೇಡಿ, ಇದು ದೇಶದ ಮಹಾನ್ ನಾಯಕರಿಗೆ ಅವಮಾನ ಮಾಡಿದಂತೆ. ನಿಮ್ಮ ಕಾಲಿಗೆ ಬಿದ್ದು ನಮಸ್ಕಾರ ಮಾಡುತ್ತೇನೆ, ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಡಿ ಎಂದು ಮನವಿ ಮಾಡಿಕೊಂಡರು.