ಬೆಂಗಳೂರು: ಬಹುನೀರಿಕ್ಷಿತ ಕೆ.ಆರ್.ಪುರಂ (KR Puram) ಮತ್ತು ವೈಟ್‍ಫಿಲ್ಡ್ (Whitefield) ನಡುವಿನ ಮೆಟ್ರೋ ಸಂಚಾರ ಸಾರ್ವಜನಿಕ ಮುಕ್ತವಾಗುವ ಕಾಲ ಸನಿಹವಾಗಿದೆ. ಕೇವಲ ಬೆರೆಳೆಣಿಕೆ ದಿನದಲ್ಲೇ ಈ ಮಾರ್ಗದ ಸಂಚಾರ ಮುಕ್ತವಾಗುವ ಸಾಧ್ಯತೆ ಇದ್ದು, ಈ ಬಗ್ಗೆ ಖುದ್ದು ಬಿಎಂಆರ್‌ಸಿಎಲ್ (BMRCL) ಮಾಹಿತಿ ನೀಡಿದೆ.
12.75 ಕಿ.ಮೀ ಉದ್ದದ ಈ ಮಾರ್ಗದಲ್ಲಿ ಈಗಾಗಲೇ ಬಹುತೇಕ ಬಿಎಂಆರ್‌ಸಿಎಲ್‍ನ ಎಲ್ಲಾ ಕೆಲಸಗಳು ಮುಕ್ತಾಯವಾಗಿದೆ. ಪ್ರಾಯೋಗಿಕ ಸಂಚಾರಗಳು ಕೂಡ ಈಗಾಗಲೇ ಮೂರು ಹಂತದಲ್ಲಿ ಮುಕ್ತಾಯವಾಗಿದೆ. ಕಳೆದ ಎರಡು ದಿನದ ಹಿಂದಷ್ಟೇ ಈ ಮಾರ್ಗವನ್ನು 80 ಕಿ.ಮೀ ವೇಗದಲ್ಲಿ ಕೇವಲ 12 ನಿಮಿಷದಲ್ಲಿ ತಲುಪುವ ಮೂಲಕ ಯಶಸ್ವಿಯಾಗಿ ಮೂರನೇ ಪ್ರಾಯೋಗಿಕ ಓಡಾಟ ಪೂರ್ಣಗೊಳಿಸಿತ್ತು.
Advertisement
Advertisement
ಅದರ ಬೆನ್ನಲ್ಲೆ ಕೊನೆಯ ಹಂತದ ಪ್ರಯೋಗಿಕ ಪರೀಕ್ಷೆ ಕೂಡ ಇದೇ 11ರಂದು ನಡೆಯಲಿದ್ದು, ಈ ವೇಳೆ 90 ಕಿ.ಮೀ ವೇಗದಲ್ಲಿ 5 ಟ್ರೈನ್‍ಗಳು ಸಂಚಾರ ಮಾಡಲಿವೆ. ಈ ವೇಳೆ ಯಾವುದೇ ಅಡಚಣೆ ಇಲ್ಲದೆ ಪ್ರಾಯೋಗಿಕ ಓಡಾಟ ಮುಗಿದರೆ ಮೆಟ್ರೋ ಮಾರ್ಚ್‍ಗೆ ಓಪನ್ ಮಾಡಲು ಬಿಎಂಆರ್‍ಸಿಎಲ್‍ನಿಂದ ಆಗಬೇಕಾದ ಎಲ್ಲ ಕೆಲಸಗಳು ಮುಗಿದಂತಾಗಲಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಸ್ಪರ್ಧೆ ಕೋಲಾರದಿಂದ ಖಚಿತ, ವರುಣಾ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿː ಯತೀಂದ್ರ
Advertisement
ಈಗಾಗಲೇ ಈ ಮಾರ್ಗದಲ್ಲಿ ಓಡಾಟ ಮಾಡಲಿರುವ 6 ರೈಲುಗಳನ್ನು ವೈಟ್ ಫೀಲ್ಡ್ ಡಿಪೋಗೆ ಸ್ಥಳಾಂತರಿಸಲಾಗಿದೆ. ಅಲ್ಲದೇ ಈ ಮಾರ್ಗದ ಸಿಗ್ನಲಿಂಗ್ ಕೆಲಸಗಳು ಸೇರಿದಂತೆ ಎಲ್ಲಾ ಕಾರ್ಯಗಳು ಮುಕ್ತಾಯವಾಗಿದೆ. ಇದೇ 20 ಅಥವಾ 21ರಂದು ಮೆಟ್ರೋ ರೈಲು ಸುರಕ್ಷಿತಾ ಆಯುಕ್ತರು ಹೊಸ ಮಾರ್ಗದ ಅಂತಿಮ ಪರೀಶೀಲನೆ ನಡೆಸಲಿದ್ದಾರೆ.
Advertisement
ಇಲ್ಲಿಗೆ ಬಿಎಂಆರ್‌ಸಿಎಲ್ ಕೆಲಸಗಳು ಬಹುತೇಕ ಮುಗಿಯಲಿದ್ದು, ಬಳಿಕ ಸರ್ಕಾರಕ್ಕೆ ಸಂಪೂರ್ಣ ವರದಿ ಸಲ್ಲಿಕೆ ಮಾಡಲಿದೆ. ಆ ನಂತರ ಸರ್ಕಾರ ಈ ಮಾರ್ಗದ ಉದ್ಘಾಟನೆ ಯಾರಿಂದ, ಯಾವಾಗ ಅನ್ನೋದನ್ನು ನಿರ್ಧಾರ ಮಾಡಲಿದೆ. ಏಪ್ರಿಲ್ ಬಳಿಕ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆಯಿದ್ದು, ಮಾರ್ಚ್ ಮಧ್ಯವಾರದೊಳಗೆ ಸರ್ಕಾರ ಕೂಡ ಉದ್ಘಾಟನೆ ಮಾಡುವ ಸಾಧ್ಯತೆಯಿದೆ. ಇದನ್ನೂ ಓದಿ: Earthquakeː ಟರ್ಕಿಯಲ್ಲಿ ಸಿಲುಕಿರೋದು ಬೆಂಗಳೂರು ಟೆಕ್ಕಿಯಲ್ಲ- ಕನ್ನಡಿಗರ ರಕ್ಷಣೆಗೆ ಮುಂದಾದ ಸರ್ಕಾರ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k