– ಪಿವಿಆರ್ನಲ್ಲೂ ಕನ್ನಡ ಸಿನಿಮಾಗೆ ಒಳ್ಳೆಯ ಅವಕಾಶ ಕೊಡಿ
ಬೆಂಗಳೂರು: ಹೈದರಾಬಾದ್‍ನ ರಾಮೋಜಿ ರಾವ್ ಫಿಲ್ಮ್ ಸಿಟಿಯಂತೆ ರಾಜ್ಯದಲ್ಲೂ ಫಿಲ್ಮ್ ಸಿಟಿ ಆದರೆ ಒಳ್ಳೆಯದು ಎಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹೇಳಿದ್ದಾರೆ.
ಕೆ.ಆರ್.ಪುರಂ ಬಳಿಯ ಒರಾಯನ್ ಅಪ್ ಟೌನ್ ಮಾಲ್‍ನಲ್ಲಿ ಪಿವಿಆರ್ನ ನೂರನೇ ಸ್ಕ್ರೀನ್ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಫಿಲ್ಮ್ ಸಿಟಿ ನಿರ್ಮಾಣಕ್ಕಾಗಿ ಬಜೆಟ್‍ನಲ್ಲಿ 500 ಕೋಟಿ ರೂ. ಘೋಷಣೆ ಖುಷಿ ತಂದಿದೆ. ರಾಮೋಜಿ ರಾವ್ ಫಿಲ್ಮ್ ಸಿಟಿಯಂತೆ ಇಲ್ಲೂ ಫಿಲ್ಮ್ ಸಿಟಿ ಆದರೆ ಚೆನ್ನಾಗಿರುತ್ತೆ. ಇದರಿಂದ ಸಿನಿಮಾ ನಿರ್ಮಾಣಕ್ಕೆ ಅನುಕೂಲವಾಗಲಿದೆ. ಜೊತೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯಕ್ಕೆ ಬರುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಮನವಿಯಂತೆ ಚಿತ್ರನಗರಿಗೆ 500 ಕೋಟಿ ರೂ. ಅನುದಾನ- ಸಿಎಂಗೆ ಅಭಿನಂದನೆ ಸಲ್ಲಿಸಿದ ಯಶ್
Advertisement
Advertisement
ಫಿಲ್ಮ್ ಸಿಟಿ ಎಲ್ಲಿ ನಿರ್ಮಾಣವಾದ್ರೆ ಉತ್ತಮ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವ ಸ್ಥಳದಲ್ಲಿ ಆದರೂ ಖುಷಿನೇ. ನಮ್ಮಗೆ ಒಳ್ಳೆಯ ವ್ಯವಸ್ಥೆ ಸಿಗಲಿದೆ. ಬೆಂಗಳೂರಿನಲ್ಲೇ ಆಗಬೇಕು, ಮೈಸೂರಿನಲ್ಲೇ ಆಗಬೇಕು ಅನ್ನೋದು ಏನು ಇಲ್ಲ ಎಂದು ತಿಳಿಸಿದರು.
Advertisement
ಪಿವಿಆರ್ನಲ್ಲೂ ಕನ್ನಡ ಸಿನಿಮಾಗೆ ಒಳ್ಳೆಯ ಅವಕಾಶ ಕೊಡಿ. ನನಗೆ ಥಿಯೇಟರ್‌ನಲ್ಲಿ ಸಿನಿಮಾ ನೋಡುವುಕ್ಕೆ ತುಂಬಾ ಖುಷಿಯಾಗುತ್ತದೆ. ಅಲ್ಲಿ ಜನಗಳ ನಡುವೆ ಸಿನಿಮಾ ನೋಡುವ ಖುಷಿಯೇ ಬೇರೆ. ಅಪ್ಪಾಜಿ ಡಾ.ರಾಜ್‍ಕುಮಾರ್ ಮತ್ತು ನಟ ರಜನಿಕಾಂತ್ ಸರ್ ಜೊತೆಗೆ ಪಿವಿಆರ್ನಲ್ಲಿ ಜೋಗಿ ಸಿನಿಮಾ ವೀಕ್ಷಿಸಿದ ನೆನಪಿದೆ ಎಂದರು. ಇದೇ ವೇಳೆ ಪಿವಿಆರ್ನಲ್ಲಿ ಕನ್ನಡ ಸಿನಿಮಾಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಅಂತ ಪುನೀತ್ ಮನವಿ ಮಾಡಿಕೊಂಡರು.