ಆನೇಕಲ್: ಕೆ.ಆರ್.ಪುರಂ ಸಂಚಾರ ಪೊಲೀಸರು ಪುಂಡರನ್ನು ಹಿಡಿಯಲು ಮತ್ತೆ ಫೀಲ್ಡಿಗಿಳಿದಿದ್ದು, ವೀಲಿಂಗ್ ಮಾಡುತ್ತಿದ್ದ ಯುವಕರನ್ನು ಬಂಧಿಸಲಾಗಿದೆ.
ಎರಡು ವಾರಗಳಲ್ಲಿ ಸುಮಾರು 6 ವೀಲಿಂಗ್ ಪ್ರಕರಣ ದಾಖಲಿಸಿಕೊಂಡಿದ್ದ ಕೆ.ಆರ್.ಪುರಂ ಸಂಚಾರ ಪೊಲೀಸರು, ಇಂದು ಮತ್ತೆ 3 ಪ್ರಕರಣಗಳನ್ನು ಪತ್ತೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಮಕ್ಕಳಿಗಾಗಿ ಮಿಡಿದ ಹೃದಯ – ರಕ್ತದಾನ ಮಾಡಿ ಮಾನವೀಯತೆ ಮೆರೆದ ಪೊಲೀಸರು
Advertisement
Advertisement
ಕೆ.ಆರ್.ಪುರಂ ಸಂಚಾರಿ ಪೊಲೀಸ್ ಠಾಣೆಯ ಇನ್ಪೆಕ್ಟರ್ ಮಹಮದ್.ಎಂ.ಎ ಅವರ ಠಾಣಾ ವ್ಯಾಪ್ತಿಯಲ್ಲಿ ವೀಲಿಂಗ್ ಸ್ಕ್ವಾಡ್ ತಯಾರು ಮಾಡಿ ಕಾರ್ಯಾಚರಣೆ ಕೈಗೊಂಡಿದ್ದು, ವೀಲಿಂಗ್ ನಿರತರಾಗಿದ್ದ 3 ದ್ವಿಚಕ್ರ ವಾಹನಗಳನ್ನು ಮತ್ತು ಯುವಕರನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ವ್ಯಾಕ್ಸಿನ್ ಪಡೆದ ನಂತರ ಮಗನ ಸಾವು – ಪೋಷಕರ ಆರೋಪ
Advertisement
ಹಳೆ ಮದ್ರಾಸ್ ರಸ್ತೆ, ಟಿಸಿ ಪಾಳ್ಯ ಮತ್ತು ಅಯ್ಯಪ್ಪನಗರ ಮುಖ್ಯರಸ್ತೆಗಳಲ್ಲಿ ವಾಹನಗಳನ್ನು ಮತ್ತು ವಾಹನ ಸವಾರರನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ವಾಹನಗಳ ಸೈಲೆನ್ಸರ್ ಗಳನ್ನು ಹೆಚ್ಚು ಶಬ್ದ ಬರುವ ರೀತಿಯಲ್ಲಿ ವಿಶೇಷವಾಗಿ ವಿನ್ಯಾಸ ಮಾಡಿಕೊಂಡಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಬಿಜೆಪಿ ಈ ದೇಶದ ಬಗ್ಗೆ ಚಿಂತನೆ ಮಾಡುವ ಏಕೈಕ ಪಕ್ಷ: ಎ.ನಾರಾಯಣಸ್ವಾಮಿ
Advertisement
ವಾಹನ ಸವಾರರಾದ ಸಾಗರ್, ಫೈರೋಜ್, ಸಂಜಯ್ ಗೌಡ ಮೊದಲಾದವರನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ. ಇನ್ನೂ ಈ ಕಾರ್ಯಾಚರಣೆಯಲ್ಲಿ ಕೆ.ಆರ್.ಪುರಂ ಸಂಚಾರ ಠಾಣೆಯ ಪಿಎಸ್‍ಐ ಸಯ್ಯದ್ ನಿಜಾಮುದ್ದೀನ್, ಅಶ್ವಥ್, ಪ್ರವೀಣ್ ಹಾಗೂ ಸಿಬ್ಬಂದಿ ನಂದೀಶ್, ಪ್ರಸನ್ನ, ಸುನಿಲ್ ಮೊದಲಾದವರು ಭಾಗವಹಿಸಿದ್ದರು.