ಮೈಸೂರು: ಮಂಡ್ಯ ತಹಶೀಲ್ದಾರ್ ಮಹೇಶ್ ಚಂದ್ರರವರನ್ನು ಅಪಹರಣ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಕೆ.ಆರ್.ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಗಸ್ಟ್ 3 ರಂದು ನಿಗೂಢವಾಗಿ ನಾಪತ್ತೆಯಾಗಿ ಬಳಿಕ ಪತ್ತೆಯಾಗಿದ್ದ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ತಹಶೀಲ್ದಾರ ಮಹೇಶ್ ಚಂದ್ರರವರ ಅಪಹರಣವನ್ನು ಭೇದಿಸಿರುವ ಕೆ.ಆರ್.ನಗರ ಪೊಲೀಸರು ಘಟನೆ ಸಂಬಂಧ ನಾಲ್ವರು ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
Advertisement
ಕೆ.ಆರ್.ಪೇಟೆಯ ರೈಲ್ವೇ ಇಲಾಖೆಯ ಸ್ಟೋರ್ ಕೀಪರ್ ಯೋಗೇಂದ್ರ.ಕೆ.ಎನ್ (31), ಖಾಸಗಿ ಹೋಟೆಲ್ ಕ್ಯಾಪ್ಟನ್ ಸೋಮಶೇಖರ್.ಎಸ್.ಎನ್ (31), ಖಾಸಗಿ ಕಾರು ಚಾಲಕ ಚಂದು.ಎಸ್.ಎಸ್ (24) ಹಾಗೂ ಮೈಸೂರಿನ ಬೃಂದಾವನ ಬಡಾವಣೆಯ ದೀಪು.ಎಸ್.ಎನ್ (28) ಬಂಧಿತ ಆರೋಪಿಗಳಾಗಿದ್ದಾರೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಕೆ.ಆರ್.ಪೇಟೆಯ ತಹಶೀಲ್ದಾರ್ ಅಪಹರಣ?
Advertisement
ಇತ್ತೀಚೆಗಷ್ಟೇ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಗೆ ವರ್ಗಾವಣೆಯಾಗಿದ್ದ ಮಹೇಶ್ ಚಂದ್ರರವರನ್ನು ಆರೋಪಿಗಳು, ಕೆ.ಆರ್.ನಗರದ ಹೊಸ ಅಗ್ರಹಾರದ ಬಳಿ ಅಪಹರಿಸಿದ್ದರು. ತಹಶೀಲ್ದಾರ್ ರವರನ್ನು ಒತ್ತೆಯಾಳಾಗಿಟ್ಟುಕೊಂಡು, ರೈತರ ಸಂಪೂರ್ಣ ಸಾಲಮನ್ನಾ ಮಾಡುವಂತೆ ಸರ್ಕಾರಕ್ಕೆ ಒತ್ತಡ ಹೇರುವ ಉದ್ದೇಶವನ್ನು ಹೊಂದಿದ್ದಾಗಿ ವಿಚಾರಣೆ ವೇಳೆ ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಇದನ್ನೂ ಓದಿ: ನಾಪತ್ತೆಯಾಗಿದ್ದ ಕೆ.ಆರ್.ಪೇಟೆಯ ತಹಶೀಲ್ದಾರ್ ಸಂಜೆ ವೇಳೆ ಪತ್ತೆ!
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv